ಶೌಚಾಲಯ ಸುಲಿಗೆ ನಿಲ್ಲಿಸಿ
ಮಾನ್ಯರೇ,
ಹೆಚ್ಚಿನ ಶೌಚಾಲಯಗಳಲ್ಲಿ ಮೂತ್ರಶಂಕೆ ಮತ್ತು ಶೌಚ ಕಾರ್ಯಕ್ಕೆ ಪ್ರತ್ಯೇಕ ಹಣ ನಿಗದಿಯಾಗಿರುತ್ತದೆ. ಆದರೆ ಪುತ್ತೂರು ಸರಕಾರಿ ಬಸ್ ನಿಲ್ದಾಣಗಳಲ್ಲಿರುವ ಮಹಿಳಾ ಶೌಚಾಲಯದಲ್ಲಿ ಇಂತಹ ಮಾನದಂಡವನ್ನು ಬಿಟ್ಟು ಯಾವುದೇ ಬಳಕೆಗೂ 5 ರೂಪಾಯಿ ತೆಗೆದುಕೊಳ್ಳುತ್ತಿದ್ದಾರೆ.
ಇಂತಹ ವಸೂಲಿಗೆ ಯಾವುದೇ ದರ ಫಲಕಗಳಿಲ್ಲ. ಮಹಿಳೆಯರು ಇಂತಹ ಶೌಚಾಲಯವನ್ನು ಹೊಕ್ಕರೆ ಅನಿವಾರ್ಯವಾಗಿ ಅವರು ಕೇಳಿದ ಹಣ ಪಾವತಿಸಲೇ ಬೇಕಾಗುತ್ತದೆ.
ಒಂದೊಮ್ಮೆ ಇದೇ ನಿಗದಿಪಡಿಸಿದ ದರವಾಗಿದ್ದರೆ ದರ ಪಟ್ಟಿ ಪ್ರಕಟಿಸಿ ವಸೂಲಿ ಮಾಡಬಹುದಿತ್ತಲ್ಲವೇ?
ಆದ್ದರಿಂದ ಸಂಬಂಧಪಟ್ಟವರು ಈ ಶೌಚಾಲಯ ಸುಲಿಗೆಯನ್ನು ಗಮನಿಸಿ ಕೂಡಲೇ ಕ್ರಮಕೈಗೊಳ್ಳಬೇಕಾಗಿದೆ.
Next Story