ಉಸ್ಮಾನ್ ಎಳಿಯ
ಮೂಡುಬಿದಿರೆ: ಇಲ್ಲಿಗೆ ಸಮೀಪದ ಸಿದ್ಧಕಟ್ಟೆ ಎಂಬಲ್ಲಿನ ಸಂಗಬೆಟ್ಟು ನಿವಾಸಿ ಉಸ್ಮಾನ್ ಎಳಿಯ(68) ರವಿವಾರ ನಿಧನರಾಗಿದ್ದಾರೆ.
ಇವರು ಎಳಿಯ ಜುಮಾ ಮಸೀದಿಯ ಅಧ್ಯಕ್ಷರಾಗಿದ್ದು, ಜಿಲ್ಲಾ ಕಾಂಗ್ರೆಸಿನ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಸಂಗಬೆಟ್ಟು ವ್ಯಾಪ್ತಿಯಲ್ಲಿನ ಸಮಾಸ ಸೇವೆಯಲ್ಲಿ ನಿರತರಾಗಿದ್ದ ಇವರು ಪತ್ನಿ, ಇಬ್ಬರು ಗಂಡು, ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
Next Story