---

ಸಮವಸ್ತ್ರ ಪುಸ್ತಕ ದಂಧೆಗೆ ಕಡಿವಾಣವಿಲ್ಲವೇ?

ಮಾನ್ಯರೇ,

ರಾಜ್ಯದ ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಾವಕಾಶ ಬಯಸುತ್ತಿರುವ ಮಕ್ಕಳಿಗೆ ಆ ಶಾಲೆಯ ಆಡಳಿತ ಮಂಡಳಿ ಕೇವಲ ಶಿಕ್ಷಣ ಕೊಡುವುದನ್ನು ಮಾತ್ರ ಮಾಡದೆ, ವ್ಯಾಪಾರದಲ್ಲೂ ತೊಡಗಿಕೊಂಡಿವೆೆ. ಪುಸ್ತಕಗಳನ್ನು ಇವರು ಹೇಳಿದ ಅಂಗಡಿಯಲ್ಲಿಯೇ ಖರೀದಿಸಬೇಕು. ಸಮವಸ್ತ್ರವನ್ನು ಇವರು ಹೇಳಿದ ಟೈಲರ್ ಬಳಿಯಲ್ಲಿಯೇ ಹೊಲಿಸಬೇಕು. ಇನ್ನು ಚಪ್ಪಲಿ, ಶೂವನ್ನು ಸಹ ಖರೀದಿಸಲು ಅಂಗಡಿಗಳನ್ನು ನಿಗದಿಪಡಿಸಿದ್ದಾರೆ. ಶಿಕ್ಷಣ ಸಂಸ್ಥೆಗಳು ಇಂತಹ ವಿಚಾರಗಳಲ್ಲಿ ಪೋಷಕರಿಗೆ ಯಾವುದೇ ರೀತಿಯ ಸ್ವಾತಂತ್ರ್ಯವನ್ನು ಕೊಡುವುದಿಲ್ಲ. ಇವರು ನಿಗದಿಪಡಿಸಿರುವ ಅಂಗಡಿಗಳಲ್ಲಿ ಈ ಎಲ್ಲಾ ವಸ್ತುಗಳಿಗೆ ಇರುವ ದರಕ್ಕೂ, ಬೇರೆ ಕಡೆಗಳಲ್ಲಿ ದೊರಕುವ ಬೆಲೆಗೂ ಭಾರೀ ಪ್ರಮಾಣದ ಅಂತರವಿದೆ. ಇವಷ್ಟೇ ಅಲ್ಲದೇ, ಇವರು ಹೇಳಿದ ಕಡೆಯಲ್ಲಿಯೇ ಟ್ಯೂಷನ್‌ಗಳಿಗೆ ಸೇರಿಕೊಳ್ಳಬೇಕು. ಶಿಕ್ಷಕರು ಮನೆಯಲ್ಲಿ ನಡೆಸುವ ಟ್ಯೂಷನ್ ತರಗತಿಗೆ ಸೇರಲೇಬೇಕು. ಇಲ್ಲದಿದ್ದರೆ, ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವುದು ಕಷ್ಟ ಸಾಧ್ಯ!. 1ರಿಂದ 8ನೇ ತರಗತಿ ತನಕ ಮಕ್ಕಳನ್ನು ಫೇಲ್ ಮಾಡಬಾರದೆಂಬ ನಿಯಮವಿದ್ದರೂ ಹಲವಾರು ಶಿಕ್ಷಣ ಸಂಸ್ಥೆಗಳಲ್ಲಿ ಈ ನಿಯಮ ಮುರಿದು ಅನುತ್ತೀರ್ಣಗೊಳಿಸಿ ಮರುಪರೀಕ್ಷೆಗಳನ್ನು ಮಾಡಿ ವರ್ಗಾವಣೆ ಪತ್ರ ನೀಡಿ ಬೇರೆ ಶಾಲೆಗಳಿಗೆ ಸೇರಿಸುವಂತೆ ಒತ್ತಡವನ್ನು ಹಾಕುತ್ತಿದ್ದಾರೆ. ಇನ್ನ್ನು ಇವರು ವಸೂಲಿ ಮಾಡುತ್ತಿರುವ ವಂತಿಗೆ ಹಾಗೂ ಶುಲ್ಕಗಳಿಗೆ ಲೆಕ್ಕವೇ ಇಲ್ಲ. ಒಟ್ಟಾರೆಯಾಗಿ ಬಡವರ ಮನೆಯ ಮಕ್ಕಳು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಓದುವುದು ಎಂದರೆ, ಪೋಷಕರ ಜೇಬಿಗೆ ಕತ್ತರಿ ಬೀಳುತ್ತದೆ. ಯಾವ ಶಿಕ್ಷಣ ಸಂಸ್ಥೆಯವರೂ ಓದಿನಲ್ಲಿ ಹಿಂದೆ ಇರುವ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವುದಿಲ್ಲ. ತಂದೆ ತಾಯಿಯ ಆದಾಯ, ಪೋಷಕರ ವಿದ್ಯಾರ್ಹತೆ, ಇವೆಲ್ಲವನ್ನೂ ನೋಡಿಯೇ ಪ್ರವೇಶ ಕೊಡುವುದು. ಇದರ ಜೊತೆಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ಪುಟ್ಟ ಮಕ್ಕಳ ಪ್ರವೇಶಕ್ಕೆ ಸಂದರ್ಶನ ವ್ಯವಸ್ಥೆ ಇರಬಾರದೆಂಬ ಕಾನೂನು ಇದ್ದರೂ ಇದನ್ನು ಯಾರೂ ಕೇಳುವವರೇ ಇಲ್ಲದಂತಾಗಿದೆ. 

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top