ಇನ್ನು ಈಶಾನ್ಯದಿಂದ ಕಾಡ್ಗಿಚ್ಚು | Vartha Bharati- ವಾರ್ತಾ ಭಾರತಿ

---

ಇನ್ನು ಈಶಾನ್ಯದಿಂದ ಕಾಡ್ಗಿಚ್ಚು

ಜನರಲ್ಲಿನ ದ್ವೇಷಪೂರಿತ ವಿಭಜನೆಯ ಮೇಲೆ ವಿಜಯಗಳನ್ನು ನಿರ್ಮಿಸಿಕೊಳ್ಳಬೇಕೆಂದು ಕೊಳ್ಳುವವರು ತಮ್ಮ ಸಮಯಾನುಕೂಲಕ್ಕೆ ತಕ್ಕಂತೆ ಒಂದೊಂದು ಸಮಸ್ಯೆಯನ್ನು ತಟ್ಟಿ ಎಬ್ಬಿಸಿ, ಭಯಂಕರವಾಗಿ ಶೃಂಗರಿಸಿ, ವೇದಿಕೆ ಮೇಲೆ ಎಸೆಯುತ್ತಾರೆ. ಆ ಸಮಸ್ಯೆಗಳು ಪ್ರಜೆಗಳನ್ನು ಕಳವಳಗೊಳಿಸಿದ ಸಮಸ್ಯೆಗಳೇ. ಅವು ಒಂದೊಮ್ಮೆ ಹೋರಾಟದ ಸಮಸ್ಯೆಗಳೇ. ಆದರೆ ಆಕಾಲದಲ್ಲಿ ಅವುಗಳ ರಂಗಪ್ರವೇಶ ಒಂದು ಹೊಸ ಉದ್ರಿಕ್ತತೆಯನ್ನು ಸೃಷ್ಟಿಸುತ್ತದೆ. ಇದಕ್ಕೊಂದು ಉದಾಹರಣೆ ಅಸ್ಸಾಂನಲ್ಲಿನ ಪೌರರ ಗಣತಿ ಸಮಸ್ಯೆ.


ಇತಿಹಾಸ ನಮಗೆ ಅನೇಕ ಸಮಸ್ಯೆಗಳನ್ನು ತಂಗಳು ಬುತ್ತಿ ಕಟ್ಟಿ ಕೊಟ್ಟಿದೆ. ಬ್ರಿಟಿಷ್ ಪ್ರಭುಗಳು ದೇಶ ಬಿಟ್ಟು ಹೋಗುವ ಕಾಲದಲ್ಲಿ ಮುಂದೆ ಬೇರೆ ಬೇರೆ ಸಮಯಗಳಲ್ಲಿ ಸ್ಫೋಟಿಸಬಲ್ಲ ಸ್ಫೋಟಕಗಳನ್ನು ನಮ್ಮ ಸಮಾಜದಲ್ಲಿ ಹೂತಿಟ್ಟು ಹೋದರು. ಸ್ವಾತಂತ್ರ ಬಂದ ಮೇಲೆ ನಮ್ಮ ಪಾಲಕರ ವೈಫ್ಯಲ್ಯ ಕಗ್ಗಂಟುಗಳನ್ನು ಬಿಚ್ಚುವುದು ಹಾಗಿರಲಿ, ಅವರು ತಮ್ಮ ಅವಧಿಯಲ್ಲಿ ಅನೇಕ ಹೊಸ ಸಮಸ್ಯೆಗಳನ್ನು ಸೃಷ್ಟಿಸಿದರು. ಮನುಷ್ಯರು ಸತತವಾಗಿ ಹೋರಾಡುತ್ತಲೇ ಇರಲಾರರು. ಆದ್ದರಿಂದ ಕೆಲ ಸಮಸ್ಯೆಗಳು ನಿದ್ರಾವಸ್ಥೆಯಲ್ಲಿರುತ್ತವೆ. ಕೆಲವು ಘರ್ಷಣೆಗಳು ಮುಂದೂಡಲ್ಪಡುತ್ತವೆ. ಕೆಲವು ಬೂದಿ ಮುಚ್ಚಿದ ಕೆಂಡದಂತೆ ಇರುತ್ತವೆ. ಮತ್ತೆ ಕೆಲವು ಸಣ್ಣ ಕದಲಿಕೆ ಸಿಕ್ಕರೂ ಸಿಡಿಯುವ ಅಗ್ನಿ ಪರ್ವತದಂತೆ ಇರುತ್ತವೆ. ಕೆಲವು ಕ್ರಿಯಾಶಿಲವಾಗಿರುತ್ತವೆ.

ಜನರಲ್ಲಿನ ದ್ವೇಷಪೂರಿತ ವಿಭಜನೆಯ ಮೇಲೆ ವಿಜಯಗಳನ್ನು ನಿರ್ಮಿಸಿಕೊಳ್ಳಬೇಕೆಂದು ಕೊಳ್ಳುವವರು ತಮ್ಮ ಸಮಯಾನುಕೂಲಕ್ಕೆ ತಕ್ಕಂತೆ ಒಂದೊಂದು ಸಮಸ್ಯೆಯನ್ನು ತಟ್ಟಿ ಎಬ್ಬಿಸಿ, ಭಯಂಕರವಾಗಿ ಶೃಂಗರಿಸಿ, ವೇದಿಕೆಯ ಮೇಲೆ ಎಸೆಯುತ್ತಾರೆ. ಆ ಸಮಸ್ಯೆಗಳು ಪ್ರಜೆಗಳನ್ನು ಕಳವಳಗೊಳಿಸಿದ ಸಮಸ್ಯೆಗಳೇ. ಅವು ಒಂದೊಮ್ಮೆ ಹೋರಾಟದ ಸಮಸ್ಯೆಗಳೇ. ಆದರೆ ಆಕಾಲದಲ್ಲಿ ಅವುಗಳ ರಂಗಪ್ರವೇಶ ಒಂದು ಹೊಸ ಉದ್ರಿಕ್ತತೆಯನ್ನು ಸೃಷ್ಟಿಸುತ್ತದೆ. ಇದಕ್ಕೊಂದು ಉದಾಹರಣೆ ಅಸ್ಸಾಂನಲ್ಲಿನ ಪೌರರ ಗಣತಿ ಸಮಸ್ಯೆ. ಬಾಂಗ್ಲಾದೇಶ ಯುದ್ಧ ಸಮಯದಲ್ಲೂ, ಆನಂತರವೂ ಅಲ್ಲಿಂದ ಅಸ್ಸಾಂಗೆ ವಲಸೆ ಹೋಗಿ ಇದ್ದು ಬಿಟ್ಟವರ ವಿಷಯದಲ್ಲಿ ಅಸಂತೃಪ್ತಿ ಕೆರಳಿ 1970ರ ದಶಕದ ಕೊನೆಯಲ್ಲಿ ಒಂದು ಚಳವಳಿಯಾಗಿ ಬದಲಾಯಿತು. ಉದ್ಯೋಗಾವಕಾಶಗಳನ್ನು ಕಿತ್ತುಗೊಳ್ಳುತ್ತಿದ್ದಾರೆಂಬುದರ ಜೊತೆಗೆ ವಲಸೆದಾರರು ಕೆಲವು ಕ್ಷೇತ್ರಗಳಲ್ಲಿ ರಾಜಕೀಯ ಸೋಲು ಗೆಲವುಗಳನ್ನು ನಿರ್ಣಯಿಸುತ್ತಾರೆಂಬ ಆರೋಪ ಕೂಡಾ ಜೊತೆಯಾಯಿತು. ಶರಣಾರ್ಥಿಗಳಲ್ಲಿ ಮುಸ್ಲಿಮರೊಂದಿಗೆ ಹಿಂದೂಗಳು ಕೂಡಾ ಇದ್ದಾಗ್ಯೂ ಒಂದು ವರ್ಗದ ಮೇಲೆನೇ ಆಕ್ರೋಶ ಹೆಚ್ಚಾಗಿ ಕೇಂದ್ರೀಕೃತ ಆಗುವುದರ ಹಿಂದೆ ಮತಾಂಧ ಶಕ್ತಿಗಳ ಕೃಷಿ ಇದೆ.

ಪೌರರ ಪಟ್ಟಿ ಬದಲಿಸಬೇಕೆಂಬ ಜನರಲ್ಲಿರುವ ಬೇಡಿಕೆಯನ್ನು ಪರಿಶೀಲಿಸಿ ಸಾಮರಸ್ಯದಿಂದ ಸಮಸ್ಯೆಯನ್ನು ಪರಿಹರಿಸಬೇಕಾದುದು ಬಿಟ್ಟು, ಅಸ್ಸಾಂನಲ್ಲಿ ಏರ್ಪಟ್ಟ ವಿಭಜನೆಯನ್ನು ತನಗೆ ಅನುಕೂಲವಾಗಿ ಉಪಯೋಗಿಸಿಕೊಳ್ಳುವುದಕ್ಕೆ ಇಂದಿರಾಗಾಂಧಿ ಸರಕಾರ ಪ್ರಯತ್ನಿಸಿತ್ತು. ಪಟ್ಟಿಯನ್ನು ಹಾಗೆಯೇ ಇಟ್ಟು ಮೈನಾರಿಟಿಗಳಲ್ಲಿ ಅಭದ್ರತಾ ವಾತಾವರಣ ಮುಂದುವರಿಯುವ ರೀತಿಯಲ್ಲಿ ವ್ಯವಹರಿಸುತ್ತಾ ಚುನಾವಣೆ ನಿರ್ವಹಿಸಬೇಕೆಂದು ಪ್ರಯತ್ನಿಸಿತ್ತು. ತನ್ನ ಹೊರತು ಮೈನಾರಿಟಿಗಳಲ್ಲಿ ಬೇರೆ ಗತಿಯ್ಲಿಲದ ಸ್ಥಿತಿ ಕಲ್ಪಿಸಿ, ಅವರ ಓಟುಗಳನ್ನು ಪಡೆಯಬೇಕೆಂಬ ಪ್ರಯತ್ನ ನೆಲ್ಲಿಯಲ್ಲಿ ಭೀಕರ ಹತ್ಯಾಕಾಂಡಕ್ಕೆ ದಾರಿ ತೆಗೆಯಿತು. 1,800 ಮಂದಿಗೂ ಹೆಚ್ಚಾಗಿ ಮಡಿದ ಈ ದುರಂತಮಯ ಘಟನೆಯ ಹಿಂದೆ ಕೇಂದ್ರ ಸರಕಾರದ ಉದಾಸೀನತೆ, ಅವಕಾಶವಾದ, ಸ್ಥಳೀಯ ಮತಾಂಧರ ಹುನ್ನಾರ, ಬಲವಾಗಿ ವ್ಯಕ್ತಗೊಳ್ಳತೊಡಗಿದ ಅಸ್ಸಾಂ ರಾಷ್ಟ್ರೀಯವಾದ ಒಟ್ಟಾಗಿ ಕೆಲಸ ಮಾಡಿದವು.

ಹೊರ ಜಗತ್ತಿಗೆ ಅಷ್ಟಾಗಿ ತಿಳಿಯದ ಹತ್ಯಾಕಾಂಡ ಸುದ್ದಿಯ ಜೊತೆಗೆ, ಸರಕಾರಿ ಯಂತ್ರಾಂಗ ನಿರ್ವಹಿಸಿದ ಕುತ್ಸಿತ ಪಾತ್ರವನ್ನು ತೋರಿಸುತ್ತಾ ಅರುಣ್‌ಶೌರಿ ಸಾಕ್ಷಗಳ ಸಮೇತ ಬರೆದ ‘ಇಂಡಿಯಾ ಟುಡೇ’ ಮುಖ ಚಿತ್ರ ಲೇಖನ ಅಂದು ಒಂದು ಸಂಚಲನವಾಗಿತ್ತು. ಆನಂತರ ರಾಜೀವ್‌ಗಾಂಧಿ ಅಸ್ಸಾಂ ಚಳವಳಿ ನಾಯಕರೊಂದಿಗೆ ಒಪ್ಪಂದ ಮಾಡಿಕೊಳ್ಳುವುದು, 1985 ಡಿಸೆಂಬರ್‌ನಲ್ಲಿ ನಡೆದ ಚುನಾವಣೆಗಳಲ್ಲಿ ಎಜಿಪಿ ಅಧಿಕಾರಕ್ಕೆ ಬಂದು ಪ್ರಫುಲ್‌ಕುಮಾರ್ ಮಹಂತಾ ಮುಖ್ಯಮಂತ್ರಿಯಾಗುವುದು ನಡೆಯಿತು. 1970ರ ಬಳಿಕ ಅಸ್ಸಾಂಗೆ ಬಂದ ವಲಸೆಗಾರರನ್ನು ಗುರುತಿಸಿ ಹಿಂದಕ್ಕೆ ಕಳುಹಿಸುವುದು ಒಪ್ಪಂದದಲ್ಲಿನ ಒಂದು ಮುಖ್ಯಾಂಶ. ಆ ಗುರುತಿಸುವ ಪ್ರಕ್ರಿಯೆ ದಶಕಗಳು ಮುಂದುವರಿದು ಈಗ ಸುಪ್ರೀಂ ಕೋರ್ಟ್‌ನ ನಿಮಿತ್ತ ಮಾತ್ರದ ಪ್ರಮೇಯದೊಂದಿಗೆ ಪೌರರ ಪಟ್ಟಿಯ ರೂಪ ತೆಗೆದುಕೊಂಡಿತು. ಈಗಷ್ಟೇ ಈ ಪಟ್ಟಿ ಏಕೆ ಹೊರಗೆ ಬರುತ್ತದೆ. ಈ ಸಮಯಕ್ಕಿರುವ ಸಂದರ್ಭ ಏನು ಎನ್ನುವುದು ಊಹಿಸಿಕೊಳ್ಳಬೇಕು. ಪೂರ್ವ ಪಾಕಿಸ್ತಾನ ಸ್ವಾತಂತ್ರ ಕೋರುತ್ತಾ ಪ್ರತಿಭಟಿಸುತ್ತಿದ್ದ ಸಮಯದಲ್ಲಿ ಭಾರತ ದೇಶ ಆ ಪ್ರತಿಭಟನೆಗೆ ಬೆಂಬಲ ನೀಡಿತ್ತು. ದಾಯಾದಿ ದೇಶವಾದ ಪಾಕಿಸ್ತಾನವನ್ನು ದುರ್ಬಲಗೊಳಿಸುವುದೇ ಗುರಿ ಎಂಬ ಟೀಕೆಯನ್ನು ಬದಿಗಿಟ್ಟರೆ, ಪಾಕಿಸ್ತಾನ ಪಾಲಕರು ಪೂರ್ವ ಪಾಕಿಸ್ತಾನದ ಮೇಲೆ ಭಾಷಾ ಸಾಂಸ್ಕೃತಿಕ ರಂಗಗಳಲ್ಲಿ ದಮನ ಮುಂದುವರಿಸುತ್ತಾ ಬರುತ್ತಿದ್ದರು.

ಒಂದೇ ಧರ್ಮಕ್ಕೆ ಸೇರಿದವರಾಗಿದ್ದರೂ ಭಾಷೆ ಬೇರೆ ಬೇರೆಯಾದುದರಿಂದ ಪೂರ್ವ ಪಾಕಿಸ್ತಾನದಲ್ಲಿ ಅಂದು ಭಾಷಾ ರಾಷ್ಟ್ರೀಯತೆ ಚಳವಳಿಯನ್ನು ಹೊತ್ತಿಸಿತು. ಚಳವಳಿಯನ್ನು ಹತ್ತಿಕ್ಕುವ ಕ್ರಮದಲ್ಲಿ ಪೂರ್ವ ಪಾಕಿಸ್ತಾನ್‌ದಲ್ಲಿನ ಬೆಂಗಾಲ ಹಿಂದೂಗಳು ಮುಸ್ಲಿಮರು ಭಾರತ ದೇಶದೊಳಕ್ಕೆ ಭಾರೀ ಸಂಖ್ಯೆಯಲ್ಲಿ ನಿರಾಶ್ರಿತರಾಗಿ ಬಂದರು. 50 ಲಕ್ಷ ಮಂದಿಗೂ ಹೆಚ್ಚಾಗಿ ಶರಣಾರ್ಥಿಗಳನ್ನು ಸ್ವೀಕರಿಸಿದ ಅಂದಿನ ಭಾರತ ದೇಶ ಸಂಶಯಿಸಲಿಲ್ಲ. ದೇಶಾದ್ಯಂತ ಶರಣಾರ್ಥಿಗಳ ನಿಧಿಗೆ ದೊಡ್ಡ ಪ್ರಮಾಣದಲ್ಲಿ ದೇಣಿಗೆಗಳನ್ನು ನೀಡಿದರು. ಅಂತಿಮವಾಗಿ ಭಾರತ ದೇಶ ಯುದ್ಧಕ್ಕಿಳಿಯುವುದು, ಬಾಂಗ್ಲಾದೇಶ ಅವತರಿಸುವುದು ನಡೆದವು. ಬಾಂಗ್ಲಾದೇಶ ಏರ್ಪಟ್ಟ ಬಳಿಕ ಶರಣಾರ್ಥಿಗಳೆಲ್ಲರೂ ಹಿಂದಕ್ಕೆ ಹೋಗಲಿಲ್ಲ. ಹೊಸದಾಗಿ ಆ ದೇಶದಿಂದ ವಲಸೆ ಬರುವುದು ಕೂಡ ನಿಲ್ಲಲಿಲ್ಲ. ಪಕ್ಕದಲ್ಲೇ ಇರುವ ಅಸ್ಸಾಂನೊಳಗೆ ವಲಸೆಗಳು ಸಹಜವಾಗಿಯೇ ದೊಡ್ಡ ಮಟ್ಟದಲ್ಲಿ ನಡೆದವು. ಬಾಂಗ್ಲಾದಲ್ಲಿ ಅವರಿಗೇನು ಕೊರತೆ ಇತ್ತೋ ತಿಳಿಯದು. ಯಾವ ಪ್ರಾಂತಕ್ಕಾದರೂ ದೊಡ್ಡ ಸಂಖ್ಯೆಯಲ್ಲಿ ಪರಕೀಯ ಪ್ರಜೆಗಳು ಬರುವುದರಿಂದ ಅಲ್ಲಿನ ಸಂಪನ್ಮೂಲಗಳ ಮೇಲೆ ಒತ್ತಡ ಹೆಚ್ಚುವುದು, ಅಷ್ಟಕ್ಕಷ್ಟೇ ಎಂಬಂತಿರುವ ಉದ್ಯೋಗಾವಕಾಶಗಳ ಮೇಲೆ ಪ್ರಭಾವ ಬೀಳುವುದು ಸಹಜ ಪರಿಣಾಮ. ಅದು ಪ್ರಜೆಗಳಲ್ಲಿನ ವಿವಿಧ ವರ್ಗಗಳ ಮಧ್ಯೆ ಉದ್ರಕ್ತತೆಗೆ, ದ್ವೇಷಕ್ಕೆ ದಾರಿ ತೆರೆಯುತ್ತದೆ.

ಶರಣಾರ್ಥಿಗಳ ಬರುವಿಕೆಗೆ ಕಾರಣರಾದವರೇ ತಮ್ಮ ತಮ್ಮ ಪ್ರಜೆಗಳ ಮಧ್ಯೆ ಸಂಘರ್ಷಗಳು ಬಾರದಂತೆ ಸೂಕ್ತ ಎಚ್ಚರಿಕೆಗಳನ್ನು ತೆಗೆದುಕೊಂಡಿರಬೇಕಾಗುತ್ತದೆ. ಆದರೆ ನಮ್ಮ ದೇಶದ ರಾಜಕೀಯದಲ್ಲಿ ಪ್ರತಿವಿಭಜನೆಯಿಂದ ಅಮಾನವೀಯ ರಾಜಕೀಯ ಲಾಭ ಪಡೆಯಬೇಕೆಂದು ನೋಡುವ ಶಕ್ತಿಗಳು ಅಧಿಕ. ಈಶಾನ್ಯ ಸರಹದ್ದುಗಳಲ್ಲಿ ಇರುವ ಭಾರತೀಯ ರಾಜ್ಯಗಳು ಸ್ವಾತಂತ್ರದ ಬಳಿಕ ಸಹ ತಮ್ಮನ್ನು ತಾವು ಪೂರ್ತಿಯಾಗಿ ಲೀನಗೊಳಿಸಿಕೊಳ್ಳಲಿಲ್ಲ. ಭಾರತ ಸರಕಾರ ಅದಕ್ಕೋಸ್ಕರ ಪ್ರತ್ಯೇಕವಾದ ಪ್ರಯತ್ನವನ್ನೂ ಮಾಡಲಿಲ್ಲ. ಮೇಲಾಗಿ ಅನೇಕ ರಾಜ್ಯಗಳಲ್ಲಿ ಪ್ರತಿಭಟನಾಕಾರರೊಂದಿಗೆ ಯುದ್ಧಕ್ಕಿಳಿಯಿತು. ಅಸ್ಸಾಂ ಗಣ ಪರಿಷತ್ ವಿಫಲವಾದ ಬಳಿಕ, ಆ ರಾಜ್ಯದಲ್ಲಿನ ವಿವಿಧ ಆದಿವಾಸಿ, ಸ್ಥಳೀಯ ಬುಡಕಟ್ಟುಗಳಿಂದ ಮಿಲಟೆಂಟ್ ಹೋರಾಟಗಳು ಎದುರಾದವು.

ಅಸ್ಸಾಂ ಎಂದೂ ಭಾರತ ದೇಶದಲ್ಲಿ ಅಂತರ್ಭಾಗವಲ್ಲ, ತಾವು ಪ್ರತ್ತ್ಯೇಕ ಎಂದು ಹೇಳುವ ಅಹೋಂ ವಾದ ಕೂಡ ಬಲವಾಗಿ ಮುಂದೆ ಬಂದಿತು. ಈ ಶಕ್ತಿಗಳೆಲ್ಲಾ ಯಾವುದೋ ರೂಪದಲ್ಲಿ ಸ್ಥಳೀಯೇತರರ ಮೇಲೆ ದಾಳಿ ಮಾಡುತ್ತಲೇ ಇವೆ. ಬಿಹಾರದಿಂದ ಬಂದ ಕೂಲಿಗಳು (ಅವರು ಹಿಂದೂಗಳೇ) ಸಹ ದೊಡ್ಡ ಸಂಖ್ಯೆಯಲ್ಲಿ ಮಿಲಿಟೆಂಟ್ ದಾಳಿಗಳಲ್ಲಿ ಹತರಾದವರು. ಉಲ್ಫಾ, ಬೋಡೋ ಲ್ಯಾಂಡ್ ಹೋರಾಟಗಳು ದುರ್ಬಲಗೊಂಡ ಬಳಿಕ, ಇರುವ ಸ್ಥಿತಿಯಲ್ಲಿ ಸುಧಾರಿಸಿಕೊಳ್ಳುತ್ತಿರುವ ಅಸ್ಸಾಂನಲ್ಲಿ ಈಗ ಈ ಪೌರರ ಪಟ್ಟಿ ವೇದಿಕೆ ಮೇಲಕ್ಕೆ ಬಂದಿದೆ. 2019ರಲ್ಲಿನ ಚುನಾವಣೆಗಳಲ್ಲಿ ಅಸ್ಸಾಂ ರಾಜ್ಯದಲ್ಲಿ ಪ್ರಯೋಜನ ಆಶಿಸುವವರು, ಅಸ್ಸಾಂನಲ್ಲಿನ ಪೌರರ ಪಟ್ಟಿ ಪ್ರಭಾವದಿಂದ ಉಳಿದ ದೇಶದಲ್ಲಿ ಜರುಗುವ ವಿಭಜನೆಯಿಂದ ಲಾಭ ಹಿಂಡಿಕೊಳ್ಳಬೇಕೆಂದುಕೊಳ್ಳು ವವರು ಈಗ ಚುರುಕಾಗಿ ವ್ಯವಹರಿಸುತ್ತಿದ್ದಾರೆ.

ವಲಸೆದಾರರ ಸಮಸ್ಯೆ ಭದ್ರತಾ ಸಮಸ್ಯೆ ಎನ್ನುತ್ತಿದ್ದಾರೆ ಕೇಂದ್ರ ಮಂತ್ರಿ. ಮಾಧ್ಯಮಗಳು ವೈಭವೀಕರಿಸುವ ಅನೇಕ ವಿಷಯಗಳು- ಆ ಅಭಿಪ್ರಾಯವನ್ನು ಪುಟಿದೇಳಿಸುವಂತೇ ಇವೆ. ಸಾಮಾನ್ಯ ಜನರ ಮನಸ್ಸುಗಳಲ್ಲಿ ಅವೆಲ್ಲಾ ಭಯಾತಂಕಗಳನ್ನು ಉಂಟಾಗಿಸುತ್ತಿವೆ. 40 ಲಕ್ಷ ಮಂದಿಗೆ ಪೌರರ ಪಟ್ಟಿಯಲ್ಲಿ ಸ್ಥಾನ ಸಿಕ್ಕಿಲ್ಲವೆನ್ನುತ್ತಾರೆ.

ಪಟ್ಟಿ ವಂಚಿತರು ಬಂಗಾಲಿಗಳಾಗಿದ್ದರಿಂದ, ಮಮತಾ ಬ್ಯಾನರ್ಜಿ ತಕ್ಷಣ ರಂಗದೊಳಗೆ ಇಳಿದು ಬೆಂಬಲ ಕೂಡಿಸಿಕೊಳ್ಳುತ್ತಿದ್ದಾರೆ. ಅಂತರ್ ಯುದ್ಧದ ಅಪಾಯ ಇದೆ ಎಂದು ಎಚ್ಚರಿದ್ದಾರೆ. ಆಕೆಯ ಆತಂಕದಲ್ಲಿ ಬಂಗಾಲವಾದಕ್ಕಿಂತ ಅಲ್ಪಸಂಖ್ಯಾತರ ಓಲೈಕೆಯೇ ಹೆಚ್ಚು ಎಂದು ವಿರೋಧಿಗಳು ಟೀಕಿಸುತ್ತಿದ್ದಾರೆ. ಕಾಂಗ್ರೆಸ್ ಇನ್ನೂ ತನ್ನ ಧೋರಣೆಯನ್ನು ಖಚಿತಪಡಿಸಿಲ್ಲ. 1980ರ ದಶಕದ ಆರಂಭದಲ್ಲಿ ಅಲ್ಪಸಂಖ್ಯಾತರ ರಕ್ಷಕನೆಂದು ಕಾಣಿಸಿಕೊಳ್ಳಲು ಒದ್ದಾಡಿದ ಈ ಪಕ್ಷ ಈಗ ನೆಲೆಕಾಣಲು ಬಿಜೆಪಿಯೊಂದಿಗೆ ಸ್ಪರ್ಧಿಸಲು ಪ್ರಯತ್ನಿಸುತ್ತಿದೆ.

ಇದು ಈಗಿಂದೀಗಲೇ ನಡೆಯದು. ಪ್ರಕ್ರಿಯೆ ಇನ್ನೂ ತುಂಬಾ ಬಾಕಿ ಉಳಿದಿದೆ. ಏನಿಲ್ಲವೆಂದರೂ ಅರ್ಧ ಕೋಟಿ ಜನರೊಂದಿಗೆ ಬೆಸೆದಿರುವ ಸಮಸ್ಯೆಯಲ್ಲಿ ಹಿಂದೂ ಬಂಗಾಲಿಗಳು, ಬಿಹಾರಿ ಹಿಂದೂಗಳು ಸಹ ಬಾಧಿತರಲ್ಲಿದ್ದಾರೆ. ಮತದಾರರ ಪಟ್ಟಿಯಲ್ಲಿ ಅವರ ಹೆಸರುಗಳನ್ನು ತೊಲಗಿಸದೇ ಹೋಗಬಹುದು ಕೂಡಾ.

ಆದರೆ ವಲಸೆದಾರರಲ್ಲಿ ವೋಟರ್‌ಗಳಾಗಿ ಇರುವವರು ಸಹ ವೋಟು ಹಾಕುವುದಕ್ಕೆ ಭಯ ಬೀಳಬಹುದು. ಇಲ್ಲವೇ ತಮ್ಮ ಅಸ್ತಿತ್ವವೇ ಪ್ರಮುಖ ಅಂಶವಾಗಿ ಅವರ ವೋಟಿಂಗ್ ಆದ್ಯತೆಗಳು ಏರ್ಪಡಬಹುದು. ಅಸ್ಸಾಂನಲ್ಲಿ ಏನು ನಡೆಯು ತ್ತದೆ ಎಂಬುದರೊಂದಿಗೆ ಸಂಬಂಧ ಇಲ್ಲದೆ ದೇಶಾದ್ಯಂತ ಇದೊಂದು ದೊಡ್ಡ ಚರ್ಚೆಯಾಗಿ ಬದಲಾಗುತ್ತಿದೆ. ಉಗ್ರವಾದಿಗಳಾಗಲಿ ರುವರನ್ನು ರಕ್ಷಿಸುವುದಕ್ಕೆ ಇತರ ಪಾರ್ಟಿಗಳು ಸ್ಪರ್ಧಿಸುತ್ತಿವೆ ಎಂದು ಬಿಜೆಪಿ ಪ್ರಚಾರ ಮಾಡಿಕೊಳ್ಳಬಹುದು. ಇತರ ಪಾರ್ಟಿಗಳು ರಕ್ಷಣೆಯಲ್ಲಿ ಮುಳುಗಿಹೋಗಿ ವೌನವಾಗಬಹುದು. ಪೂರ್ವ, ಪಶ್ಚಿಮ ಪಾಕಿಸ್ತಾನಗಳ ಮಧ್ಯೆ ನಡೆದಿದ್ದು ಸೆಕ್ಯುಲರ್ ಹೋರಾಟ. ಅಸ್ಸಾಂನಲ್ಲಿ ಸ್ಥಳೀಯೇತರರ ಮೇಲಿನ ಅಸಂತೃಪ್ತಿ ಕೂಡಾ ಮೂಲತಃ ಸೆಕ್ಯುಲರ್ ಸಮಸ್ಯೆಯೇ. ಅಸ್ಸಾಂ ರಾಷ್ಟ್ರೀಯ ವಾದಕ್ಕೆ ಸಹ ಧರ್ಮಗಳೊಂದಿಗೆ ಸಂಬಂಧ ಇಲ್ಲ. ಆದರೆ ಈಗ ಎಲ್ಲವೂ ಧರ್ಮದ ರಂಗು ಮೆತ್ತಿಕೊಂಡಿವೆ. ಎಲ್ಲಾ ಸೆಕ್ಯುಲರ್‌ವಾದಗಳೊಂದಿಗೊ ಇದೇ ಪ್ರಯೋಗ ನಡೆಯುತ್ತಿದೆ. ಧಾರ್ಮಿಕ ಸಂಬಂಧ ಇಲ್ಲದ ತೆಲಂಗಾಣ ಪ್ರತ್ಯೇಕ ರಾಜ್ಯ ಚಳವಳಿಯಲ್ಲೂ ಧಾರ್ಮಿಕ ಕೋನವನ್ನು ಪ್ರವೇಶಗೊಳಿಸುವ ಪ್ರಯತ್ನ ನಡೆಯುತ್ತಲೇ ಇದೆ.

ಕರ್ನಾಟಕದಲ್ಲಿನ ಹಳೇ ಹೈದ್ರಾಬಾದ್ ಪ್ರಾಂತ ಕೂಡಾ ಹಿಂದುಳಿಯುವಿಕೆಯಲ್ಲಿ ಕೊಳೆತು ಹೋಗುತ್ತಿದೆ. ಅಲ್ಲಿ ಈಗ ತೀವ್ರಗೊಂಡಿರುವ ಆಂದೋಲನದ ಹಿಂದೆ ಕೂಡಾ ಅಗೋಚರ ಪ್ರೇರಣೆಗಳಿವೆ ಎನ್ನಲಾಗುತ್ತಿದೆ.

ಸಮಾಜದಲ್ಲಿನ ವಿವಿಧ ಅಸಮಾನತೆಗಳ ಆಧಾರದಿಂದ ಏರ್ಪಟ್ಟ ಅಸ್ತಿತ್ವಗಳು ಅನೇಕ ವಾದಗಳೊಂದಿಗೆ ರಾಜಕೀಯ ಕಾರ್ಯಾ ಚರಣೆಗಳನ್ನು ಕೈಗೊಳ್ಳುವುದು, ದೇಶದಲ್ಲಿ ಸ್ವಲ್ಪ ಮಟ್ಟಿಗೆ ಫೆಡೆರಲ್ ರಾಜಕೀಯಕ್ಕೆ, ವಿವಿಧವರ್ಗಗಳ ಸಮಾನತೆಗೆ, ಪಾಲುದಾರಿಕೆಗೆ ನೆರವಾಯಿತು. ಅವೆಲ್ಲವನ್ನು ರದ್ದು ಮಾಡಿ, ಒಂದೇ ಒಂದು ಭಾವನಾತ್ಮಕ ವಿಭಜನೆಯನ್ನು ದೇಶವ್ಯಾಪಿಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. ಆ ಪ್ರಯತ್ನಗಳನ್ನು ಪತ್ತೆ ಮಾಡಬಲ್ಲವರಾಗಿ ನಿಸ್ಸಹಾಯಕರಾಗಿರುವವರು ಕೆಲವರು, ಅಷ್ಟೋ ಇಷ್ಟೋ ಶಕ್ತಿಯುಕ್ತಿಗಳಿದ್ದೂ ಒಂಟಿಗಾಲಲ್ಲಿ ತಪಸ್ಸು ಮಾಡುತ್ತಿರುವವರು ಕೆಲವರು. ಕಾಳ್ಗಿಚ್ಚು ಯಾರನ್ನು ಬಿಡುತ್ತದೆ!?


(ಕೃಪೆ: ಆಂಧ್ರಜ್ಯೋತಿ)

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top