ಬಿಜೆಪಿ ನಾಯಕನ ಮನೆಯಲ್ಲಿ ಪತ್ತೆಯಾಯ್ತು ನಕಲಿ ನೋಟುಗಳ ರಾಶಿ, ಪ್ರಿಂಟಿಂಗ್ ಮೆಷಿನ್
ತ್ರಿಶ್ಶೂರು, ಜೂ.22: ಒಂದೆಡೆ ನೋಟು ಅಮಾನ್ಯೀಕರಣದಿಂದ ಭಯೋತ್ಪಾದನೆ, ನಕಲಿ ನೋಟು ಹಾವಳಿಗೆ ಕಡಿವಾಣ ಬಿದ್ದಿದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದರೆ ಇದಕ್ಕೆ ತದ್ವಿರುದ್ಧವಾದ ಘಟನೆಯೊಂದು ಕೇರಳದಲ್ಲಿ ನಡೆದಿದೆ. ಇಲ್ಲಿನ ಬಿಜೆಪಿ ನಾಯಕನೊಬ್ಬನ ಮನೆಯ ಮೇಲೆ ದಾಳಿ ನಡೆಸಿದ ಪೊಲೀಸರು ನಕಲಿ ನೋಟುಗಳು ಹಾಗು ಪ್ರಿಂಟಿಂಗ್ ಮೆಷಿನನ್ನು ವಶಪಡಿಸಿಕೊಂಡಿದ್ದಾರೆ.
ಘಟನೆಗೆ ಸಂಬಂಧಿಸಿ ಬಿಜೆಪಿ ನಾಯಕ ರಾಕೇಶ್ ಹಾಗೂ ಆತನ ಸಹೋದರ ರಾಜೇಶ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಾಹಿತಿಗಳ ಪ್ರಕಾರ ವಶಪಡಿಸಿಕೊಂಡ ನೋಟುಗಳ ಪ್ರಮಾಣ 1.5 ಲಕ್ಷ ರೂ,ಗಳಾಗಿದ್ದು, 2,000, 500, 50 ಹಾಗೂ 20 ರೂ. ಮುಖಬೆಲೆಯ ನಕಲಿ ನೋಟುಗಳು ಮನೆಯಲ್ಲಿತ್ತು ಎನ್ನಲಾಗಿದೆ.
ಅಲ್ಪಾವಧಿಯಲ್ಲೇ ರಾಜೇಶ್ ಹಾಗೂ ರಾಕೇಶ್ ರ ಸಂಪತ್ತಿನಲ್ಲಿನ ಗಣನೀಯ ಏರಿಕೆಯ ಬಗ್ಗೆ ಸಿಕ್ಕಿದ್ದ ಗುಪ್ತಚರ ಮಾಹಿತಿಯ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
Next Story