ಇಸ್ರೋ ಪಥನಿರ್ದೇಶಕ ಉಪಗ್ರಹ ಉಡಾವಣೆ ವಿಫಲ
ಹೊಸದಿಲ್ಲಿ, ಆ. 30: ಇಸ್ರೋದ ಭಾರತೀಯ ಪ್ರಾದೇಶಿಕ ಪಥನಿರ್ದೇಶಕ ಉಪಗ್ರಹ ವ್ಯವಸ್ಥೆ (ಐಆರ್ಎನ್ಎಸ್ಎಸ್) ಸರಣಿಯ 8ನೆ ಉಪಗ್ರಹ ಐಆರ್ಎನ್ಎಸ್ಎಸ್-1ಎಚ್ ಉಡಾವಣೆ ವಿಫಲಗೊಂಡಿದೆ.
ಉಷ್ಣ ಶೀಲ್ಡ್ ಕಳಚದ ಪರಿಣಾಮ ಉಡಾವಣೆ ವಿಫಲವಾಗಿದೆ ಎಂದು ಇಸ್ರೋದ ಬಾಹ್ಯಾಕಾಶ ಏಜೆನ್ಸಿಯ ಮುಖ್ಯಸ್ಥ ಎ.ಎಸ್.ಕಿರಣ್ ಕುಮಾರ್ ಹೇಳಿದ್ದಾರೆ.
ಆಂಧ್ರದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಎರಡನೆ ಉಡಾವಣಾ ವೇದಿಕೆಯಿಂದ ಈ ಉಪಗ್ರಹವನ್ನು ಉಡಾಯಿಸಲಾಗಿತ್ತು.
Next Story