ರಮಿಝಾಬಿ
ಮೂಡಿಗೆರೆ, ಆ.28: ಜಾತ್ಯಾತೀತ ಜನತಾದಳದ ಅಲ್ಪಸಂಖ್ಯಾತವಿಭಾಗದ ಕ್ಷೇತ್ರದ ಸಮಿತಿ ಅಧ್ಯಕ್ಷ ಶಬ್ಬೀರ್ ಅಹಮ್ಮದ್ ಅವರ ತಾಯಿ ರಮಿಝಾಬಿ(85) ಭಾನುವಾರ ರಾತ್ರಿ ನಿಧನರಾದರು.
ಅವರು 4 ಮಂದಿ ಗಂಡು ಮಕ್ಕಳು ಹಾಗೂ 2 ಮಂದಿ ಹೆಣ್ಣು ಮಕ್ಕಳು, ಅಳಿಯಂದಿರು, ಮೊಮ್ಮಕ್ಕಳ ಸಹಿತ ಅನೇಕ ಬಂಧು-ಬಳಗದವರನ್ನು ಅಗಲಿದ್ದಾರೆ.
ರಮಿಝಾಬಿ ನಿಧನಕ್ಕೆ ಶಾಸಕ ಬಿ.ಬಿ.ನಿಂಗಯ್ಯ, ಎಂಎಲ್ಸಿ ಡಾ. ಮೋಟಮ್ಮ, ಪಪಂ ಅಧ್ಯಕ್ಷೆ ರಮೀಝಾಬಿ, ಸದಸ್ಯ ಕೆ.ವೆಂಕಟೇಶ್, ಕರ್ನಾಟಕ ರಾಜ್ಯ ಬ್ಯಾರೀ ಸಾಹಿತ್ಯ ಅಕಾಡೆಮಿ ಸದಸ್ಯ ಕಿರುಗುಂದ ಅಬ್ಬಾಸ್, ಮಲೆನಾಡು ಮುಸ್ಲಿಂ ವೇದಿಕೆ ಅಧ್ಯಕ್ಷ ಸಿ.ಕೆ.ಇಬ್ರಾಹೀಂ, ಕಾಯಾಧ್ಯಕ್ಷ ಅಬ್ರಾರ್ ಬಿದರಹಳ್ಳಿ, ಮುಖಂಡರಾದ ಎ.ಸಿ.ಅಯ್ಯೂಬ್ ಹಾಜಿ, ಬದ್ರಿಯಾ ಮಸೀದಿ ಅಧ್ಯಕ್ಷ ಎಂ.ಎ.ಹಮ್ಮಬ್ಬ, ಶರೀಫ್ ಮೈಸ್, ಇಬ್ರಾಹೀಂ ಯಾದ್ಗಾರ್ ಸಂತಾಪ ಸೂಚಿಸಿದ್ದಾರೆ.
Next Story