ಆತ್ಮಹತ್ಯೆಗೆ ಯತ್ನಿಸಿದ ಬಾಲಕ: ಬ್ಲೂವೇಲ್ ಶಂಕೆ
ಹೊಸದಿಲ್ಲಿ, ಆ. 20: ಇಲ್ಲಿನ 16 ವರ್ಷದ ಬಾಲಕನೋರ್ವ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ. ಬ್ಲೂವೇಲ್ ಚಾಲೆಂಜ್ನಿಂದ ಬಾಲಕ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಪಶ್ಚಿಮ ದಿಲ್ಲಿಯ ಅಶೋಕ್ ವಿಹಾರ್ ಪ್ರದೇಶದಲ್ಲಿರುವ ಅಪಾರ್ಟ್ಮೆಂಟ್ನ 4ನೇ ಮಹಡಿಯಿಂದ ಬುಧವಾರ ಬಾಲಕ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಬಾಲಕ ತನ್ನ ಚಪ್ಪಲಿ, ಕನ್ನಡಕ ಹಾಗೂ ಮೊಬೈಲ್ ಅನ್ನು ಬಿಟ್ಟು ಕೆಳಗೆ ಹಾರಿದ್ದಾನೆ. ಗಂಭೀರ ಗಾಯಗೊಂಡ ಬಾಲಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕ ಆತ್ಮಹತ್ಯೆ ಮಾಡಿಕೊಳ್ಳಲು ಬ್ಲೂವೇಲ್ ಚಾಲೆಂಜ್ ಕಾರಣ ಎಂಬುದು ಇನ್ನೂ ದೃಢ ಪಟ್ಟಿಲ್ಲ ಎಂದು ಡಿಸಿಪಿ ಮಿಲಿಂದ್ ದುಂಬೇರೆ ತಿಳಿಸಿದ್ದಾರೆ.
ಬಾಲಕನನ್ನು ಇತ್ತೀಚೆಗೆ ಬೇರೆ ಶಾಲೆಗೆ ದಾಖಲಿಸಲಾಗಿತ್ತು. ಶಾಲೆ ಬದಲಾಯಿಸಿರುವುದು ಕೂಡ ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
Next Story