ಮುಹಮ್ಮದ್ ಅಮೀರ್
ಹೂಡೆ, ಮಾ.22: ಹಿರಿಯ ಸಾಮಾಜಿಕ ಕಾರ್ಯಕರ್ತ ಮುಹಮ್ಮದ್ ಅಮೀರ್(72) ಅಲ್ಪಕಾಲದ ಅಸೌಖ್ಯದಿಂದ ರವಿವಾರ ಸ್ವಗೃಹದಲ್ಲಿ ನಿಧನರಾದರು.
ಪರಿಸರದಲ್ಲಿ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಅಮೀರ್ ಶಿಕ್ಷಣ ಪ್ರೇಮಿಯಾಗಿ ಗುರುತಿಸಿಕೊಂಡಿದ್ದರು. ಹೂಡೆ ಉರ್ದು ಶಾಲೆಯ ಉಳಿವಿಗಾಗಿ ಹೋರಾಟ, ಅಂಜುಮನ್ ತಾಲೀಮಾತ್ ಮದ್ರಸದ ಏಳಿಗೆಗಾಗಿ ನಿರಂತರ ಶ್ರಮಿಸಿದ್ದರು.
ಮೃತರು ಪತ್ನಿ ಮತ್ತು ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
Next Story