ತ್ರಿಪುರಾ ಜನತೆಗೆ ಅಭಿನಂದನೆಗಳು

ಮಾನ್ಯರೇ,

ದೊಡ್ಡ ಭೂಮಾಲಕರು, ಉದ್ಯಮಪತಿಗಳು, ಕಮ್ಯುನಿಸ್ಟರ ಕಟ್ಟುನಿಟ್ಟಿನ ಆಡಳಿತದಿಂದಾಗಿ ಭ್ರಷ್ಟಾಚಾರ ಮಾಡಲಾಗದ ಅಧಿಕಾರಿಗಳು ಮತ್ತು ಗುತ್ತಿಗೆದಾರರು, ಜನರಲ್ಲಿ ಸಾಕ್ಷರತೆ ಬೆಳೆಯು ತ್ತಿದ್ದಂತೆ ಧಾರ್ಮಿಕ ಭಾವನೆ ಕೆರಳಿಸಿ ಲಾಭ ಪಡೆಯಲಾಗದ ಮೂಲಭೂತವಾದಿಗಳು, ಒಟ್ಟಿನಲ್ಲಿ ಹೇಳುವುದಾದರೆ ಸಮಾಜವಾದ ವ್ಯವಸ್ಥೆಯ ವಿರೋಧಿಗಳು ಮೊದಲು ಕಾಂಗ್ರೆಸ್ ಪಕ್ಷ ಸೇರಿ ಕಮ್ಯುನಿಸ್ಟರ ವಿರುದ್ಧ ಹೋರಾಡಿದರು. 20 ವರ್ಷ ಶ್ರಮಪಟ್ಟರೂ ಕಮ್ಯುನಿಸ್ಟರನ್ನು ಸೋಲಿಸಲಾಗಲಿಲ್ಲ. ನಂತರ ತೃಣಮೂಲ ಕಾಂಗ್ರೆಸ್‌ನ ವೇಷ ತೊಟ್ಟರು. ಅದರಿಂದಲೂ ಸಾಧ್ಯವಿಲ್ಲ ಅನಿಸಿದಾಗ ಕೇಸರಿ ವೇಷ ತೊಟ್ಟು, ಪ್ರತ್ಯೇಕತಾವಾದಿಗಳನ್ನೂ ಜೊತೆಗೆ ಸೇರಿಸಿಕೊಂಡು, ಹಣಬಲ, ಮಾಧ್ಯಮಗಳ ಪ್ರಚಾರದ ಬೆಂಬಲ ಪಡೆದು ಕೊನೆಗೂ ಕಮ್ಯುನಿಸ್ಟರನ್ನು ತ್ರಿಪುರಾ ರಾಜ್ಯದ ಅಧಿಕಾರದಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾದರು. ಅಷ್ಟರಲ್ಲಿ ತ್ರಿಪುರಾ ಜನತೆ ಸಾಕ್ಷರತೆಯಲ್ಲಿ ಪ್ರಥಮ ಸ್ಥಾನದಲ್ಲಿ ನಿಂತಿದ್ದರು. ಗುಡ್ಡಗಾಡು, ಕಾಡುಮೇಡುಗಳಲ್ಲಿನ ಜನರೂ ಅಕ್ಷರ ಕಲಿತರು.
ದೇಶದೆಲ್ಲೆಡೆ ಕೋಮು ಗಲಭೆ ಹಬ್ಬಿದ್ದಾಗಲೂ, ತ್ರಿಪುರಾದಲ್ಲಿ ಕೋಮುಗಲಭೆ ನಡೆಯದಂತೆ ನೋಡಿಕೊಂಡರು.
ಪ್ರತ್ಯೇಕತಾವಾದಿ ಉಗ್ರ ಸಂಘಟನೆಗಳ ನಿರಂತರ ದಾಳಿಯಿಂದ ಭಯಭೀತರಾಗಿದ್ದ ಈಶಾನ್ಯ ರಾಜ್ಯಗಳಲ್ಲಿ ಒಂದಾದ ತ್ರಿಪುರಾ ರಾಜ್ಯದ ಜನ ಶಾಂತಿಯ ವಾತಾವರಣ ಸೃಷ್ಟಿಸಿಕೊಂಡರು. ಶಾಂತಿ ಕಾಪಾಡಲೆಂದೇ ಬಂದಿದ್ದ ಸೈನ್ಯ ತ್ರಿಪುರಾದಿಂದ ಮರಳಿತು. ಈಶಾನ್ಯದ ಇತರ ರಾಜ್ಯಗಳಲ್ಲಿ ಬಂಡುಕೋರರ ಅಟ್ಟಹಾಸ ಇನ್ನೂ ಮುಂದುವರಿದಿದೆ. ಅಲ್ಲಿ ಶಾಂತಿ ಕಾಪಾಡಲು ಸೈನಿಕರು ಇನ್ನೂ ಇದ್ದಾರೆ.
 ಭೂಸುಧಾರಣೆ ಮೂಲಕ ಲಕ್ಷಾಂತರ ಭೂರಹಿತ ಕೃಷಿಕರು ಕೃಷಿ ಭೂಮಿ ಪಡೆದುಕೊಂಡರು. ಸರಕಾರದ ಅನುದಾನ ಸೋರಿಕೆಯಾಗದಂತೆ ತಡೆದರು. ಅರ್ಹ ಫಲಾನುಭವಿಗಳಿಗೆ ಸರಕಾರದ ಸೌಲಭ್ಯ ದೊರೆಯುವಂತೆ ನೋಡಿಕೊಂಡರು. ಭ್ರಷ್ಟಾಚಾರ ರಹಿತ ಆಡಳಿತ ನಡೆಸುವುದು ಹೇಗೆಂದು ಜಗತ್ತಿಗೇ ತೋರಿಸಿಕೊಟ್ಟರು. ಸರಳ, ಸಜ್ಜನ ಮುಖ್ಯಮಂತ್ರಿಯನ್ನು ಇಡೀ ಜಗತ್ತಿಗೇ ಪರಿಚಯಿಸಿದರು. ಬಂಡವಾಳಶಾಹಿ ವ್ಯವಸ್ಥೆಯೊಂದರಲ್ಲಿ, ವಿರೋಧಿಗಳ ಹಲವು ಕುತಂತ್ರಗಳು, ದಾಳಿ ದಬ್ಬಾಳಿಕೆ ಎದುರಿಸಿ ನಿಂತು, ಸತತ 25 ವರ್ಷಗಳ ಕಾಲ ಕಮ್ಯುನಿಸ್ಟರನ್ನು ಅಧಿಕಾರಕ್ಕೆ ತಂದ ತ್ರಿಪುರಾ ಜನತೆಗೆ ಅಭಿನಂದನೆಗಳು.
 

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top