ವಿದ್ಯಾ ಕುಮಾರಿ
ಕಾಪು : ಕಾಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕಿ, ವಿದ್ಯಾ ಕುಮಾರಿ ಯು. (42) ಅವರು ಅಸೌಖ್ಯದಿಂದಾಗಿ ಕೊರಂಗ್ರಪಾಡಿಯ ಸ್ವಗೃಹದಲ್ಲಿ ರವಿವಾರ ನಿಧನಹೊಂದಿದರು.
ಮೃತರು ತಾಯಿ, ಪತಿ ಮತ್ತು ಪುತ್ರನನ್ನು ಅಗಲಿದ್ದಾರೆ.
2011ರಿಂದ ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಅವರು ಹಳೆ ವಿದ್ಯಾರ್ಥಿ ಸಂಘದ ಸಂಚಾಲಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು.
Next Story