ಎಂ.ಜಿ.ರಾವ್
ಉಡುಪಿ, ಆ.20: ಉಡುಪಿಯ ಖ್ಯಾತ ಛಾಯಾಚಿತ್ರಗಾರ, ವಾಸ್ತು ತಜ್ಞ ಎಂ.ಜಿ.ರಾವ್ (69) ರವಿವಾರ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು. ಮೃತರು ಪತ್ನಿ, ಪುತ್ರಿ ಹಾಗೂ ಸಹೋದರ, ಸಹೋದರಿಯರನ್ನು ಅಗಲಿದ್ದಾರೆ.
ಡಿಪ್ಲೊಮಾ ಪದವೀಧರರಾದ ಎಂ.ಜಿ.ರಾವ್ ತರಂಗ ವಾರಪತ್ರಿಕೆಯಲ್ಲಿ ಹಾಗೂ ಉಡುಪಿಯ ಅಷ್ಠಮಠಗಳ ಛಾಯಾಗ್ರಾಹಕರಾಗಿ, ಫೋಟೊಗ್ರಫಿ ಕ್ಷೇತ್ರದಲ್ಲಿ 35 ವರ್ಷಗಳ ಕಾಲ ವಿಶೇಷ ಸೇವೆ ಸಲ್ಲಿಸಿ ಜನಪ್ರಿಯರಾಗಿದ್ದರು.
Next Story