ಆಧಾರ್-ಪಾನ್ ಕಾರ್ಡ್ ಲಿಂಕಿಂಗ್ ಗೆ ಕೊನೆಯ ದಿನಾಂಕ ವಿಸ್ತರಣೆ
ತೆರಿಗೆ ಪಾವತಿದಾರರಿಗೆ ‘ಬಿಗ್ ರಿಲೀಫ್’
ಹೊಸದಿಲ್ಲಿ, ಆ.31: ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕಿಂಗ್ ಗೆ ಸಂಬಂಧಿಸಿದಂತೆ ಇಂದು ಕೇಂದ್ರ ಸರಕಾರದ ಘೋಷಣೆ ತೆರಿಗೆ ಪಾವತಿದಾರರಿಗೆ ‘ಬಿಗ್ ರಿಲೀಫ್’ ಸಿಕ್ಕಂತಾಗಿದೆ. ಈ ಹಿಂದೆ ಆಧಾರ್ ಹಾಗೂ ಪಾನ್ ಕಾರ್ಡ್ ಲಿಂಕಿಂಗ್ ಗೆ ಆಗಸ್ಟ್ 31 ಕೊನೆಯ ದಿನವಾಗಿತ್ತು. ಆದರೆ ಆಧಾರ್-ಪಾನ್ ಲಿಂಕ್ ಮಾಡಲು ಡಿಸೆಂಬರ್ 31 ಕೊನೆಯ ದಿನ ಎಂದು ಕೇಂದ್ರ ಸರಕಾರ ಘೋಷಿಸಿದೆ.
“ಪಾನ್ ಮತ್ತು ಆಧಾರ್ ಕಾರ್ಡ್ ಗಳನ್ನು ಲಿಂಕ್ ಮಾಡುವ ಕೊನೆಯ ದಿನಾಂಕದ ಬಗ್ಗೆ ನಾಳೆ ನಿರ್ಧರಿಸಲಾಗುವುದು” ಎಂದು ಕೇಂದ್ರ ಸರಕಾರ ನಿನ್ನೆ ಹೇಳಿತ್ತು.
ವಿವಿಧ ಯೋಜನೆಗಳಿಗೆ ಆಧಾರ್ ನೋಂದಣಿಯ ದಿನಾಂಕವನ್ನು ಡಿಸೆಂಬರ್ 31ರವರೆಗೆ ವಿಸ್ತರಿಸುವುದಾಗಿ ಕೇಂದ್ರ ಸರಕಾರ ನಿನ್ನೆ ಸುಪ್ರೀಂ ಕೋರ್ಟ್ ಗೆ ತಿಳಿಸಿತ್ತು.
Next Story