ಸಿನೆಮಾದಲ್ಲಿ ಅವಕಾಶ ನೀಡುವುದಾಗಿ ನಂಬಿಸಿ ವೈದ್ಯೆಯ ಅತ್ಯಾಚಾರ
ಕೊಚ್ಚಿ,ಜು.28: ದಂತ ವೈದ್ಯೆಗೆ ಸಿನೆಮಾದಲ್ಲಿ ಅವಕಾಶ ಕೊಡಿಸುವ ಭರವಸೆ ನೀಡಿ ವ್ಯಕ್ತಿಯೊಬ್ಬ ಅತ್ಯಾಚಾರವೆಸಗಿದ್ದಲ್ಲದೆ 33 ಲಕ್ಷ ರೂಪಾಯಿ ವಂಚಿಸಿದ ಘಟನೆ ನಡೆದಿದೆ. ಕೊಡಂಗಲ್ಲೂರಿನ ಜಿನ್ಸನ್ ಲೋನಪ್ಪನ್(33) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕೊಚ್ಚಿಯ ನಿವಾಸಿಯಾದ ಯುವತಿ ಅಮೆರಿಕನ್ ಪ್ರಜೆಯಾಗಿದ್ದಾರೆ.
ಸಿನೆಮಾದಲ್ಲಿ ಅವಕಾಶ ಕೇಳಿ ಲೊಕೇಶನ್ಗೆ ಯುವತಿ ಭೇಟಿ ನೀಡಿದ್ದರು. ಜಿನ್ಸನ್ ಒಂದು ಸಿನೆಮಾದಲ್ಲಿ ಅಸಿಸ್ಟೆಂಟ್ ಫೋಟೊಗ್ರಾಫರ್ ಆಗಿ ಕೆಲಸಮಾಡಿದ್ದನು. ತನಗೆ ಹಿರಿಯ ನಿರ್ದೇಶಕರ ಪರಿಚಯವಿದೆ. ಅವಕಾಶ ಕೊಡಿಸುವೆ ಎಂದು ಭರವಸೆ ನೀಡಿದ್ದ ಈತ ಮೃತಪಟ್ಟಿರುವ ತನ್ನ ಪ್ರೇಯಸಿಗೂ ನಿಮಗೂ ಹೋಲಿಕೆಯಿದೆ ಎಂದು ಹೇಳಿ ಆಕೆಯೊಂದಿಗೆ ಸ್ನೇಹ ಬೆಳೆಸಿದ್ದ
ನಂತರ ಫೋಟೊ ಶೂಟ್ಗೆಂದು ವಿವಿಧ ಕಡೆಗೆ ಕರೆದು ಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ. ನಿರ್ದೇಶಕನಿಗೆ ಮತ್ತಿತರ ಖರ್ಚಿಗೆಂದು ಯುವತಿಯಿಂದ 33 ಲಕ್ಷರೂಪಾಯಿ ಕೇಳಿ ಪಡೆದುಕೊಂಡಿದ್ದಾನೆ. ಸಿನೆಮಾದಲ್ಲಿ ನಟಿಸಲು ಅವಕಾಶ ಸಿಗದ್ದರಿಂದ ಯುವತಿ ಹಣವನ್ನು ಕೇಳಿದ್ದಾರೆ. ಆದಕ್ಕೆ ಆತ ಬೆದರಿಸಿದ್ದಾನೆ. ನಂತರ ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ.
ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಹೊಂದಿರುವ ಆರೋಪಿ ಹಲವಾರು ಮಹಿಳೆಯರನ್ನು ಇದೇ ರೀತಿ ಬಲೆಗೆ ಹಾಕಿ ಹಣಮಾಡಿದ್ದಾನೆಂದು ಪೊಲೀಸರು ಹೇಳಿದ್ದಾರೆ. ಅದ್ದೂರಿ ಜೀವನಕ್ಕೆ ಮೊರೆಹೋಗಿದ್ದ ಈತನನ್ನು ಯುವತಿಯ ಮೂಲಕ ಕೊಚ್ಚಿಯ ಫ್ಲ್ಯಾಟ್ಗೆ ಕರೆಯಿಸಿಕೊಂಡು ಪೊಲೀಸರು ಬಂಧಿಸಿದ್ದಾರೆ. ಈತನ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳಿವೆ.