ಮಾವೋವಾದಿ ನಂಟಿನ ಆರೋಪದಲ್ಲಿ ಕೈದಿಯಾಗಿರುವ ಪತಿ ಪ್ರೊ. ಜಿ.ಎನ್.ಸಾಯಿಬಾಬಾರ ಆರೋಗ್ಯದ ಬಗ್ಗೆ ಪತ್ನಿಯ ಆತಂಕ

ಒಬ್ಬ ಕೈದಿ, 19 ಕಾಯಿಲೆಗಳು

ಪ್ರೊ. ಜಿ.ಎನ್.ಸಾಯಿಬಾಬಾ ಅವರ ಆರೋಗ್ಯ ಆತಂಕಕಾರಿಯಾಗಿ ಕುಸಿದು ಹೋಗುತ್ತಿದೆ. ಸುದೀರ್ಘಕಾಲ ಜೈಲಿನಲ್ಲಿ ಕೊಳೆತು ಹೋಗಿದ್ದರಿಂದ ಅವರು 19 ಕಾಯಿಲೆಗಳಿಂದ ನರಳುತ್ತಿದ್ದಾರೆ. 16 ತಿಂಗಳುಗಳ ಕಾಲದಲ್ಲಿ ಸುಮಾರು 45 ಸಲ ಅವರನ್ನು ನಾಗಪುರ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕರೆದೊಯ್ದರು. ಕೆಲವು ವೈದ್ಯಪರೀಕ್ಷೆಗಳನ್ನು ನಡೆಸಿದ್ದರೂ ಇದುವರೆಗೆ ಯಾವುದೇ ಚಿಕಿತ್ಸೆ ನಡೆದಿಲ್ಲ. ತೀವ್ರ ಆರೋಗ್ಯ ಸಮಸ್ಯೆಗಳನ್ನು ಕೂಡಾ ಇನ್ನೂ ಲಕ್ಷಿಸುತ್ತಲೇ ಇಲ್ಲ. ಹೃದಯ ಸಮಸ್ಯೆ, ಅಧಿಕ ರಕ್ತದೊತ್ತಡ, ಹೊಟ್ಟೆಯಲ್ಲಿ ಎಡಗಡೆ ಬೆಳೆಯುತ್ತಿರುವ ಗಡ್ಡೆಯ ಕಾರಣದಿಂದ ತೀವ್ರವಾಗಿ ಉಂಟಾಗುತ್ತಿರುವ ನೋವು ಇತ್ಯಾದಿ ಕಾಯಿಲೆಗಳ ಬಗ್ಗೆ ಇದುವರೆಗೂ ಸರಿಯಾದ ವೈದ್ಯರು ದೃಷ್ಟಿ ಇಟ್ಟೇ ಇಲ್ಲ. ಸಾಯಿಬಾಬಾ ರಕ್ತ ಭೇದಿಯಿಂದ ನರಳುತ್ತಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಮೂತ್ರದಲ್ಲಿ ರಕ್ತ ಅಧಿಕ ಪ್ರಮಾಣದಲ್ಲಿ ಬರುತ್ತಿದೆ.

ಈ ಸಮಸ್ಯೆಗಳೆಲ್ಲಾ ಪರಸ್ಪರ ಸಂಬಂಧ ಇರುವಂಥವು. ಅವನ್ನು ಪರೀಕ್ಷಿಸಿ, ಸೂಕ್ತ ಚಿಕಿತ್ಸೆ ಒದಗಿಸುವುದಕ್ಕೆ ಬಹುಕಾಲ ಹಿಡಿಯುತ್ತದೆ. ಕಳೆದ ಪರ್ಯಾಯ ಜೈಲಿನಲ್ಲಿದ್ದಾಗ ಸಾಯಿಬಾಬಾರನ್ನು ನಾಗಪುರದಲ್ಲಿನ ಸರಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ (ಜಿಎಂಸಿಎಚ್) ಕರೆದುಕೊಂಡು ಹೋದರು. ಸಾಯಿಬಾಬಾರಿಗೆ ನೀಡಬೇಕಾದ ಚಿಕಿತ್ಸೆಗಳಿಗೆ ಅಗತ್ಯವಾದ ಸೌಕರ್ಯಗಳು ತಮ್ಮ ಆಸ್ಪತ್ರೆಯಲ್ಲಿ ಪೂರ್ತಿಯಾಗಿ ಇಲ್ಲವೆಂದು, ವಿಶೇಷ ಸೌಕರ್ಯಗಳಿರುವ ಆಸ್ಪತ್ರೆಗೆ ಅವರನ್ನು ಕಳುಹಿಸಬೇಕು ಎಂದು ಜಿಎಂಸಿಎಚ್ ಡಾಕ್ಟರ್‌ಗಳು ಕೋರ್ಟ್‌ಗೆ ನಿವೇದಿಸಿದರು. ವಿಕಲಾಂಗರಿಗೆ ವಿಶೇಷ, ಉನ್ನತಮಟ್ಟದ ಚಿಕಿತ್ಸೆಗಳ ನಿರ್ವಹಿಸುವ ತಜ್ಞರು ತಮ್ಮ ಆಸ್ಪತ್ರೆಯಲ್ಲಿಲ್ಲ ಎಂದು ಸಹ ಕೋರ್ಟ್‌ಗೆ ತಿಳಿಯಪಡಿಸಿದರು.

ಸಾಯಿಬಾಬಾ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ವಕೀಲರಿಂದ ಪಡೆದುಕೊಂಡ ಬಳಿಕ ಕಳೆದ ಎಪ್ರಿಲ್ 2ರಂದು ನಾನು ನಾಗಪುರಕ್ಕೆ ಹೋದೆ. ಸಾಯಿಬಾಬಾರಿಗೆ ರೋಗನಿರ್ಧರಿಸುವ ಪರೀಕ್ಷೆಗಳನ್ನು ನಿರ್ವಹಿಸಿ, ಚಿಕಿತ್ಸೆ ನೀಡುವುದಕ್ಕೆ ಅವರನ್ನು ನಾಗಪುರ ಸೆಂಟ್ರಲ್ ಜೈಲ್‌ನಿಂದ ಜಿಎಂಸಿಎಚ್‌ಗೆ ವರ್ಗಾಯಿಸುವ ಸಾಧ್ಯತೆ ಇದೆ ಎಂಬುದು ನನಗೆ ಆಗಲೇ ತಿಳಿದಿತ್ತು. ಆದರೆ ಆಸ್ಪತ್ರೆಯಲ್ಲಿ ಸಾಯಿಬಾಬಾರನ್ನು ಕಾಣುವುದಕ್ಕಾಗಲೀ, ಅವರಿಗೆ ಚಿಕಿತ್ಸೆ ನೀಡುತ್ತಿದ್ದ ಡಾಕ್ಟರ್‌ರೊಂದಿಗೆ ಚರ್ಚಿಸುವುದಕ್ಕಾಗಲೀ ನನಗೆ ಅನುಮತಿಸಲಿಲ್ಲ. ಆ ಸಂಜೆ ಆಸ್ಪತ್ರೆಯಿಂದ ಸಾಯಿಬಾಬಾರನ್ನು ಮತ್ತೆ ಜೈಲಿಗೆ ಕರೆದೊಯ್ಯುತ್ತಿದ್ದ ಸಮಯದಲ್ಲಿ ನಾನು ಅವರೊಂದಿಗೆ ಮಾತನಾಡುವುದಕ್ಕೆ ಪೊಲೀಸ್ ಅಧೀಕಾರಿಗಳು ಒಪ್ಪಲಿಲ್ಲ. ಒಪ್ಪದಿದ್ದುದಷ್ಟೇ ಅಲ್ಲ, ಸಾಯಿಬಾಬಾರ ಹತ್ತಿರ ಹೋಗುವುದಕ್ಕೆ ಪ್ರಯತ್ನಿಸಿದ ನನ್ನನ್ನು ಮಹಿಳಾ ಕಾನ್‌ಸ್ಟೇಬಲ್ ಬಲವಂತದಿಂದ ಹಿಂದಕ್ಕೆ ತಳ್ಳಿದರು.

ಇಂತಹ ಪ್ರತಿರೋಧಗಳು, ನನ್ನ ಪತಿಗೆ ತುರ್ತಾಗಿ ನಡೆಯಬೇಕಾದ ಚಿಕಿತ್ಸೆಗಳ ಬಗ್ಗೆ ಡಾಕ್ಟರ್‌ಗಳ ಪೂರ್ತಿ ನಿರ್ಲಕ್ಷ ನಮ್ಮನ್ನು ಬಾಧಿಸಿದವು. ಈ ಕಾರಣದಿಂದ ನನ್ನ ಪತಿ, ನಮ್ಮ ಕುಟುಂಬ ಸದಸ್ಯರು 2017ರ ಆಗಸ್ಟ್ ನಲ್ಲಿ ನಾಗಪುರ ಜೈಲಿನಿಂದ ಹೈದರಾಬಾದ್‌ನ ಚಕ್ಲಿಪಲ್ಲಿ ಸೆಂಟ್ರಲ್ ಜೈಲಿಗೆ ವರ್ಗಾಯಿಸಬೇಕೆಂದು ಒತ್ತಾಯ ಮಾಡಲು ಆರಂಭಿಸಿದೆವು. ನಾಗಪುರ ಸೆಂಟ್ರಲ್ ಜೈಲಿನಿಂದ ಹೈದರಾಬಾದ್‌ನಲ್ಲಿನ ಸೆಂಟ್ರಲ್ ಜೈಲಿಗೆ ತಮ್ಮನ್ನು ವರ್ಗಾಯಿಸಬೇಕೆಂದು ಕೋರುತ್ತಾ ಸಾಯಿಬಾಬಾ 2017 ಆಗಸ್ಟ್ 23ರಂದು ಮಹಾರಾಷ್ಟ್ರದ ಐಜಿ(ಜೈಲು)ಗೆ ಒಂದು ಪತ್ರ ಬರೆದರು. ಅದಕ್ಕೆ ಮುನ್ನ ಅಂದರೆ 2017 ಜೂನ್‌ನಲ್ಲಿ ಪ್ರೊಫೆಸರ್ ಜಿ.ಹರಗೋಪಾಲ್ (ಚೇರ್‌ಪರ್ಸನ್, ಕಮಿಟಿ ಫಾರ್ ದಿ ರಿಲೀಸ್ ಆ್ಯಂಡ್ ಡಿಫೆನ್ಸ್ ಆನ್ ಡಾ.ಜಿ.ಎನ್.ಸಾಯಿಬಾಬಾ) ಮಹಾರಾಷ್ಟ್ರ ಗವರ್ನರ್‌ಗೆ, ಸಾಯಿಬಾಬಾರನ್ನು ಹೈದರಾಬಾದ್ ಸೆಂಟ್ರಲ್ ಜೈಲಿಗೆ ವರ್ಗ ಮಾಡಬೇಕೆಂದು ಮೌಖಿಕವಾಗಿ ವಿನಂತಿ ಮಾಡಿದರು.

2017 ನವೆಂಬರ್ 16ರಂದು ಸಾಯಿಬಾಬಾರ ತಾಯಿ ಕೂಡಾ ಮಹಾರಾಷ್ಟ್ರ ಗವರ್ನರ್‌ಗೆ ತಮ್ಮ ಪುತ್ರನನ್ನು ನಾಗಪುರ ಸೆಂಟ್ರಲ್ ಜೈಲಿನಿಂದ ವರ್ಗಾಯಿಸಬೇಕೆಂದು ಕೋರಿ ಒಂದು ಪತ್ರ ಬರೆದರು. 2017 ಡಿಸೆಂಬರ್ 11 ಮತ್ತು 23ರಂದು 2018ರ ಫೆಬ್ರವರಿ 2ರಂದು ಕುಸಿಯುತ್ತಿರುವ ಸಾಯಿಬಾಬಾರ ಆರೋಗ್ಯಸ್ಥಿತಿ ಕುರಿತು ತಾಜಾ ಮಾಹಿತಿಯನ್ನು ಮಹಾರಾಷ್ಟ್ರ ಗವರ್ನರ್‌ಗೆ ಕೊಟ್ಟೆ. ತೆಲಂಗಾಣ ಡಿಜಿಪಿ (ಜೈಲು) ವಿ.ಕೆ.ಸಿಂಗ್‌ರನ್ನು ಕೂಡಾ ಭೇಟಿಯಾಗಿ 1950ರ ಕೇಂದ್ರ ಕಾನೂನು ನಿಬಂಧನೆಗಳು, ಕೆಲವು ಸುಪ್ರೀಂ ಕೋರ್ಟ್ ತೀರ್ಪುಗಳ ಪ್ರಕಾರ ಸಾಯಿಬಾಬಾರನ್ನು ತೆಲಂಗಾಣಕ್ಕೆ ಕರೆದು ತರಬೇಕೆಂದು ಕೋರಿದೆ. ತೆಲಂಗಾಣ ಡಿಜಿಪಿ ಮಹೇಂದ್ರ ರೆಡ್ಡಿಯವರನ್ನು ಕೂಡಾ ಕಂಡು ಸಾಯಿಬಾಬಾ ವರ್ಗಾವಣೆಗೆ ‘ನೋ ಅಬ್ಜೆಕ್ಷನ್’ ಸರ್ಟಿಫಿಕೆಟ್ ಕೊಡಬೇಕೆಂದು ವಿನಂತಿಸಿದೆವು. ವೃದ್ಧರಾದ ತಾಯಿ, ತಮ್ಮನ ಕುಟುಂಬ ಹೈದರಾಬಾದ್‌ನಲ್ಲಿ ವಾಸಿಸುತ್ತಿದ್ದುದರಿಂದ ಸಾಯಿಬಾಬಾರನ್ನು ಹೈದರಾಬಾದ್ ಸೆಂಟ್ರಲ್ ಜೈಲಿಗೆ ಕರೆದು ತರಬೇಕೆಂದು ಕೋರಿದೆವು.

ಚಿಕಿತ್ಸಾ ಕಾರಣಗಳ ಆಧಾರದಿಂದ ಸಾಯಿಬಾಬಾಗೆ ಬೇಲ್ ಕೊಡಬೇಕೆಂದು ಕೋರುತ್ತಾ ನಾವು ಆದಾಗಲೇ ದರಖಾಸ್ತು ದಾಖಲೆ ಮಾಡಿದ್ದೆವು. ಆದರೆ ಮಹಾರಾಷ್ಟ್ರ ಪೊಲೀಸರು ನಮ್ಮ ಬೇಲ್ ದರಖಾಸ್ತಿನ ಮೇಲೆ ವಿಚಾರಣೆಗೆ ಪದೇ ಪದೇ ವಾಯಿದೆ ಹಾಕುತ್ತಾ ಬಂದರು. ಸಾಯಿಬಾಬಾ ಆರೋಗ್ಯ ಸ್ಥಿತಿ ಕ್ಷೀಣಿಸುತ್ತಿದೆ ಎಂದು ತಿಳಿದು ಕೂಡಾ ಅವರು ಆ ವಿಧವಾಗಿ ವ್ಯವಹರಿಸಿದರು.

ಸಾಯಿಬಾಬಾಗೆ ಮಾಡಬೇಕಾದ ಚಿಕಿತ್ಸೆ ಅವರ ಪಿತ್ತಾಶಯಕ್ಕೆ ಶಸ್ತ್ರಚಿಕಿತ್ಸೆ ನಿರ್ವಹಿಸುವುದಷ್ಟೇ ಎಂದು ಪೊಲೀಸರು ಕೋರ್ಟ್‌ಗೆ ತಿಳಿಯಪಡಿಸಿದ್ದಾರೆ. ಆದರೆ ನಾವು ಪದೇ ಪದೇ ಅವರ ಗಮನಕ್ಕೆ ತರುತ್ತಿದ್ದ ಇತರ ಕಾಯಿಲೆಗಳ ಕುರಿತು ಪೂರ್ತಿಯಾಗಿ ನಿರ್ಲಕ್ಷ ಧೋರಣೆ ಪ್ರದರ್ಶಿಸಿದರು. ಅವುಗಳ ವಿಷಯವಾಗಿ ಅವರಿಂದ ಎಂತಹ ಪ್ರತಿಕ್ರಿಯೆಯೂ ಇಲ್ಲ. ಈಗ ಸಾಯಿಬಾಬಾ ಪಿತ್ತಾಶಯದಲ್ಲಿನ ಕಲ್ಲನ್ನು ತೊಲಗಿಸುವುದಕ್ಕೆ ಶಸ್ತ್ರಚಿಕಿತ್ಸೆ ನಿರ್ವಹಿಸಬೇಕೆಂದು ಪ್ರತಿಪಾದಿಸುತ್ತಿದ್ದಾರೆ. ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ವ್ಯಕ್ತಿ ಸರ್ಜರಿ ಬಳಿಕ ತುಂಬಾ ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗಿರುತ್ತದೆ ಎಂದು ಹೇಳುವ ಅಗತ್ಯ ಇಲ್ಲ. ನನ್ನ ಪತಿಯ ವಿಷಯಕ್ಕೆ ಬಂದರೆ ಕಡ್ಡಾಯವಾಗಿ ಅನೇಕ ಎಚ್ಚರಿಕೆಗಳನ್ನು ತೆಗೆದುಕೊಳ್ಳುವುದು ತುಂಬಾ ಅಗತ್ಯ.

ಏಕೆಂದರೆ ಟಾಯ್ಲೆಟ್ ಉಪಯೋಗಿಸಿಕೊಳ್ಳುವುದಕ್ಕೆ ಸಹ ಸರಿಯಾದ ಸಹಾಯ ಇಲ್ಲದೆ ಅವರು ವೀಲ್‌ಚೇರ್ ಬಿಟ್ಟು ಹೋಗಲಾರರು. ಒಂದು ಸಲ ಶಸ್ತ್ರಚಿಕಿತ್ಸೆ ನಡೆದ ಬಳಿಕ ಆತ ತಮ್ಮ ದೈನಂದಿನ ಕೆಲಸಗಳನ್ನು ನಿರ್ವಹಿಸಿಕೊಳ್ಳುವುದು ಮತ್ತೂ ಕಷ್ಟವಾಗಿ ಹೋಗುತ್ತದೆ. ಆಸ್ಪತ್ರೆಯಲ್ಲೇ ಇದ್ದಾಗಷ್ಟೇ ಅಲ್ಲದೆ, ಜೈಲಿಗೆ ಹೋದ ಬಳಿಕ ಕೂಡಾ ತನ್ನ ಕೆಲಸ ತಾನು ಮಾಡಿಕೊಳ್ಳುವುದು ಅಸಾಧ್ಯವಾಗಿ ಹೋಗುತ್ತದೆ. ಕುಟುಂಬ ಸದಸ್ಯೆಯಾಗಿ ಜೈಲಿನಲ್ಲಿರುವ ಆರೋಗ್ಯ ರಕ್ಷಣಾ ಪರಿಸ್ಥಿತಿಗಳ ಕುರಿತು ನಾನು ತುಂಬಾ ಕಳವಳಗೊಂಡಿದ್ದೇನೆ. ಅದರಲ್ಲೂ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ವ್ಯಕ್ತಿಗಳಿಗೆ ಅವು ಯಾವ ಕಾರಣಕ್ಕೂ ಅನುಕೂಲವಾಗಿರವು. ಶಸ್ತ್ರಚಿಕಿತ್ಸೆ ಮಾತ್ರವೇ ಸಾಯಿಬಾಬಾಗೆ ಸ್ವಸ್ಥತೆ ನೀಡದು. ಏಕೆಂದರೆ ಅವರು ಇನ್ನೂ ತುಂಬಾ ಕಾಯಿಲೆಗಳಿಂದ ನರಳುತ್ತಿದ್ದಾರೆ. ಪಿತ್ತಾಶಯದಲ್ಲಿನ ಕಲ್ಲನ್ನು, ತೊಲಗಿಸುವುದಕ್ಕೆ ಮಾತ್ರವೇ ಶಸ್ತ್ರಚಿಕಿತ್ಸೆ ನಡೆದರೆ, ಆನಂತರ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಗಡ್ಡೆಯನ್ನು ತೊಲಗಿಸುವುದಕ್ಕೆ ಮತ್ತೊಂದು ಶಸ್ತ್ರಚಿಕಿತ್ಸೆ ಅಗತ್ಯವಿದೆ. ಬೇಲ್ ಪಿಟಿಶನ್ ವಿಚಾರಣೆಗೆ ಬಂದಾಗಲೆಲ್ಲಾ ಎರಡು ದಿನಗಳು ಮುಂದಾಗಿಯೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾರೆ. ಆರೋಗ್ಯ ಸ್ಥಿರಗಳು, ಚಿಕಿತ್ಸಾ ವಿವರಗಳು ತಿಳಿಯುವುದಕ್ಕೆ ಮತ್ತಷ್ಟು ಸಮಯ ಬೇಕೆಂದು ಪ್ರಾಸಿಕ್ಯೂಶನ್ ಕೇಳುವುದು ಪದ್ಧತಿಯಾಗಿ ಹೋಗಿದೆ. ಇತ್ತೀಚೆಗೆ ನಾಗಪುರ ಹೈಕೋರ್ಟ್ ಎದುರು ಮತ್ತೊಂದು ಬೇಲ್ ಪಿಟಿಶನ್ ವಿಚಾರಣೆಗೆ ಬಂದ ಸಂದರ್ಭದಲ್ಲೂ ವೈದ್ಯಕೀಯ ಪರೀಕ್ಷೆಗಳಿಗೋಸ್ಕರ ಮುಂದಾಗಿಯೇ ಜಿಎಂಸಿಎಚ್‌ಗೆ ಕರೆದೊಯ್ದರು.

ಜೈಲಿಗೆ ಹೋದ ಬಳಿಕ ಸಾಯಿಬಾಬಾ ಒಟ್ಟು 11 ಸಲ ಜ್ಞಾನತಪ್ಪಿ ಬಿದ್ದು ಹೋದರು. ಆದರೆ ಜಿಎಂಸಿಎಚ್ ತನ್ನ ವರದಿಯಲ್ಲಿ ಕೇವಲ 3 ಸಲ ಎಂದಷ್ಟೇ ಹೇಳಿದೆ. ಕೇವಲ ಒಂದೂವರೆ ವರ್ಷದಲ್ಲಿ ಅವರು 12 ಕೆ.ಜಿ. ತೂಕ ಇಳಿದು ಹೋಗಿದ್ದಾರೆ. ತುಂಬಾ ದುರ್ಬಲರಾಗಿ ಹೋಗಿದ್ದಾರೆ. ಸೂಕ್ತವಾದ, ಪರಿಪೂರ್ಣ ವೈದ್ಯ ಚಿಕಿತ್ಸೆ ಜರುಗದಿದ್ದಲ್ಲಿ ಪ್ರೊ.ಸಾಯಿಬಾಬಾ ಇನ್ನು ಬಹಳ ಕಾಲ ಜೀವಂತವಾಗಿ ಇರಲಾರರು.

ಕೃಪೆ: ಆಂಧ್ರಜ್ಯೋತಿ

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top