ಜೆಎನ್ಯು ವಿದ್ಯಾರ್ಥಿ ನಜೀಬ್ ಕುರಿತ ಮಾಹಿತಿಗೆ 10 ಲ.ರೂ.ಬಹುಮಾನ:ಸಿಬಿಐ
ಹೊಸದಿಲ್ಲಿ,ಜೂ.29: ಕಳೆದ ಎಂಟು ತಿಂಗಳುಗಳಿಂದ ನಾಪತ್ತೆಯಾಗಿರುವ ಇಲ್ಲಿಯ ಜೆಎನ್ಯು ವಿದ್ಯಾರ್ಥಿ ನಜೀಬ್ ಜಂಗ್ ಅವರ ಇರುವಿಕೆಯ ಬಗ್ಗೆ ಮಾಹಿತಿ ನೀಡುವ ಯಾವುದೇ ವ್ಯಕ್ತಿಗೆ 10 ಲ.ರೂ.ಗಳ ಬಹುಮಾನವನ್ನು ಸಿಬಿಐ ಗುರುವಾರ ಘೋಷಿಸಿದೆ.
ನಜೀಬ್ ಬಗ್ಗೆ ಮಾಹಿತಿಯಿರುವವರು ಸಿಬಿಐ ತನಿಖಾಧಿಕಾರಿಗಳನ್ನು ದೂರವಾಣಿ (011-24368641,9650394796) ಮೂಲಕ ಸಂಪರ್ಕಿಸಬಹುದಾಗಿದೆ ಎಂದು ಏಜೆನ್ಸಿ ಮೂಲಗಳು ತಿಳಿಸಿವೆ.
ನಜೀಬ್ ನಿಗೂಢ ನಾಪತ್ತೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಅವರು ನಾಪತ್ತೆಯಾಗಿದ್ದ ಜೆಎನ್ಯುದ ಮಹಿ-ಮಾಂಡ್ವಿ ಹಾಸ್ಟೆಲ್ಗೆ ಇತ್ತೀಚಿಗೆ ಭೇಟಿ ನೀಡಿ ಪರಿಶೀಲಿಸಿತ್ತು.
ಸಿಬಿಐ ತನಿಖಾಧಿಕಾರಿಗಳನ್ನು ಇತ್ತೀಚಿಗೆ ಭೇಟಿಯಾಗಿದ್ದ ನಜೀಬ್ ತಾಯಿ ಫಾತಿಮಾ ನಫೀಸಾ ಅವರು, ತನ್ನ ಪುತ್ರ ಹಾಸ್ಟೆಲ್ನಿಂದ ನಾಪತ್ತೆಯಾಗುವ ಮೊದಲಿನ ಘಟನಾ ವಳಿಗಳ ವಿವರಗಳನ್ನು ಸಲ್ಲಿಸಿದ್ದರು.
Next Story