ಲಯನ್ ದೇವಾನಂದ ರಾವ್
ಮುಲ್ಕಿ, ಡಿ.4: ಸುರತ್ಕಲ್ ನಿವಾಸಿ ಲಯನ್ ದೇವಾನಂದ ರಾವ್(75) ಮಂಗಳವಾರ ಮಧ್ಯಾಹ್ನ ನಿಧನ ಹೊಂದಿದ್ದಾರೆ.
ಇಂಡಿಯನ್ ಏರ್ಫೋರ್ಸ್ ನಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದ ಅವರು 1971ರಲ್ಲಿ ಇಂಡೋ-ಬಾಂಗ್ಲಾ ಯುದ್ಧದಲ್ಲೂ ಭಾಗವಹಿಸಿದ್ದ ಹೆಗ್ಗಳಿಕೆ ಹೊಂದಿದ್ದರು ಆ ಬಳಿಕ ಮಂಗಳೂರಿನ ಕೆಐಒಸಿಎಲ್ನಲ್ಲಿ ಉದ್ಯೋಗಿಯಾಗಿದ್ದರು. ಯಕ್ಷಗಾನ ಕಲಾವಿದರೂ ಆಗಿದ್ದ ದೇವಾನಂದ ರಾವ್ ಕಳೆದ 15 ವರ್ಷಗಳಿಂದ ಯಕ್ಷಗಾನ ಕಲಾವಿದರಾಗಿ ಗುರುತಿಸಿಕೊಂಡಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.
Next Story