ಜೆರಾಲ್ಡ್ ಡೇಸಾ ಇನೋಳಿ
ಮಂಗಳೂರು,ಡಿ.2: ಪಾವೂರು ಗ್ರಾಮದ ಇನೋಳಿ ಕಂಬ್ಳಪದವು ನಿವಾಸಿ ದಿ.ಜಾನ್ ಬ್ಯಾಪ್ಟಿಸ್ಟ್ ಡೇಸಾರ ಪುತ್ರ ಜೆರಾಲ್ಡ್ ಡೇಸಾ (51) ಹೃದಯಾಘಾತದಿಂದ ಶುಕ್ರವಾರ ಮಂಗಳೂರಿನಲ್ಲಿ ನಿಧನರಾದರು.
ಮಂಗಳೂರಿನಿಂದ ಇನೋಳಿ ಧರ್ಮನಗರಕ್ಕೆ ಹೋಗುವ ಬಸ್ಸೊಂದರ ಮಾಲಕರಾಗಿದ್ದ ಅವರು ಶುಕ್ರವಾರ ಸಂಜೆ ವೇಳೆ ಕೆಲಸ ಮುಗಿಸಿ ಮನೆಗೆ ತೆರಳುವ ನಿಟ್ಟಿನಲ್ಲಿ ಮಂಗಳೂರು ಸ್ಟೇಟ್ಬ್ಯಾಂಕ್ನಲ್ಲಿರುವ ಬಸ್ ತಂಗುದಾಣದಲ್ಲಿ ಬಸ್ಸಿಗೆ ಕಾಯುತ್ತಿದ್ದರು.
ಈ ಸಂದರ್ಭ ತೀವ್ರ ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದಿದ್ದು, ತಕ್ಷಣ ವೆನ್ಲಾಕ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಪ್ರಯೋಜನವಾಗಲಿಲ್ಲ. ಅವಿವಾಹಿತರಾಗಿದ್ದ ಮೃತರಿಗೆ ಮೂವರು ಸಹೋದರಿಯರು ಹಾಗೂ ಸಹೋದರರು ಇದ್ದಾರೆ.
Next Story