ಬಿಜೆಪಿ ಸರಕಾರವನ್ನು ಟೀಕಿಸುವುದು ಫ್ಯಾಶನ್ ಆಗಿಬಿಟ್ಟಿದೆ: ನಾಯ್ಡು
ಹೊಸದಿಲ್ಲಿ, ಜು.7: ಯಾವುದೇ ವಿಷಯ ಮತ್ತು ಎಲ್ಲಾ ವಿಷಯಗಳಿಗೂ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವನ್ನು ಟೀಕಿಸುವುದು ಇಂದಿನ ದಿನದಲ್ಲಿ ಫ್ಯಾಶನ್ ಆಗಿಬಿಟ್ಟಿದೆ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ.
ಆರ್ಥಿಕ ಅವ್ಯವಹಾರ ನಡೆಸಿದ ಆರೋಪದಲ್ಲಿ ಸಿಬಿಐ ತನಿಖೆ ಎದುರಿಸುತ್ತಿರುವ ಆರ್ಜೆಡಿ ಅಧ್ಯಕ್ಷ ಲಾಲೂಪ್ರಸಾದ್ ಯಾದವ್ , ತನ್ನ ವಿರುದ್ಧ ಬಿಜೆಪಿ ರಾಜಕೀಯ ದ್ವೇಷ ಸಾಧಿಸುತ್ತಿದೆ ಎಂದು ಹೇಳಿಕೆ ನೀಡಿರುವ ಬಗ್ಗೆ ನಾಯ್ಡು ಪ್ರತಿಕ್ರಿಯಿಸುತ್ತಿದ್ದರು.
ಕಾನೂನು ತನ್ನದೇ ಹಾದಿಯಲ್ಲಿ ಸಾಗುತ್ತದೆ. ಇದರಲ್ಲಿ ಸರಕಾರ ಅಥವಾ ಬಿಜೆಪಿಯ ಪಾತ್ರವಿಲ್ಲ. ಅಕ್ರಮ ಎಸಗಿದ ಬಳಿಕ ತಮ್ಮ ತಪ್ಪನ್ನು ಮರೆಮಾಚಲು ಬಿಜೆಪಿ ಮತ್ತು ಕೇಂದ್ರ ಸರಕಾರದ ಮೇಲೆ ಆರೋಪ ಹೊರಿಸುವುದು ಇಂದಿನ ದಿನದಲ್ಲಿ ಫ್ಯಾಶನ್ ಆಗಿಬಿಟ್ಟಿದೆ ಎಂದು ನಾಯ್ಡು ಹೇಳಿದರು.
Next Story