ಮೀರಾ ಕುಮಾರ್ ರನ್ನು ನಿತೀಶ್ ಬೆಂಬಲಿಸಲಿದ್ದಾರೆ: ಲಾಲು ಪ್ರಸಾದ್
ಹೊಸದಿಲ್ಲಿ, ಜೂ. 22: ರಾಷ್ಟ್ರಪತಿ ಹುದ್ದೆಯ ಅಭ್ಯರ್ಥಿಯಾಗಿ ದಲಿತ ಮಹಿಳೆ ಹಾಗೂ ಲೋಕಸಭೆಯ ಮಾಜಿ ಸ್ಪೀಕರ್ ಮೀರಾ ಕುಮಾರ್ ಅವರನ್ನು ಘೋಷಿಸಿದ ಬಳಿಕ ವಿಪಕ್ಷ ಇನ್ನೊಂದು ದೊಡ್ಡ ಹೆಜ್ಜೆ ಇರಿಸಿದ್ದು, ಮೀರಾ ಕುಮಾರ್ ಅವರನ್ನು ಬೆಂಬಲಿಸುವಂತೆ ನಿತೀಶ್ ಕುಮಾರ್ ಅವರಲ್ಲಿ ವಿನಂತಿಸಲಿದೆ.
"ನಾವು ನಿತೀಶ್ ಕುಮಾರ್ ಅವರನ್ನು ಭೇಟಿಯಾಗಲಿದ್ದೇವೆ ಹಾಗೂ ಬಿಹಾರದ ಪುತ್ರಿ ಮೀರಾ ಕುಮಾರ್ ಅವರಿಗೆ ಬೆಂಬಲ ನೀಡುವಂತೆ ಕೋರಲಿದ್ದೇವೆ" ಎಂದು ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ. ನಾವು ನಿತೀಶ್ ಅವರನ್ನು ಮತ್ತೆ ಮತ್ತೆ ವಿನಂತಿಸಲಿದ್ದೇವೆ. "ಮೀರಾ ಕುಮಾರ್ ಅವರ ಆಯ್ಕೆಯಿಂದ ಅವರು ಅಸಮಾಧಾನಗೊಂಡಿಲ್ಲ. ಮೀರಾ ಕುಮಾರ್ ರನ್ನು ನಿತೀಶ್ ಬೆಂಬಲಿಸಲಿದ್ದಾರೆ" ಎಂದು ಲಾಲು ಹೇಳಿದ್ದಾರೆ. ಬಿಹಾರದ ರಾಜ್ಯಪಾಲರಾಗಿದ್ದ ಹಾಗೂ ಬಿಜೆಪಿ ರಾಷ್ಟ್ರಪತಿ ಅಭ್ಯರ್ಥಿ ರಾಮನಾಥ್ ಕೋವಿಂದ್ ಅವರನ್ನು ಬೆಂಬಲಿಸುವುದಾಗಿ ನಿನ್ನೆ ನಿತೀಶ್ ಕುಮಾರ್ ಹೇಳಿಕೆ ನೀಡಿದ್ದರು.
Next Story