ಅಸಾಮಾನ್ಯ ವ್ಯಕ್ತಿತ್ವದ ಸರಳ ಸಜ್ಜನ ಅಬ್ದುಲ್ ಕಲಾಂ ನೆನಪು

ನಮ್ಮ ರಾಷ್ಟ್ರದ ರಾಷ್ಟ್ರಪತಿಗಳಲ್ಲಿ ಒಬ್ಬರ ಹೆಸರು ಹೇಳಿ ಎಂದು ಸಣ್ಣ ಮಕ್ಕಳಲ್ಲಿ ಕೇಳಿದರೂ ಥಟ್ಟನೆ ಬರುವ ಉತ್ತರ ಅದು ಎಪಿಜೆ ಕಲಾಂ ಅವರದ್ದು. ಅಜಾತಶತ್ರುವೆಂದೇ ಖ್ಯಾತರಾದ ಕಲಾಂ ಮುಸ್ಲಿಂ ಸಮುದಾಯದ ಬಡ ಕುಟುಂಬದಲ್ಲಿ ತಮಿಳುನಾಡು ರಾಜ್ಯದ ರಾಮೇಶ್ವರಂನಲ್ಲಿ ಅಕ್ಟೋಬರ್ 15, 1931ರಂದು ಜನಿಸಿದರು. ತಾನು, ನಾಲ್ಕುಜನ ಸಹೋದರರು ಮತ್ತು ಒಬ್ಬ ಅಕ್ಕನಿದ್ದ ಕುಟುಂಬದಲ್ಲಿ ತಂದೆ ತಾಯಿ ಸಂಸಾರವನ್ನು ಸಾಗಿಸಲು ಪಡುತ್ತಿದ್ದ ಕಷ್ಟವನ್ನು ನೋಡಿ, ಕಲಾಂ ತಮ್ಮ ಚಿಕ್ಕ ವಯಸ್ಸಿನಲ್ಲೇ ಮನೆ ಮನೆಗೆ ಪತ್ರಿಕೆಯನ್ನು ಹಾಕುತ್ತಿದ್ದವರು. ರಾಮೇಶ್ವರಂನ ಸ್ವಲ್ಪ ದೂರದಲ್ಲಿ ಇದ್ದ ರಾಮನಾಥಪುರಂ ಶಾಲೆಯಲ್ಲಿ ಹತ್ತನೇ ತರಗತಿಯವರೆಗೂ ಓದಿದರು. ಚಿಕ್ಕ ವಯಸ್ಸಿನಿಂದಲೇ ಹೊಸ ಹೊಸ ವಿಷಯಗಳನ್ನು ಕಲಿಯಬೇಕು ಎಂಬ ಆಸೆಯಿಂದಾಗಿ ಕಲಿಯುವುವಿಕೆಯಲ್ಲಿ ತರಗತಿಯಲ್ಲಿ ಎಲ್ಲರಿಗಿಂತಲೂ ಮುಂದಿದ್ದವರು.

ಒಮ್ಮೆ ತರಗತಿಯ ಶಿಕ್ಷಕರು ಸಮುದ್ರದ ತೀರಕ್ಕೆ ಎಲ್ಲಾ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ ಸಮುದ್ರದ ಅನುಕೂಲ ಮತ್ತು ಅನನುಕೂಲದ ಬಗ್ಗೆ ಪಾಠ ಹೇಳಿಕೊಡುತ್ತಾ ‘‘ಸಮುದ್ರದ ತಟದಲ್ಲಿ ಪಕ್ಷಿಗಳು ಏಕೆ ಹಾರಾಟ ಮಾಡುತ್ತವೆ? ಹೇಗೆ ಹಾರಾಟ ಮಾಡುತ್ತಿವೆ?’’ ಎಂಬ ಕುತೂಹಲಭರಿತ ಪ್ರಶ್ನೆ ಕೇಳಿದಾಗ ಕಲಾಂ ಅವರು ತಾನು ಕೂಡಾ ಆಕಾಶದಲ್ಲಿ ಹಾರಾಡಬೇಕು ಮತ್ತು ಪೈಲೆಟ್ ಆಗಬೇಕು ಎಂದು ಕನಸು ಕಂಡವರು. ಬಳಿಕ ತಿರುಚಿಯ ಸೈಂಟ್ ಜೋಸೆಫ್ ಕಾಲೇಜಿನಲ್ಲಿ ಪದವಿ ಮುಗಿಸುತ್ತಾರೆ. ಆನಂತರ ಪೈಲೆಟ್ ಕನಸು ನನಸು ಮಾಡಲು ಮದ್ರಾಸ್‌ನ ಎಂ.ಐ.ಟಿ. ಕಾಲೇಜು ಸೇರಬೇಕು ಅಂದುಕೊಂಡವರು. ಆದರೆ ಇಲ್ಲಿ ಪ್ರವೇಶ ಪಡೆಯಲು ಸಾವಿರಾರು ರೂಪಾಯಿ ಪ್ರವೇಶ ಶುಲ್ಕವನ್ನು ಕಟ್ಟಲು ಅವರ ತಂದೆಯ ಕೈಯಲ್ಲಿ ಸಾಧ್ಯವಾಗಲಿಲ್ಲ. ಆದರೆ ಕಲಾಂರ ಅಕ್ಕ ಈ ತಮ್ಮನ ಓದುವ ದಾಹವನ್ನು ನೀಗಿಸುವ ದೃಷ್ಟಿಯಿಂದ ತನ್ನ ಒಡವೆಗಳನ್ನು ಅಡವಿಟ್ಟು ಸಹಾಯ ಮಾಡುತ್ತಾರೆ. ತಂದೆ ಮತ್ತು ಅಕ್ಕನ ಸಹಾಯದಿಂದ ಓದುವ ಕಲಾಂರಿಗೆ ಚೆನ್ನಾಗಿ ವಿದ್ಯಾಭ್ಯಾಸ ಮಾಡಲೇಬೇಕು ಎಂಬ ಛಲ ಮೂಡುತ್ತದೆ. ಅಂತೆಯೇ ಸ್ಕಾಲರ್‌ಷಿಪ್ ಸಹಾಯದಿಂದ ಎಂ.ಐ.ಟಿ.ಯಲ್ಲಿ ಏರೋಸ್ಪೇಸ್ ಇಂಜಿನಿಯರ್ ಪದವಿಯನ್ನು ಮುಗಿಸುತ್ತಾರೆ. ಏರೋನಾಟಿಕ್ ಪ್ರವೇಶ ಪರೀಕ್ಷೆಯಲ್ಲಿ ಎಂಟು ಹುದ್ದೆಗಳಿದ್ದು ಇವರು 9ನೇ ರ್ಯಾಂಕ್ ಬಂದುದರಿಂದ ಸ್ವಲ್ಪದರಲ್ಲೇ ಪೈಲೆಟ್ ಆಗುವ ಅವಕಾಶವನ್ನು ಕಲಾಂ ಅವರು ಕಳೆದುಕೊಳ್ಳುತ್ತಾರೆ.

1960ರಲ್ಲಿ ಡಿ.ಆರ್.ಡಿ.ಒ. ನಲ್ಲಿ ಏರೋನಾಟಿಕ್ ಅಭಿವೃದ್ಧಿ ವಿಭಾಗದಲ್ಲಿ ವಿಜ್ಞಾನಿಯಾಗಿ ಕೆಲಸಕ್ಕೆ ಸೇರಿಕೊಂಡರು. ಭಾರತಸೇನೆಗೆ ಓವರ್‌ಕ್ರಾಪ್ಟ್ ಮಾಡುವುದು ಇವರ ಕೆಲಸವಾಗಿತ್ತು. ಕೆಲವು ದಿನಗಳ ನಂತರ ಇವರಿಗೆ ಇಸ್ರೊದಿಂದ ಕರೆಬರುತ್ತದೆ. ಈ ಸಂದರ್ಭದಲ್ಲಿ ಇವರನ್ನು ಪ್ರೊ. ವಿಕ್ರಮ್ ಸಾರಾಭಾಯಿ ಅವರು ಸಂದರ್ಶನ ಮಾಡುತ್ತಾರೆ. ಇಲ್ಲಿ ಕಲಾಂ ರಾಕೆಟ್ ಇಂಜಿನಿಯರ್ ಆಗಿ ಆಯ್ಕೆ ಆಗುತ್ತಾರೆ. ಪ್ರೊ. ವಿಕ್ರಮ್ ಸಾರ ಭಾಯಿ ಮತ್ತು ಕಲಾಂರವರು ಸೇರಿ ಇಸ್ರೊ ಸಂಸ್ಥೆಯನ್ನು ತುಂಬಾ ಅಭಿವೃದ್ಧಿ ಮಾಡುತ್ತಾರೆ.

1963-64ರ ಅವಧಿಯಲ್ಲಿ ಅಮೆರಿಕದ ನಾಸಾದಲ್ಲಿ ತರಬೇತಿ ಪಡೆದು ಬಂದ ಕಲಾಂ ಆನಂತರ ಪ್ರೊ. ಸಾರಾಭಾಯಿ ಮತ್ತು ಸತೀಶ್ ಅವರ ಸಹಾಯದಿಂದ ರಾಕೆಟ್ ಅನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡುತ್ತಾರೆ. ಆದರೆ ಈ ರಾಕೆಟ್ ಕೇವಲ 317 ಸೆಕೆಂಡ್‌ಗಳಲ್ಲಿ ಸ್ಫೋಟಗೊಂಡು ಸಮುದ್ರಕ್ಕೆ ಬೀಳುತ್ತದೆ. ಇದರಿಂದ ಧೃತಿಗೆಡದ ಕಲಾಂ ಛಲ ಮತ್ತು ಆತ್ಮವಿಶ್ವಾಸದಿಂದ ಮತ್ತೊಮ್ಮೆ ರಾಕೆಟ್ ಅಭಿವೃದ್ಧಿ ಮಾಡುತ್ತಾರೆ. ನಂತರ 1980 ಜುಲೈ 18 ರಂದು SLV-III ಉಡಾವಣಾ ವಾಹನದೊಂದಿಗೆ ರೋಹಿಣಿ ಎಂಬ ಸಾಟಲೈಟ್‌ನ್ನು ಅಂತರಿಕ್ಷಕ್ಕೆ ಯಶಸ್ವಿಯಾಗಿ ಸೇರಿಸುತ್ತಾರೆ. ಅಂತರಿಕ್ಷಕ್ಕೆ ಸಾಟಲೈಟ್‌ಗಳನ್ನು ಕಳುಹಿಸುವ ದೇಶಗಳಲ್ಲಿ ಭಾರತವು ಕಲಾಂ ಅವರಿಂದಾಗಿ ಸೇರ್ಪಡೆಗೊಳ್ಳುತ್ತದೆ. ಇಲ್ಲಿಂದಲೇ ನಮ್ಮ ದೇಶವು ಅಂತರಿಕ್ಷ ಪ್ರಯೋಗಗಳನ್ನು ಮಾಡಲು ಪ್ರಾರಂಭ ಮಾಡುತ್ತದೆ. ಇಲ್ಲಿಯವರೆಗೂ ಯಾವೊಬ್ಬ ವಿಜ್ಞಾನಿಯೂ ಈ ಸಾಧನೆಯನ್ನು ಮಾಡಿರಲಿಲ್ಲ. ಈ ಸಾಧನೆಯಿಂದ ಸಂತೋಷಗೊಂಡ ಆಗಿನ ಪ್ರಧಾನಮಂತ್ರಿಯಾಗಿದ್ದ ಇಂದಿರಾ ಗಾಂಧಿ 1981ರಲ್ಲಿ ‘ಪದ್ಮಭೂಷಣ’ ಪ್ರಶಸ್ತಿ ಕೊಟ್ಟು ಕಲಾಂರನ್ನು ಗೌರವಿಸಿದರು. ಆನಂತರ ಭಾರತದ ಸೇನಾಪಡೆಗಾಗಿ ಅಗ್ನಿ, ಪೃಥ್ವಿ, ನಾಗ್‌ನಂತಹ ಯುದ್ಧ ವಿಮಾನಗಳನ್ನು ತಯಾರಿಸಿ ನಮ್ಮ ದೇಶವು ಸೈನ್ಯದಲ್ಲಿ ತುಂಬಾ ಬಲಿಷ್ಠವಾಗಲು ಕಲಾಂ ಸಹಾಯಮಾಡುತ್ತಾರೆೆ. ಹೀಗಾಗಿಯೇ ಇವರನ್ನು ದೇಶದ ಜನತೆ ‘ಮಿಸೈಲ್ ಮ್ಯಾನ್ ಅಫ್ ಇಂಡಿಯಾ’ ಎಂದು ಕರೆದು ಗೌರವಿಸುತ್ತಾರೆ. ಇವರ ನಾಯಕತ್ವದಲ್ಲಿ ಇಸ್ರೋ ಪ್ರಪಂಚದಾದ್ಯಂತ ತುಂಬಾ ಹೆಸರು ಮಾಡುತ್ತದೆ.

ಕಲಾಂ ಅವರು ಕೇವಲ ವಿಜ್ಞಾನಿಯಾಗಿರದೆ ಮಾನವೀಯ ವ್ಯಕ್ತಿತ್ವವನ್ನು ಬೆಳಸಿಕೊಂಡಿದ್ದವರು. ತಮ್ಮ ಕೆಲಸದಲ್ಲಿ ಏನಾದರೂ ತೊಂದರೆ, ತಪ್ಪುಗಳು ಕಂಡುಬಂದರೆ ಆ ತೊಂದರೆಗಳನ್ನು ತಮ್ಮ ಮೇಲೆಯೇ ಹಾಕಿಕೊಳ್ಳುತ್ತಿದ್ದರು. ಯಾವ ಕಾರಣಕ್ಕೂ ತಮ್ಮ ಸಹೋದ್ಯೋಗಿಗಳನ್ನು ದೂರುತ್ತಿರಲಿಲ್ಲ. ಆದರೆ ತಮ್ಮ ಕೆಲಸದಲ್ಲಿ ಯಶಸ್ಸು ಕಂಡ ಸಂದರ್ಭದಲ್ಲಿ ಈ ಯಶಸ್ಸು ತಮ್ಮ ಎಲ್ಲಾ ಸಹೋದ್ಯೋಗಿಗಳಿಗೆ ಸೇರಿದ್ದು ಎಂದು ತುಂಬು ಮನಸ್ಸಿನಿಂದ ಹೇಳುತ್ತಿದ್ದರು. ಈ ಬಗೆಯ ವ್ಯಕ್ತಿತ್ವ ನಮ್ಮ ದೇಶದ ಉನ್ನತ ಅಧಿಕಾರಿಗಳು ಅಳವಡಿಸಿಕೊಂಡರೆ ಕೆಲಸ ಮಾಡುವ ಸಹೋದ್ಯೋಗಿಗಳೊಂದಿಗೆ ಉತ್ತಮ ಸಂಬಂಧ ಹಾಗೂ ಉತ್ತಮ ವಾತಾವರಣವನ್ನು ಸೃಷ್ಟಿಸಬಹುದು. ಕಲಾಂ ಅವರು ನಮ್ಮ ಅಧಿಕಾರಿಗಳಿಗೆ ಐಕಾನ್ ಆಗಬೇಕಾಗಿದೆ.

ಅವರ ವ್ಯಕ್ತಿತ್ವಕ್ಕೆ ಒಂದು ಉದಾಹರಣೆ ಎಂದರೆ ಡಿ.ಆರ್.ಡಿ.ಒ.ನಲ್ಲಿ ಉನ್ನತ ಆಧಿಕಾರಿಯಾಗಿದ್ದ ಸಂದರ್ಭದಲ್ಲಿ ಇವರ ಕಾರ್ ಡೈವರ್ ಆಗಿದ್ದ ಕದಿರೇಸನ್ ಎಂಬವರನ್ನು ಪಿ.ಜಿ.ವರೆವಿಗೂ ಓದಿಸಿದ್ದು. ಇವರ ಓದಿಗೆ ಬೇಕಾದ ಹಣದ ಸಹಾಯವನ್ನು ಕಲಾಂ ಅವರೇ ನೀಡಿದ್ದರು. ಇಂದು ಕಲಾಂ ಅವರ ಕಾರ್ ಡೈವರ್ ಉನ್ನತ ಶಿಕ್ಷಣ ಇಲಾಖೆಯಲ್ಲಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಈ ಬಗೆಯ ಸಹಕಾರ ನಮ್ಮ ಸಮಾಜಕ್ಕೆ ಒಂದು ಮಾದರಿ. ಇಂದು ಕೆಲವು ಉನ್ನತ ಅಧಿಕಾರಿಗಳು ತಮ್ಮ ಕಾರ್ ಡೈವರ್‌ಗಳನ್ನು ತಮ್ಮ ತಮ್ಮ ಮನೆಯ ಕೆಲಸಗಳಿಗೆ ಬಳಸಿಕೊಂಡು ಅವರನ್ನು ಹೀನಾಯವಾಗಿ ಕಾಣುವಂತಹ ನೂರಾರು ಉದಾಹರಣೆಗಳನ್ನು ನಮ್ಮ ದೇಶದಲ್ಲಿ ಕಾಣಬಹುದು.

ಕಲಾಂ ಅವರ ಜೀವನ, ಸಾಧನೆಯನ್ನು ಎರಡು ವಿಭಾಗಗಳಾಗಿ ಗುರುತಿಸಬಹುದು. ಒಂದು ವಿಜ್ಞಾನಿಯಾಗಿ ಮತ್ತೊಂದು ರಾಷ್ಟ್ರದ ರಾಷ್ಟ್ರಪತಿಯಾಗಿ. ಅಜಾತಶತ್ರುವಾಗಿದ್ದ ಕಲಾಂ ಅವರನ್ನು ದೇಶದ ಪ್ರತಿಯೊಬ್ಬ ನಾಗರಿಕ, ಅಧಿಕಾರಿಗಳು ಹಾಗೂ ರಾಜಕಾರಣಿಗಳು ಗೌರವಿಸುತ್ತಿದ್ದರು. ಈ ಕಾರಣದಿಂದ ಕಲಾಂ 2002ರಲ್ಲಿ ರಾಷ್ಟ್ರಪತಿ ಚುನಾವಣೆಯಲ್ಲಿ ದೇಶದ 11ನೇ ರಾಷ್ಟ್ರಪತಿಯಾಗಿ ಆಯ್ಕೆಯಾದರು. 2002-2007ರ ಅವಧಿಯವರೆಗೂ ಯಾವುದೇ ರಾಜಕೀಯ ಅನುಭವವಿಲ್ಲದಿದ್ದರೂ ರಾಷ್ಟ್ರಪತಿಯಾಗಿ ಸಮರ್ಥವಾಗಿ ಅಡಳಿತವನ್ನು ನಡೆಸಿದರು.

ಅವರು ರಾಷ್ಟ್ರಪತಿಯಾದರೂ ಸಹ ಸಾಮಾನ್ಯ ಜೀವನ ನಡೆಸುತ್ತಿದ್ದರು. ರಾಷ್ಟ್ರಪತಿಗೆ ಕೊಡುತ್ತಿದ್ದ ಸೌಕರ್ಯಗಳನ್ನು ಬಿಟ್ಟು ಒಂದು ಸಾಧಾರಣ ಕೊಠಡಿಯಲ್ಲಿ ವಾಸಮಾಡುತ್ತಿದ್ದರು.

ಕೆಲವು ಸಂದರ್ಭದಲ್ಲಿ ಅವರ ಜೊತೆ ಕೆಲಸಮಾಡುವವರ ಜೊತೆಯಲ್ಲಿ ಕುಳಿತು ಊಟ ಮಾಡುತ್ತಿದ್ದರು. ಕಲಾಂ ಅವರಿಗೆ ಮಕ್ಕಳು ಎಂದರೆ ಎಲ್ಲಿಲ್ಲದ ಪ್ರೀತಿ. ಮಕ್ಕಳು ಬರೆಯುತ್ತಿದ್ದ ಪತ್ರಗಳಿಗೆ ಇವರೇ ಸ್ವತಃ ಉತ್ತರ ಬರೆಯುತ್ತಿದ್ದರು. ಇವರು ಪ್ರಜೆಗಳ ಒಡನಾಟದಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದರು. ಇದರಿಂದ ಇವರನ್ನು ‘ಪೀಪಲ್ಸ್ ಪ್ರೆಸಿಡೆಂಟ್’ ಎಂದು ಕರೆಯುತ್ತಿದ್ದರು. ಇವರು ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ ಅವಧಿಯಲ್ಲಿ ಯಾವ ಆರೋಪ ಇಲ್ಲದ ನಾಯಕರಾಗಿದ್ದರು. ಇವರಿಗೆ ಎರಡನೇ ಬಾರಿಗೆ ರಾಷ್ಟ್ರಪತಿ ಆಗುವ ಅವಕಾಶ ಬಂದರೂ ‘‘ತನಗೆ ಮಕ್ಕಳಿಗೆ ಪಾಠಮಾಡುವ ವೃತ್ತಿಯೇ ಶ್ರೇಷ್ಠ’’ವೆಂದು ಭಾವಿಸಿ, ರಾಷ್ಟ್ರಪತಿ ಹುದ್ದೆಯನ್ನು ಒಪ್ಪಿಕೊಳ್ಳುವುದಿಲ್ಲ.
ಕಲಾಂ ಸರ್ ಅವರಿಗೆ ಮಕ್ಕಳ ಮೇಲೆ ತುಂಬಾ ನಂಬಿಕೆ ಇತ್ತು. ಹಾಗಾಗಿ ಇವರು ದೇಶ ವಿದೇಶಗಳಲ್ಲಿ ಪಾಠಶಾಲೆ ಮತ್ತು ಕಾಲೇಜುಗಳಿಗೆ ಹೋಗಿ ಪಾಠ ಮಾಡುವುದರ ಜೊತೆಗೆ ಮಾರ್ಗದರ್ಶನ ಮಾಡುತ್ತಿದ್ದರು. ಕಲಾಂ ಅವರು ಗ್ರಾಮೀಣ ಪ್ರದೇಶಗಳನ್ನು ಅಭಿವೃದ್ಧಿ ಮಾಡುವ ದೃಷ್ಟಿಯಲ್ಲಿ ‘ಪುರೋ’ ಎಂಬ ಹೆಸರಿನಲ್ಲಿ ಟ್ರಸ್ಟ್ ಸ್ಥಾಪನೆ ಮಾಡಿದರು. ಇವರಿಗೆ ಬಂದ ಆದಾಯವನ್ನು ಟ್ರಸ್ಟ್ ಗೆ ಕೊಡುತ್ತಿದ್ದರು. ಇವರು ಮದುವೆ ಮಾಡಿಕೊಂಡಿಲ್ಲ. ಇವರಿಗೆ ಆಸ್ತಿ ಇಲ್ಲ, ದೇಶದ ಮಕ್ಕಳೇ ಆಸ್ತಿಯೆಂದು ಭಾವಿಸಿದವರು. ಇವರು ದೇಶಕ್ಕಾಗಿ ಮಾಡಿದ ಅಪಾರ ಸೇವೆಯನ್ನು ಗುರುತಿಸಿದ ಭಾರತ ಸರಕಾರ ಇವರಿಗೆ 1997ರಲ್ಲಿ ‘ಭಾರತರತ್ನ’ ಪ್ರಶಸ್ತಿಯನ್ನು ಕೊಟ್ಟು ಗೌರವಿಸಿದೆ.

ಅಬ್ದಲ್ ಕಲಾಂ ಅವರು ಜುಲೈ 27, 2015ರಂದು ಮೇಘಾಲಯದ ಸಿಲ್ಲಾಂಗ್‌ನ ಐಐಎಂನಲ್ಲಿ ವಿದ್ಯಾರ್ಥಿಗಳನ್ನು ಕುರಿತು ಭಾಷಣಮಾಡುವ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದರು. ತಕ್ಷಣ ಹತ್ತಿರದ ಆಸ್ಪತ್ರೆಗೆ ಸೇರಿಸಿದರೂ ಅಂದು ಸಂಜೆ 7:45 ಗಂಟೆಗೆ ಹೃದಯಘಾತದಿಂದ ಮರಣಹೊಂದಿದರು. ಈ ಸುದ್ದಿ ಇಡೀ ಪ್ರಪಂಚವನ್ನೇ ಶೋಕಸಾಗರದಲ್ಲಿ ಮುಳುಗುವಂತೆ ಮಾಡಿತು. ಇಂದಿಗೆ ನಮ್ಮ ದೇಶದ ಹೃದಯ ಶ್ರೀಮಂತಿಕೆಯ ಮಾನವೀಯ ಕಲಾಂ ನೆನಪಿಗೆ ಮೂರುವರ್ಷ ಸಂದಿದೆ. ಈ ಸಾಧನೆಯ ಜೀವವನ್ನು ಮತ್ತೊಮ್ಮೆ ಈ ದೇಶ ನೆನಪಿಸಿಕೊಳ್ಳಬೇಕಾಗಿದೆ. ಕಲಾಂ ಅವರಿಗೆ ನಮನ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top