ಚೈಬಾವು ಚೊಕ್ಕಬೆಟ್ಟು
ಮಂಗಳೂರು, ಜು.28: ಉದ್ಯಮಿ ಚೈಬಾವು ಚೊಕ್ಕಬೆಟ್ಟು (70) ಸ್ವಗೃಹದಲ್ಲಿ ಸೋಮವಾರ ನಿಧನರಾದರು.
ಇವರು ಉದ್ಯಮಿ, ಗುತ್ತಿಗೆದಾರರಾಗಿ, ರಾಜ್ಯ ಕಾಂಗ್ರೆಸ್ ನಾಯಕರಾಗಿ ಗುರುತಿಸಿಕೊಂಡಿದ್ದರು. ಈ ಮೊದಲು ಕಾಟಿಪಳ್ಳ ಮಂಡಲ ಪಂಚಾಯತ್ನ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದರು. ಸುರತ್ಕಲ್ ಆಟೊ ರಿಕ್ಷಾ ಚಾಲಕ ಮಾಲಕರ ಸಂಘದ ಗೌರವಾಧ್ಯಕ್ಷರಾಗಿದ್ದರು. ಧಾರ್ಮಿಕ, ಸಮಾಜ ಸೇವಾ ಸಂಸ್ಥೆಗಳಲ್ಲಿ ಗೌರವಧ್ಯಕ್ಷರಾಗಿ ಕೊಡುಗೈ ದಾನಿಯಾಗಿದ್ದರು.
ಮೃತರು ಪತ್ನಿ, ಪುತ್ರ, ಆರು ಪುತ್ರಿಯರು ಸಹಿತ ಅಪಾರ ಬಂಧು-ಬಳಗ ಅಗಲಿದ್ದಾರೆ.
Next Story