ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಸ್ವಯಂಘೋಷಿತ ದೇವಮಾನವ: ಪ್ರಕರಣ ದಾಖಲು
ಜೈಪುರ, ಸೆ.21: ಯುವತಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣದಲ್ಲಿ ರಾಜಸ್ಥಾನದ ‘ಸ್ವಯಂ ಘೋಷಿತ ದೇವಮಾನವ’ನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
70 ವರ್ಷದ ಸ್ವಯಂಘೋಷಿತ ದೇವಮಾನವ ಕೌಶಲೇಂದ್ರ ಪ್ರಪಂಚಾರ್ಯ ಆಗಸ್ಟ್ 7ರಂದು ಆಲ್ವಾರ್ ನಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.
“ವಿಲಾಸ್ ಪುರ ಪೊಲೀಸರು ದೂರನ್ನು ಇಲ್ಲಿಗೆ ಕಳುಹಿಸಿದ್ದಾರೆ. ಲೈಂಗಿಕ ಶೋಷಣೆಯ ಪ್ರಕರಣವನ್ನು ಈಗಾಗಲೇ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಆರಂಭವಾಗಿದೆ” ಎಂದು ಅರಾವಳಿ ಪೊಲೀಸ್ ಠಾಣೆಯ ಅಧಿಕಾರಿ ಹೇಮ್ರಾಜ್ ಮೀನಾ ಹೇಳಿದ್ದಾರೆ.
ಈಗಾಗಲೇ ಕೌಶಲೇಂದ್ರನ ಆಶ್ರಮಕ್ಕೆ ತೆರಳಿ ಪರಿಶೀಲಿಸಲಾಗಿದ್ದು, ಆತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story