ಕೊಣಾಜೆ: ನಡುಪದವಿನ ಸುಲೈಮಾನ್ ಹಾಜಿ (79) ಅವರು ಬುಧವಾರ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಇವರು ಪತ್ನಿ, ಪುತ್ರಿ ಹಾಗೂ ಮೂವರು ಪುತ್ರರನ್ನು ಅಗಲಿದ್ದಾರೆ.
ಕೃಷಿಕರಾಗಿದ್ದ ಸುಲೈಮಾನ್ ಹಾಜಿ ಅವರು ನಡುಪದವಿನ ಅಲ್ ಉಮರ್ ಜುಮ್ಮಾ ಮಸೀದಿಯ ಸ್ಫಾಪಕಾಧ್ಯಕ್ಷರಾಗಿದ್ದರು ಹಾಗೂ ನಡುಪದವಿನ ಹಯಾತುಲ್ ಇಸ್ಲಾಂ ಮದರಸದ ಸ್ಥಾಪಕರಾಗಿದ್ದರು.