ಪದ್ಮ ಪ್ರಶಸ್ತಿಗಳಿಗೆ ಯಾರು ಬೇಕಾದರೂ ಆನ್ ಲೈನ್ ಮೂಲಕ ಹೆಸರು ಶಿಫಾರಸು ಮಾಡಬಹುದು: ಪ್ರಧಾನಿ ಮೋದಿ
ಹೊಸದಿಲ್ಲಿ, ಆ.17: ಆನ್ ಲೈನ್ ಮೂಲಕ ಯಾರು ಬೇಕಾದರೂ ಪದ್ಮ ಪ್ರಶಸ್ತಿಗಳಿಗೆ ವ್ಯಕ್ತಿಗಳ ಹೆಸರನ್ನು ಶಿಫಾರಸು ಮಾಡಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ನೀತಿ ಆಯೋಗದ ಕಾರ್ಯಕ್ರಮವೊಂದಲ್ಲಿ ಮಾತನಾಡಿದ ಅವರು, ಪದ್ಮ ಪ್ರಶಸ್ತಿಗಳಿಗೆ ಮಂತ್ರಿಗಳು ಹೆಸರನ್ನು ಶಿಫಾರಸು ಮಾಡುವ ಪದ್ಧತಿಯನ್ನು ನಿಲ್ಲಿಸಲು ಕೇಂದ್ರ ಸರಕಾರ ನಿರ್ಧರಿಸಿದೆ. ಈ ಹಿಂದೆ ಪದ್ಮ ಪ್ರಶಸ್ತಿಗೆ ಮಂತ್ರಿಗಳು ಹೆಸರನ್ನು ಶಿಫಾರಸು ಮಾಡಬೇಕಾಗಿತ್ತು. ಆದರೆ ನಾವು ಈ ಪದ್ಧತಿಗೆ ಕೊನೆ ಹಾಡಿದ್ದು, ಯಾರು ಬೇಕಾದರೂ ಹೆಸರನ್ನು ಸೂಚಿಸಬಹುದು. ಆನ್ ಲೈನ್ ಮೂಲಕ ಯಾರ ಹೆಸರನ್ನು ಯಾರು ಬೇಕಾದರೂ ಸೂಚಿಸಬಹುದು. ಇದರಿಂದಾಗಿ ಗುರುತಿಸಲ್ಪಡದ ‘ಹೀರೋ’ಗಳು ಗುರುತಿಸಲ್ಪಡುತ್ತಾರೆ ಎಂದವರು ಹೇಳಿದರು.
Next Story