ಉಪ್ಪಿನಂಗಡಿ, ಮಾ.13: ಕೊಲ ನಿವಾಸಿ ಇಬ್ರಾಹೀಂ ಕೊಲ(75) ಕೆಲ ದಿನಗಳ ಅನಾರೋಗ್ಯದಿಂದ ಮಾ.12ರಂದು ತನ್ನ ಮನೆಯಲ್ಲಿ ನಿಧನ ಹೊಂದಿದರು.
ಇಬ್ರಾಹೀಂ ಕೊಲ ಪಶು ಸಂಗೋಪನಾ ಕ್ಷೇತ್ರದಲ್ಲಿ ಸುಮಾರು 40ವರ್ಷಗಳ ಕಾಲ ಕಾವಲುಗಾರರಾಗಿ ಸೇವೆ ಸಲ್ಲಿಸಿ ಕೆಲ ವರ್ಷಗಳ ಹಿಂದೆ ನಿವೃತ್ತಿ ಹೊಂದಿದ್ದರು. ಮೃತರು ಇಬ್ಬರು ಪತ್ನಿ, 6 ಗಂಡು, 5ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.