ನಜೀಬ್ ನಾಪತ್ತೆ ಪ್ರಕರಣ: ಹೆಚ್ಚುವರಿ ಸಮಯ ಕೋರಿದ ಸಿಬಿಐ
ಹೊಸದಿಲ್ಲಿ,ಜು. 19: ಎಬಿವಿಪಿ ಕಾರ್ಯಕರ್ತರ ಹಲ್ಲೆಯ ನಂತರ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾನಿಲಯದಿಂದ ನಿಗೂಢವಾಗಿ ಕಣ್ಮರೆಯಾಗಿರುವ ವಿದ್ಯಾರ್ಥಿ ನಜೀಬ್ ಅಹ್ಮದ್ರ ಪ್ರಕರಣದ ತನಿಖೆಗೆ ಹೆಚ್ಚಿನ ಸಮಯವನ್ನು ಸಿಬಿಐ ಕೇಳಿದೆ. ದಿಲ್ಲಿಪೊಲೀಸರಿಂದ ಪ್ರಕರಣದ ತನಿಖೆಯನ್ನು ವಹಿಸಿಕೊಂಡು ಕೇವಲ ಒಂದು ತಿಂಗಳು ಮಾತ್ರ ಆಗಿದೆ. ಹೆಚ್ಚು ಸಮಯವಕಾಶದ ಅಗತ್ಯವಿದೆ ಎಂದು ಸಿಬಿಐ ಹೈಕೋರ್ಟಿನಲ್ಲಿ ಮನವಿ ಸಲ್ಲಿಸಿದೆ. ದಿಲ್ಲಿಪೊಲೀಸರ ತನಿಖೆಯಲ್ಲಿ ಪ್ರಗತಿ ಕಾಣದ ಹಿನ್ನೆಲೆಯಲ್ಲಿ ನಜೀಬ್ ರ ತಾಯಿ ಫಾತಿಮಾ ನಫೀಸ್ ಹೈಕೋರ್ಟಿನ ಮೊರೆಹೋಗಿದ್ದರು.
Next Story