ಪ್ರೇಮಾ
ಕಾಸರಗೋಡು, ಮಾ.5: ಕಾಸರಗೋಡು ನಗರಸಭಾ ಬಿಜೆಪಿ ಸದಸ್ಯೆ ಕೆ.ಪ್ರೇಮಾ(41) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ರಾತ್ರಿ ನಿಧನರಾದರು.
ಅಸ್ವಸ್ಥಗೊಂಡಿದ್ದ ಪ್ರೇಮಾರನ್ನು ಮೂರು ದಿನಗಳ ಹಿಂದೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತೆನ್ನಲಾಗಿದೆ. ಇವರು ನಗರಸಭೆಯ 34ನೆ ಕಸಬಾ ಕಡಪ್ಪುರದ ಸದಸ್ಯೆಯಾಗಿದ್ದರು. ಮೃತರು ಪತಿ, ಇಬ್ಬರು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
Next Story