ನಿಧನ: ಕೆ. ಪ್ರೇಮಾ
ಕಾಸರಗೋಡು : ಕಾಸರಗೋಡು ನಗರಸಭಾ ಬಿಜೆಪಿ ಸದಸ್ಯೆ ಕೆ . ಪ್ರೇಮಾ ( 41) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ರಾತ್ರಿ ನಿಧನರಾದರು.
ಅಸ್ವಸ್ಥಗೊಂಡಿದ್ದ ಪ್ರೇಮಾ ರವರನ್ನು ಮೂರು ದಿನಗಳ ಹಿಂದೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ನಗರಸಭೆಯ 34 ನೇ ಕಸಬಾ ಕಡಪ್ಪುರದ ಸದಸ್ಯೆಯಾಗಿದ್ದರು.
2016ರ ನವಂಬರ್ ನಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು 73ಮತಗಳ ಅಂತರದಿಂದ ಸೋಲಿಸಿ ನಗರಸಭೆಗೆ ಆಯ್ಕೆಯಾಗಿದ್ದರು.
ಪತಿ , ಇಬ್ಬರು ಮಕ್ಕಳು ಸೇರಿದಂತೆ ಬಂಧು ಬಳಗವನ್ನು ಅಗಲಿದ್ದಾರೆ
Next Story