ನಿದ್ರಿಸುತ್ತಿದ್ದಾಗ ಹಾವು ಕಚ್ಚಿ ವಿದ್ಯಾರ್ಥಿನಿ ಸಾವು
ಒಯೂರ್, ಜು.15: ಮನೆಯೊಳಗೆ ನಿದ್ರಿಸುತ್ತಿದ್ದ ಏಳನೆ ತರಗತಿ ವಿದ್ಯಾರ್ಥಿನಿ ಹಾವುಕಚ್ಚಿ ಮೃತಪಟ್ಟ ಘಟನೆ ವರದಿಯಾಗಿದೆ. ಮಿಯ್ಯನ ಕಾಂಞರಂವಿಳ ಪುತ್ತನ್ ವೀಡ್ ನೌಷಾದ್-ಮುಬೀನಾ ದಂಪತಿಯ ಪುತ್ರಿ ರಂಸೀನಾ(12) ಮೃತ ಬಾಲಕಿಯಾಗಿದ್ದಾಳೆ. ಕಳೆದ ದಿವಸ ರಾತ್ರಿ ಹನ್ನೊಂದು ಗಂಟೆಗೆ ರಂಸೀನಾಳ ದೇಹಕ್ಕೆ ಏನೋ ಕಚ್ಚಿದಂತಾಗಿತ್ತು. ನಂತರ ಒಂದು ಗಂಟೆಯೊಳಗೆ ಅವಳಿಗೆ ಅನಾರೋಗ್ಯ ಕಾಡಿತ್ತು. ಬಾಲಕಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು.
ಹಾವು ಕಚ್ಚಿರಬೇಕೆನ್ನುವ ಸಂದೇಹದಲ್ಲಿ ನಂತರ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಚಿಕಿತ್ಸೆ ನಡೆಯುತ್ತಿದ್ದಂತೆ ಶನಿವಾರ ಬೆಳಗ್ಗೆ ಹತ್ತುಗಂಟೆಗೆ ಬಾಲಕಿ ಮೃತಪಟ್ಟಿದ್ದಾಳೆ. ಪುಯಪ್ಪಳ್ಳಿ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.
Next Story