ಮಂಗಳೂರು, ಎ.6: ಸುರತ್ಕಲ್ ಸಮೀಪದ ಕೃಷ್ಣಾಪುರದ ದಿ. ಗುಲಾಮಾಕ ಅವರ ಪತ್ನಿ ಝೈನಬಾ (73) ಅಲ್ಪಕಾಲದ ಅಸೌಖ್ಯದಿಂದ ತನ್ನ ಸ್ವಗೃಹದಲ್ಲಿ ರವಿವಾರ ರಾತ್ರಿ ನಿಧನರಾದರು.
ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಜಿಎ ಬಾವಾ ಅವರ ಸಹೋದರಿಯಾಗಿರುವ ಮೃತರು ಮೂವರು ಪುತ್ರರು ಮತ್ತು ನಾಲ್ಕು ಮಂದಿ ಪುತ್ರಿಯರ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.