ಬಿಹಾರ ಸರಕಾರದ ಖಾತೆಯಿಂದ ಎನ್ಜಿಒಗೆ ಹಣ ಅಕ್ರಮ ವರ್ಗಾವಣೆ
ಪಾಟ್ನಾ, ಸೆ. 22: ಬಿಹಾರ ಸರಕಾರದ 13 ಕೋ. ರೂ. ನಿಧಿಯನ್ನು ಭಾಗಲ್ಪುರ್ ಜಿಲ್ಲೆಯ ಕಹಾಲ್ಗಾಂವ್ ಬ್ಲಾಕ್ನ ಸೃಜನ್ ಮಹಿಳಾ ಸಹಯೋಗ್ ಸಮಿತಿಗೆ ಅಕ್ರಮವಾಗಿ ವರ್ಗಾಯಿಸಿರುವುದಕ್ಕೆ ಸಂಬಂಧಿಸಿ ಗುರುವಾರ ತಡರಾತ್ರಿ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪಾಟ್ನಾದಿಂದ 190 ಕಿ.ಮೀ. ಪೂರ್ವಕ್ಕಿರುವ ಭಾಗಲ್ಪುರದಲ್ಲಿರುವ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಇಂಡಿಯನ್ ಬ್ಯಾಂಕ್ನ ಶಾಖೆಗಳಿಂದ ಬ್ಲಾಕ್ ಅಭಿವೃದ್ಧಿ ಕಚೇರಿಯ ಖಾತೆಯಿಂದ ಹಣ ಸೃಜನ್ ಖಾತೆಗೆ ವರ್ಗಾವಣೆಯಾಗಿರುವುದನ್ನು ಪತ್ತೆಹಚ್ಚಿದ ಬಳಿಕ ಕಹಾಲ್ಗಾಂವ್ನ ಬ್ಲಾಕ್ ಅಭಿವೃದ್ಧಿ ಅಧಿಕಾರಿ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿ ದಾಖಲಿಸಿದ್ದಾರೆ.
Next Story