ತಿಹಾರ್ ಜೈಲಿನಲ್ಲಿ ಕೈದಿಗಳಿಗಾಗಿ ನಡೆಯಿತು ರಿಯಾಲಿಟಿ ಶೋ
ಹೊಸದಿಲ್ಲಿ,ಆ.12: ತಿಹಾರ್ ಜೈಲು ಎಂದಾಗ ಅಪರಾಧಿಗಳು ಶಿಕ್ಷೆ ಅನುಭವಿಸುವ ಸ್ಥಳ ಎಂದು ಎಲ್ಲರ ಮನಸ್ಸಿನಲ್ಲಿ ಮೂಡುವುದು ಸಹಜ. ಆದರೆ ಜೈಲಿನೊಳಗೆ ಒಳ್ಳೆಯ ಹಾಡುಗಾರರು ಇದ್ದಾರೆ. ಈ ವಿಷಯವನ್ನು ಸಂಗೀತ ರಿಯಾಲಿಟಿ ಶೋ ನಡೆಸಿ ತಿಹಾರ್ ಜೈಲು ಅಧಿಕಾರಿಗಳು ಸಾಬೀತು ಪಡಿಸಿದ್ದಾರೆ.
"ತಿಹಾರ್ ಐಡಿಯಲ್"ಎನ್ನುವ ಹೆಸರಿನಲ್ಲಿ ಕೈದಿಗಳಿಗಾಗಿ ಸಂಗೀತ ರಿಯಾಲಿಟಿ ಶೋ ಆಯೋಜಿಸಲಾಗಿತ್ತು. ಶಿಕ್ಷೆ ಅನುಭವಿಸುವ ವಿದೇಶಿ ಪ್ರಜೆಗಳಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿತ್ತು. ದಿಲ್ಲಿ ಪ್ರಿಸನರ್ಸ್ ಮ್ಯೂಸಿಕ್ ವನ್ ರಿಕಾಡ್ರ್ಸ್ ಕಾರ್ಯಕ್ರಮವನ್ನು ಸಂಯೋಜಿಸಿದ್ದರು.
ಕಾರ್ಯಕ್ರಮದ ಪ್ರೊಮೊ, ಶೀರ್ಷಿಕೆ ಹಾಡು ಮುಂತಾದುವುಗಳನ್ನು ನಾಳಿನ ವಿಶೇಷ ಸಮಾರಂಭದಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ಜೈಲಧಿಕಾರಿಗಳು ತಿಳಿಸಿದ್ದಾರೆ.
ಸ್ಪರ್ಧೆಯಲ್ಲಿ ಭಾಗವಹಿಸುವ ಕೈದಿಗಳಿಗೆ ವಿಶೇಷ ತರಬೇತಿ ನೀಡಲಾಗಿತ್ತು. ಪ್ರಿಸನ್ ಕಾಂಪ್ಲೆಕ್ಸ್ನ ಜೈಲು ನಂಬರ್ ಒಂದರಲ್ಲಿ ತಾತ್ಕಾಲಿಕ ಸ್ಟುಡಿಯೊ ನಿರ್ಮಿಸಲಾಗಿತ್ತು. ಚಲನಚಿತ್ರ-ಸಂಗೀತ ಕ್ಷೇತ್ರದ ಪ್ರಮುಖರು ತೀರ್ಪುಗಾರರಾಗಿ ಸಹಕರಿಸಿದ್ದರು.