ಉಮಾ ಉಳ್ಳಾಲ್
ಮಂಗಳೂರು, ಮೇ 26: ನಗರದ ಕಂಬಳ ರಸ್ತೆಯಲ್ಲಿರುವ ಉಳ್ಳಾಲ್ ನರ್ಸಿಂಗ್ ಹೋಮ್ನ ಸ್ಥಾಪಕ ಡಾ. ರಾಮಚಂದ್ರ ಉಳ್ಳಾಲ್ ಅವರ ಪತ್ನಿ ಉಮಾ ಉಳ್ಳಾಲ್ (79) ಶುಕ್ರವಾರ ರಾತ್ರಿ ನಿಧನ ಹೊಂದಿದರು.
ಜನಸಂಘ, ಆರ್ಎಸ್ಎಸ್, ವಿಶ್ವ ಹಿಂದು ಪರಿಷತ್ನಲ್ಲಿ ಸಕ್ರಿಯ ಕಾರ್ಯಕರ್ತೆಯಾಗಿದ್ದ ಅವರು ಗುಲ್ಬರ್ಗದಲ್ಲಿ ಇನ್ನರ್ ವೀಲ್ ಕ್ಲಬ್ನ ಡಿಸ್ಟ್ರಿಕ್ಟ್ ಅಧ್ಯಕ್ಷರಾಗಿದ್ದರು. ಅಲ್ಲದೆ ಗುಲ್ಬರ್ಗದಲ್ಲಿ ಸ್ಟೀಲ್ ಫ್ಯಾಬ್ರಿಕೇಶನ್ ಯುನಿಟ್ ಸ್ಥಾಪಿಸಿದ್ದರು. ಜಿಲ್ಲಾ ಮೆಡಿಕಲ್ ಆಫೀಸರ್ ಆಗಿದ್ದ ತನ್ನ ಪತಿ ಡಾ. ರಾಮಚಂದ್ರ ಅವರೊಂದಿಗೆ 1989ರಲ್ಲಿ ಉಳ್ಳಾಲ್ ನರ್ಸಿಂಗ್ ಹೋಮ್ ಸ್ಥಾಪನೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದರು, ಬಳಿಕ 1998ರಲ್ಲಿ ನರ್ಸಿಂಗ್ ಹೋಮ್ ಇನ್ಸ್ಟಿಟ್ಯೂಷನ್ ಸ್ಥಾಪಿಸಿದ್ದರು. 2003ರಲ್ಲಿ ಸಾಧಕ ಪ್ರಶಸ್ತಿಗೆ ಪಾತ್ರರಾಗಿದ್ದರು.
ಮೃತರು ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
Next Story