ಗುರುಪುರ, ಸೆ.14:ತೆಂಕಎಡಪದವು ಕಾಲೇಜು ಬಳಿಯ ನಿವಾಸಿ ಚಾರ್ಲ್ಸ್ ಪಿಂಟೊ (82) ಅಲ್ಪಕಾಲದ ಅನಾರೋಗ್ಯದಿಂದ ಸೆ.10ರಂದು ನಿಧನರಾದರು.
ಮೂಡುಪೆರಾರ ಸೈಂಟ್ ಫ್ರಾನ್ಸಿಸ್ ಝೇವಿಯರ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 38 ವರ್ಷ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿರುವ ಅವರು ಒಬ್ಬ ಪುತ್ರ, ಮೂವರು ಪುತ್ರಿಯರನ್ನು ಅಗಲಿದ್ದಾರೆ.