ಸೌದಿ: ಬಾಲಕಿಯರಿಗೆ ದೈಹಿಕ ಶಿಕ್ಷಣ ಜಾರಿ
ರಿಯಾದ್, ಜು. 11: ಸೌದಿ ಅರೇಬಿಯದ ಸರಕಾರಿ ಶಾಲೆಗಳಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಬಾಲಕಿಯರಿಗಾಗಿ ದೈಹಿಕ ಶಿಕ್ಷಣ ತರಗತಿಗಳನ್ನು ನಡೆಸಲಾಗುವುದು ಎಂದು ಸೌದಿಯ ಶಿಕ್ಷಣ ಸಚಿವಾಲಯ ಮಂಗಳವಾರ ಪ್ರಕಟಿಸಿದೆ.
ಬಾಲಕಿಯರಿಗೆ ದೈಹಿಕ ಶಿಕ್ಷಣ ನೀಡುವುದಕ್ಕೆ ಶುರಾ ಮಂಡಳಿ 2014ರಲ್ಲಿ ಅನುಮೋದನೆ ನೀಡಿತ್ತು. ಆದರೆ, ಅದು ಜಾರಿಗೆ ಬಂದಿರಲಿಲ್ಲ.
ಸೌದಿ ಅರೇಬಿಯದಲ್ಲಿ ಮಹಿಳೆಯರ ಜಿಮ್ಗಳಿಗೆ ಈ ವರ್ಷದ ಆರಂಭದಲ್ಲಿ ಅನುಮೋದನೆ ನೀಡಲಾಗಿತ್ತು.
Next Story