ಬಡವರಲ್ಲೂ ಮಧುಮೇಹ ರೋಗದಲ್ಲಿ ದಿಢೀರ್ ಹೆಚ್ಚಳ!: ಅಧ್ಯಯನ ವರದಿ

ಹೊಸದಿಲ್ಲಿ,ಜೂ. 12: ದೇಶದಲ್ಲಿ ಬಡವರಲ್ಲೂ ಮಧುಮೇಹ ರೋಗ ಹೆಚ್ಚಳವಾಗಿದೆ ಎಂದು ಅಧ್ಯಯನವೊಂದರಲ್ಲಿ ಬಹಿರಂಗವಾಗಿದೆ. ಸಾರ್ವಜನಿಕ ವಿತರಣೆಯ ರೇಶನ್ ಅಂಗಡಿಗಳಲ್ಲಿ ವಿತರಣೆ ಮಾಡುವ ಅಕ್ಕಿ, ಗೋಧಿ ಇದಕ್ಕೆ ಪ್ರಧಾನ ಕಾರಣವಾಗಿದೆ ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ.ಆರ್ಥಿಕವಾಗಿ ಹಿಂದುಳಿದವರಿಗೆ ಗುಣಮಟ್ಟದ ಚಿಕಿತ್ಸೆ ಅಲಭ್ಯವಾದುದುಕೂಡಾ ರೋಗಪೀಡಿತರ ಸಂಖ್ಯೆ ಹೆಚ್ಚಳಕ್ಕೆಕಾರಣವಾಗಿದೆ.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್- ಇಂಡಿಯ ಡಯಬಿಟಿಸ್ ಈ ಅಧ್ಯಯನವನ್ನು ನಡೆಸಿದೆ. ಗ್ರಾಮಗಳಿಗೆ ಹೋಲಿಸಿದರೆ ನಗರಗಳಲ್ಲಿ ಮಧುಮೇಹಿಗಳ ಸಂಖ್ಯೆ ಹೆಚ್ಚಿದೆ. ನಗರದಲ್ಲಿಶೇ. 11.2 ಮತ್ತು ಗ್ರಾಮದಲ್ಲಿ ಶೇ. 5.2 ಮಧುಮೇಹ ಪೀಡಿತರು ಇದ್ದಾರೆ. ಸಾಮಾನ್ಯವಾಗಿ ಉನ್ನತ ಜೀವನಮಟ್ಟ ಇರುವವರಲ್ಲಿ ಈ ರೋಗ ಹೆಚ್ಚು ಕಾಣಿಸುತ್ತದೆ. ಆದರೆ, ಜೀವನ ಮಟ್ಟದಲ್ಲಿ ಮುಂದಿರುವ ರಾಜ್ಯಗಳ ನಗರಗಳಲ್ಲಿ ವಾಸಿಸುವ ಬಡವರ ಸ್ಥಿತಿ ಬೇರೆಯೇ ಆಗಿದೆ. ಚಂಡಿಗಡ ನಗರದ ಹೆಚ್ಚು ವರಮಾನವಿರುವವರಲ್ಲಿ ಶೇ. 12.9 ಮಧುಮೇಹ ರೋಗಿಗಳಿದ್ದರೆ, ಬಡವರಲ್ಲಿ ಶೇ. 26.9 ರೋಗಿಗಳಿದ್ದಾರೆ.

ಹಸಿರುಕ್ರಾಂತಿಯಲ್ಲಿ ಗೋಧಿ, ಭತ್ತಕೃಷಿಗೆ ಪ್ರಧಾನ ಒತ್ತು ನೀಡಲಾಗಿದೆ. ಈ ಧಾನ್ಯಗಳು ಪಡಿತರ ಅಂಗಡಿಗಳಿಗೆ ವಿತರಣೆಯಾಗುತ್ತದೆ. ಜೊತೆಗೆ ದೇಶದ ನಗರಗಳ ಜೋಪಡಾಪಟ್ಟಿಗಳಂತಹ ಪ್ರದೇಶಗಳಲ್ಲಿ ಜಂಕ್‌ಫುಡ್‌ಗಳು ಸಿಗುತ್ತಿರುವುದು ಬಡವರಲ್ಲಿ ಸಿಹಿಮೂತ್ರ ರೋಗ ವ್ಯಾಪಿಸಲು ಕಾರಣವಾಗಿದೆ.

ತವುಡು ತೆಗೆದ ಅಕ್ಕಿ ಮತ್ತು ಗೋಧಿ ರೇಶನ್ ಅಂಗಡಿಗಳಿಗೆ ವಿತರಿಸಲಾಗುತ್ತಿದ್ದು, ಇವುಗಳಿಂದ ಮಧುಮೇಹ ಸಾಧ್ಯತೆ ಹೆಚ್ಚಿದೆ. ಹಣ್ಣುಗಳು, ತರಕಾರಿ, ಆರೋಗ್ಯಕರವಾದ ಬೇರೆ ಜಾತಿಯ ಧಾನ್ಯಗಳನ್ನು ಸಾರ್ವಜನಿಕ ವಿತರಣೆ ಮಾಡಿದರೆ ಪ್ರಯೋಜನವಿದೆ ಎಂದು ಅಧ್ಯಯನಕ್ಕೆ ನೇತೃತ್ವವನ್ನು ನೀಡಿದ್ದ ಮದ್ರಾಸ್ ಡಯಬಿಟಿಸ್ ರಿಸರ್ಚ್ ಫೌಂಡೇಶನ್ ನ ಉಪಾಧ್ಯಕ್ಷ ಆರ್.ಎಂ. ಅಂಜನಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾರತ ಜಗತ್ತಿನಲ್ಲಿ ಅತಿಹೆಚ್ಚು ಮಧುಮೇಹ ರೋಗಿಗಳಿರುವ ದೇಶ ವಾಗಿದೆ. ಈವರೆಗೆ ಏಳು ಕೋಟಿ ಜನರಲ್ಲಿ ರೋಗವನ್ನು ಪತ್ತೆಹಚ್ಚಲಾಗಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top