ಟ್ರಕ್ ಗೆ ಢಿಕ್ಕಿಯಾದ ಬಸ್: 10 ಮಂದಿ ಮೃತ್ಯು; 23 ಮಂದಿಗೆ ಗಾಯ
ಚೆನ್ನೈ, ಜು.15: ಕಬ್ಬಿಣದ ರಾಡ್ ಗಳನ್ನು ತುಂಬಿಕೊಂಡು ಸಾಗುತ್ತಿದ್ದ ಟ್ರಕ್ ವೊಂದಕ್ಕೆ ಬಸ್ ಢಿಕ್ಕಿಯಾದ ಪರಿಣಾಮ 10 ಮಂದಿ ಮೃತಪಟ್ಟು 23 ಮಂದಿ ಗಂಭಿರವಾಗಿ ಗಾಯಗೊಂಡ ಘಟನೆ ತಮಿಳುನಾಡಿನ ತಂಜಾವೂರಿನಲ್ಲಿ ನಡೆದಿದೆ.
ತಿರ್ಪುರ್ ನಿಂದ ಕುಂಭಕೋಣಂಗೆ ಪ್ರಯಾಣಿಸುತ್ತಿದ್ದ ಬಸ್ ನಲ್ಲಿ ಸುಮಾರು 60 ಜನರಿದ್ದರು. ಜಿಲ್ಲೆಯ ವಲ್ಲಂನ ಓವರ್ ಬ್ರಿಜ್ ನಲ್ಲಿ ಬಸ್ ಟ್ರಕ್ ಗೆ ಢಿಕ್ಕಿ ಹೊಡೆದಿದೆ. ಘಟನೆಯಿಂದ ಎಂಟು ಪ್ರಯಾಣಿಕರು ಹಾಗೂ ಎರಡೂ ವಾಹನಗಳ ಚಾಲಕರು ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ತಂಜಾವೂರ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತಪಟ್ಟ ಪ್ರಯಾಣಿಕರ ಕುಟುಂಬಕ್ಕೆ ತಲಾ 1 ಲಕ್ಷ ರೂ. ಘೋಷಿಸಲಾಗಿದೆ.
Next Story