ಕ್ರಿಸ್ಟಿನ್ ಡಿ’ಸಿಲ್ವಾ
ಕುಂದಾಪುರ, ಮೇ 3: ಸ್ಥಳೀಯ ಕುಂದೇಶ್ವರ ದೇವಸ್ಥಾನದ ಹಿಂಬದಿಯ ಶಕ್ತಿಕೃಪಾ ರಸ್ತೆಯ ನಿವಾಸಿ ಕ್ರಿಸ್ಟಿನ್ ಡಿ’ಸಿಲ್ವಾ(77 )ಅಲ್ಪಕಾಲದ ಅಸೌಖ್ಯದಿಂದ ರವಿವಾರ ವುಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು.
ಸರಕಾರಿ ಆರೋಗ್ಯ ಸಂದರ್ಶಕಿಯಾಗಿ ಕೋಟೇಶ್ವರ, ಕುಂಭಾಸಿ, ಕೋಟ, ಗಂಗೊಳ್ಳಿ ಸಹಿತ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ 30ವರ್ಷಕ್ಕೂ ಅಧಿಕ ಕಾಲ ಸೇವೆ ಸಲ್ಲಿಸಿದ್ದರು. ಕುಂದಾಪುರ ಹೋಲಿ ರೋಜರಿ ಇಗರ್ಜಿಯ ಹಲವು ಸಂಘ ಸಂಸ್ಥೆಗಳಲ್ಲಿ ಸಾಮಾಜಿಕ ಸೇವೆ ಸಲ್ಲಿಸಿದ್ದ ಇವರು ಪುತ್ರಿ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
Next Story