ಇಡಿಯಿಂದ ಮಲ್ಯ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆ
ಮುಂಬೈ,ಜೂ.14: ಐಡಿಬಿಐ-ಕೆಎಫ್ಎ ಬ್ಯಾಂಕ್ ಸಾಲದ ಹಣದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಮಾಜಿ ಮದ್ಯದ ದೊರೆ ವಿಜಯ ಮಲ್ಯ ಮತ್ತು ಇತರರ ವಿರುದ್ಧ ಜಾರಿ ನಿರ್ದೇಶನಾಲಯವು ಬುಧವಾರ ಮುಂಬೈನ ನ್ಯಾಯಾಲಯದಲ್ಲಿ ಆರೋಪ ಪಟ್ಟಿಯನ್ನು ಸಲ್ಲಿಸಿದೆ.
ಮಂಗಳವಾರ ಲಂಡನ್ನಿನ ನ್ಯಾಯಾಲಯವೊಂದು ಮಲ್ಯಗೆ ಜಾಮೀನು ಮಂಜೂರು ಮಾಡಿತ್ತು. ಅವರ ವಿರುದ್ಧ ದಾಖಲಾಗಿರುವ ಗಡಿಪಾರು ಪ್ರಕರಣದ ಮುಂದಿನ ವಿಚಾರಣೆಯನ್ನು ಅದು ಜು.6ಕ್ಕೆ ನಿಗದಿಗೊಳಿಸಿದೆ.
Next Story