ಗಿನ್ನೆಸ್ ದಾಖಲೆ ನಿರ್ಮಿಸಿದ ರಾಮ್ ದೇವ್-ಅಮಿತ್ ಶಾ ನೇತೃತ್ವದ ಯೋಗ ಪ್ರದರ್ಶನ
ಅಹ್ಮದಾಬಾದ್, ಜೂ.21: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಂಗವಾಗಿ ಯೋಗಗುರು ಬಾಬಾ ರಾಮ್ ದೇವ್ ಹಾಗೂ ಬಿಜೆಪಿ ನಾಯಕ ಅಮಿತ್ ಶಾ ನೇತೃತ್ವದಲ್ಲಿ ಅಹ್ಮದಾಬಾದ್ ನ ಜಿಎಂಡಿಸಿ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಯೋಗ ಪ್ರದರ್ಶನ ಗಿನ್ನೆಸ್ ವಿಶ್ವದಾಖಲೆಯನ್ನು ನಿರ್ಮಿಸಿದೆ.
ಅತೀ ಹೆಚ್ಚು ಜನರು ಯೋಗ ಪ್ರದರ್ಶನದಲ್ಲಿ ಪಾಲ್ಗೊಳ್ಳುವ ಮೂಲಕ ವಿಶ್ವದಾಖಲೆ ನಿರ್ಮಿಸಲು ಪ್ರಯತ್ನಿಸುವುದಾಗಿ ಬಾಬಾ ರಾಮ್ ದೇವ್ ಹೇಳಿದ್ದರು. ಇಂದು ನಡೆದ ಕಾರ್ಯಕ್ರಮದಲ್ಲಿ 54,522 ಮಂದಿ ಭಾಗವಹಿಸಿದ್ದು, ಕಳೆದ ಬಾರಿ ದಿಲ್ಲಿಯಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ 35,984 ಮಂದಿ ಭಾಗವಹಿಸಿದ್ದರು.
ಕಾರ್ಯಕ್ರಮದ ನಂತರ ಗಿನ್ನೆಸ್ ದಾಖಲೆಯ ಪ್ರಮಾಣಪತ್ರವನ್ನು ರಾಮ್ ದೇವ್ ಹಾಗೂ ಗುಜರಾತ್ ಸಿಎಂ ವಿಜಯ್ ರುಪಾನಿಯವರಿಗೆ ಹಸ್ತಾಂತರಿಸಲಾಯಿತು.
Next Story