ಉಮ್ಮರ್ ಕುಂಞಿ ಪೊಟ್ಟುಕೆರೆ
ವಿಟ್ಲ : ನೇರಳಕಟ್ಟೆ ಸಮೀಪದ ಕೆತ್ತೆಪುಳಿ ನಿವಾಸಿ ಉಮ್ಮರ್ ಕುಂಞಿ ಪೊಟ್ಟುಕೆರೆ (58) ಅವರು ಅಲ್ಪಕಾಲದ ಅನಾರೋಗ್ಯದಿಂದ ಗುರುವಾರ ರಾತ್ರಿ ಸ್ವಗೃಹದಲ್ಲಿ ನಿಧನರಾದರು.
ಮಿತ್ತೂರು ಸಿರಾಜುಲ್ ಹುದಾ ಮಸೀದಿ ಕೋಶಾಧಿಕಾರಿಯಾಗಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ.
Next Story