ಏಷ್ಯಾಕಪ್ ಹಾಕಿ: ಭಾರತ –ದಕ್ಷಿಣ ಕೊರಿಯಾ ಪಂದ್ಯ ಡ್ರಾ
ಢಾಕಾ, ಅ.18: ಗುರ್ಜಂತ್ ಸಿಂಗ್ ಕೊನೆಯ ನಿಮಿಷದಲ್ಲಿ ದಾಖಲಿಸಿದ ಗೋಲು ನೆರವಿನಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಏಷ್ಯಾಕಪ್ ಹಾಕಿಯ ಸೂಪರ್ -4 ಹಂತದ ಪಂದ್ಯವನ್ನು ಭಾರತ ಡ್ರಾನಲ್ಲಿ ಕೊನೆಗೊಳಿಸುವಲ್ಲಿ ಯಶಸ್ವಿಯಾಗಿದೆ.
ಬುಧವಾರ ನಡೆದ ಪಂದ್ಯದಲ್ಲಿ ಕೊರಿಯಾದ ಲೀ ಜುಂಗ್ಯುನ್ 41ನೆ ನಿಮಿಷದಲ್ಲಿ ಗೋಲು ದಾಖಲಿಸಿದ್ದರು. ಆದರೆ ಭಾರತಕ್ಕೆ ಗೋಲು ದಾಖಲಿಸುವ ಸಾಧ್ಯವಾಗದೆ ಸೋಲಿನ ದವಡೆ ಸಿಲುಕಿದ್ದಾಗ ಸ್ರೈಕರ್ ಗುರ್ಜಂತ್ ಸಿಂಗ್ ಆಟದ ಅಂತಿಮ ನಿಮಿಷದಲ್ಲಿ ಗೋಲು ಬಾರಿಸಿ ಭಾರತದ ಹಾಕಿ ತಂಡವನ್ನು ಸಂಕಷ್ಟದಿಂದ ಪಾರು ಪಾರು ಮಾಡಿದರು. ಪಂದ್ಯ ವನ್ನು 1-1 ಗೋಲುಗಳಿಂದ ಸಮಬಲ ಸಾಧಿಸುವಲ್ಲಿ ನೆರವಾದರು.
ಭಾರತ ಗುರುವಾರ ಸೂಪರ್ -4 ಹಂತದ ಎರಡನೆ ಪಂದ್ಯದಲ್ಲಿ ಮಲೇಷ್ಯಾವನ್ನು ಎದುರಿಸಲಿದೆ.
Next Story