ದಕ್ಷಿಣ ಕಾಶ್ಮೀರದಲ್ಲಿ ಉಗ್ರರ ದಾಳಿ: ಎಎಸ್ಸೈ ಮೃತ್ಯು
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ, ಆ.28: ದಕ್ಷಿಣ ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಎಎಸ್ಸೈ ಅಬ್ದುಲ್ ರಶೀದ್ ಮೃತಪಟ್ಟಿದ್ದಾರೆ.
ಮೆಹಂದಿ ಕದಲ್ ನಲ್ಲಿ ಕರ್ತವ್ಯದಲ್ಲಿದ್ದ ರಶೀದ್ ರ ಬಳಿ ಬಂದೂಕು ಇರಲಿಲ್ಲ. ಈ ಸಂದರ್ಭ ಉಗ್ರರು ಅವರ ಮೇಲೆ ದಾಳಿ ನಡೆಸಿದ್ದಾರೆ. ರಶೀದ್ ರ ಹೊಟ್ಟೆಯ ಭಾಗಕ್ಕೆ ಗುಂಡೇಟು ತಗಲಿದ್ದು, ತಕ್ಷಣವೇ ಅವರನ್ನು ಅನಂತ್ ನಾಗ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿಂದ ಅವರನ್ನು ಬಾದಾಮಿಬಾಘ್ ನ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಲಾಯಿತು. ವೈದ್ಯರ ಸತತ ಪ್ರಯತ್ನ ನಡೆಸಿದರೂ ರಶೀದ್ ಮೃತಪಟ್ಟರು ಎಂದು ಪೊಲೀಸ್ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.
ದಕ್ಷಿಣ ಕಾಶ್ಮೀರದಲ್ಲಿ ಶನಿವಾರ ನಡೆದಿದ್ದ ಉಗ್ರರ ದಾಳಿಯಲ್ಲಿ 4 ಸಿಆರ್ ಪಿಎಫ್ ಜವಾನರು ಸೇರಿದಂತೆ 8 ಮಂದಿ ಹುತಾತ್ಮರಾಗಿದ್ದರು.
Next Story