ದೂರು-ದುಮ್ಮಾನ: ಸಿಗದ ಮಾನ್ಯತೆ: ವಿದ್ಯಾರ್ಥಿಗಳ ಭವಿಷ್ಯ ಅತಂತ್ರ | Vartha Bharati- ವಾರ್ತಾ ಭಾರತಿ

---

ದೂರು-ದುಮ್ಮಾನ: ಸಿಗದ ಮಾನ್ಯತೆ: ವಿದ್ಯಾರ್ಥಿಗಳ ಭವಿಷ್ಯ ಅತಂತ್ರ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ (ಕರಾಮುವಿವಿ) ಮೈಸೂರು, ವಿದ್ಯಾರ್ಥಿಗಳು ಕಳೆದ 4 ವರ್ಷಗಳಿಂದ ತಮ್ಮ ಜೀವನವನ್ನು ಹಗ್ಗದ ಮೇಲಿನ ನಡಿಗೆಯಂತೆ ಇಂದು ಸಿಗಬಹುದು ನಾಳೆ ಸಿಗಬಹುದು ಎಂಬ ಆಸೆ, ನಂಬಿಕೆಯಿಂದ ಸಾಗಿಸುತ್ತಿದ್ದಾರೆ. ಆದರೆ ಇವರ ಆಶಯಗಳಿಗೆ ನೀರೆರೆದು ಪೋಷಿಸದ ಸರಕಾರಗಳು ತಮ್ಮ ಹಿಂದಿನ ನಿಲುವುಗಳಂತೆ ಜಾಣ ಕುರುಡುತನ ಪ್ರದರ್ಶಿಸುತ್ತಿವೆ. ಅಸಂಘಟಿತ ವಿದ್ಯಾರ್ಥಿಗಳ ಗುಂಪುಗಳು ಯಾವ ಪ್ರತಿರೋಧವನ್ನೂ ಉಂಟು ಮಾಡುವುದಿಲ್ಲ ಎಂಬ ಭಾವನೆಗಳು ಅವರ ನಿಲುವುಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಕರಾಮುವಿವಿಯು ತನ್ನ ವ್ಯಾಪ್ತಿಯನ್ನು ಮೀರಿ ತಾಂತ್ರಿಕ ಶಿಕ್ಷಣ ಹಾಗೂ ನಿಯಮ ಬಾಹಿರವಾಗಿ ಇತರ ರಾಜ್ಯಗಳಲ್ಲೂ ತನ್ನ ಅಧ್ಯಯನ ಕೇಂದ್ರಗಳನ್ನು ಹೊಂದಿದೆ ಎಂಬ ಕಾರಣಗಳನ್ನು ನೀಡಿ ದಿನಾಂಕ 16.06.2015ರಂದು ಪೂರ್ವಾನ್ವಯವಾಗುವಂತೆ 2013-14 ನೇ ಸಾಲಿನಿಂದ ಕರಾಮುವಿವಿಯ ಸಂಪೂರ್ಣ ಮಾನ್ಯತೆಯನ್ನು ರದ್ದುಪಡಿಸುವುದರೊಂದಿಗೆ ವಿದ್ಯಾರ್ಥಿಗಳ ಯಾವ ತಪ್ಪುಗಳಿಲ್ಲದಿದ್ದರೂ ಅವರ ಜೀವನವನ್ನು ಬೀದಿಗೆ ತಂದು ನಿಲ್ಲಿಸಿದೆ.

ಈ ಬಗ್ಗೆ 2015ರಲ್ಲಿ ವಿಶ್ವವಿದ್ಯಾನಿಲಯ ಹಾಗೂ ಪ್ರಾದೇಶಿಕ ಅಧ್ಯಯನ ಕೇಂದ್ರಗಳಲ್ಲಿ ವಿಚಾರಿಸಿದಾಗ ಅಲ್ಲಿಯೂ ಕೂಡ ‘‘ಯಾವುದೇ ತೊಂದರೆಯಿಲ್ಲ’’ ಎಂಬ ಹಸಿ ಸುಳ್ಳುಗಳ ಸರಮಾಲೆಗಳನ್ನು ಹೆಣೆದು ಶಿಕ್ಷಣ ಮುಂದುವರಿಸಿ ಎಂಬ ನಿರ್ದೇಶನವನ್ನು ನೀಡಿ ಪದವಿಗಳನ್ನು ಪೂರ್ಣಗೊಳಿಸಿದ ನಂತರ ಮಾನ್ಯತೆಯಿಲ್ಲ, ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ (ಯುಜಿಸಿ) ಮುಂದಿನ ನಿರ್ದೇಶನದವರೆಗೂ ಕಾಯಿರಿ ಎಂದು ಅಂದಿನಿಂದಲೂ ಸಬೂಬು ಹೇಳುತ್ತಿದ್ದಾರೆ. ಹೀಗಾಗಿ ಸುಮಾರು 96,000 ವಿದ್ಯಾರ್ಥಿಗಳ ಬದುಕು ಅತಂತ್ರ ಸ್ಥಿತಿಗೆ ತಲುಪಿದೆ. ಕಳೆದ ವಿಧಾನಸಭೆ ಚುನಾವಣೆಯ ವೇಳೆ ಕೇಂದ್ರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾದ ಪ್ರಕಾಶ್ ಜಾವಡೇಕರ ‘‘ಮುಂದಿನ ಸಾಲಿನಲ್ಲಿ ಹೊಸದಾಗಿ ಮಾನ್ಯತೆ ನೀಡುತ್ತೇವೆ, ಹಾಗೆಯೇ 2013-14 ನೇ ಸಾಲಿನ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ತರಬೇತಿಯನ್ನು ನೀಡಿ ಪರೀಕ್ಷೆಯನ್ನು ನಡೆಸುತ್ತೇವೆ. ಉತ್ತೀರ್ಣಗೊಂಡ ವಿದ್ಯಾರ್ಥಿ ಗಳಿಗೆ ಪದವಿ ಪ್ರಮಾಣ ಪತ್ರವನ್ನು ನೀಡಲಾಗುವುದು’’ ಎಂದು ನೀಡಿದ ಭರವಸೆಯು ಚುನಾವಣೆ ಮುಗಿದು 10 ತಿಂಗಳು ಕಳೆದರೂ ಕೇವಲ ಹೊಸ ಪ್ರವೇಶಾತಿಗಳಿಗೆ 2018-19 ಸಾಲಿಗೆ ಅವಕಾಶವನ್ನು ಕೊಟ್ಟರೇ ಹೊರತು 2013-14, 2014-15ನೇ ಸಾಲಿನ ವಿದ್ಯಾರ್ಥಿಗಳಿಗೆ ನೀಡಿದ ಭರವಸೆಯು ಭರವಸೆಯಾಗಿಯೇ ಉಳಿದಿದೆ.

ಈ ವಿದ್ಯಾರ್ಥಿಗಳು ಸ್ಪರ್ಧಾ ಪರೀಕ್ಷೆಗಳಲ್ಲಿ ಉತ್ತೀರ್ಣರಾದರೂ ಪದವಿಗೆ ಮಾನ್ಯತೆಯಿಲ್ಲ ಎಂಬ ಕಾರಣಗಳನ್ನು ನೀಡಿ ನೇಮಕಾತಿಗಳಿಗೂ ಪರಿಗಣಿಸುತ್ತಿಲ್ಲ. ಹಾಗೆಯೇ ಖಾಸಗಿ ವಲಯಗಳು ಸಹ ಪರಿಗಣನೆಗೆ ತೆಗೆದುಕೊಳ್ಳದೆ ಜೀವನ ಕಟ್ಟಿಕೊಳ್ಳದ ಸ್ಥಿತಿಯಲ್ಲಿದ್ದಾರೆ ವಿದ್ಯಾರ್ಥಿಗಳು. ಈ ಸಂಬಂಧ ಕರ್ನಾಟಕ ರಾಜ್ಯದ ಉಚ್ಚ ನ್ಯಾಯಾಲಯವು 2012-13ನೇ ಸಾಲಿನಿಂದ ಪೂರ್ವಾನ್ವಯವಾಗುವಂತೆ ಮಾನ್ಯತೆ ಪರಿಗಣಿಸುವಂತೆ ಆದೇಶಿಸಿದ 2013-14, 2014-15ನೇ ಸಾಲಿನ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಸಮಿತಿಯನ್ನು ರಚಿಸಿ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುವಂತೆ ಆದೇಶಿಸಿತ್ತು. ಅದರನ್ವಯ ಕರ್ನಾಟಕ ರಾಜ್ಯ ಸರಕಾರ ಅಂದಿನ ಮುಖ್ಯ ಕಾರ್ಯದರ್ಶಿಯಾದ ಶ್ರೀಮತಿ ರತ್ನಪ್ರಭಾ ಅವರನ್ನು ಅಧ್ಯಕ್ಷರನ್ನಾಗಿ ಒಳಗೊಂಡ ಸಮಿತಿಯನ್ನು ರಚಿಸಿತು. ಆ ಸಮಿತಿಯು ಅಧ್ಯಯನ ಮಾಡಿ ಸುಪ್ರೀಂ ಕೋರ್ಟಿನ ತೀರ್ಪನ್ನು ಗಮನಿಸಿ ತಾಂತ್ರಿಕ ಶಿಕ್ಷಣ ಹಾಗೂ ವ್ಯಾಪ್ತಿಯ ಅಂಶವನ್ನು ಗಣನೆಗೆ ತೆಗೆದುಕೊಂಡು ಸುಮಾರು 96,000 ವಿದ್ಯಾರ್ಥಿಗಳ ಭವಿಷ್ಯಕ್ಕೆ ಅನುಕೂಲವಾಗುವಂತೆ ಕರಾಮುವಿವಿಯ ವ್ಯಾಪ್ತಿಯ ಇನ್ ಹೌಸ್ ವಿದ್ಯಾರ್ಥಿಗಳ (ತಾಂತ್ರಿಕೇತರ) ಪದವಿಗಳನ್ನು ಮಾನ್ಯತೆ ನೀಡಿ ಮುಂದಿನ ಶಿಕ್ಷಣ ಹಾಗೂ ನೇಮಕಾತಿಗಳಿಗೆ ಪರಿಗಣಿಸುವಂತೆ ತನ್ನ ವರದಿಯನ್ನು ರಚಿಸಿ ಸರಕಾರಕ್ಕೆ ನೀಡಿತು. ಇದನ್ನು ಪರಿಗಣಿಸಿದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಸಚಿವ ಸಂಪುಟದಲ್ಲಿ ಅನುಮೋದಿಸಿ ರಾಜ್ಯಪಾಲರ ಅನುಮೋದನೆಗೆ ಕಳುಹಿಸಿತು. ಇದರಿಂದ ಸ್ವಲ್ಪನಿರಾಳವಾಗಿದ್ದ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಕಂಟಕ ಎದುರಾಯಿತು.

ಅದೇನೆಂದರೆ ರಾಜ್ಯಪಾಲರು ಅಂಕಿತ ಹಾಕಲು ನಿರಾಕರಿಸುವ ಮೂಲಕ ವಿದ್ಯಾರ್ಥಿಗಳ ಆಸೆಗೆ ತಣ್ಣೀರೆರಚಿದರು. ಒಟ್ಟಿನಲ್ಲಿ ವಿದ್ಯಾರ್ಥಿಗಳು ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದೇವೆ. ಆದರೆ ಈ ವಿಷಯ ಇಷ್ಟೊಂದು ಗಂಭೀರತೆ ಪಡೆದುಕೊಂಡಿದ್ದರೂ ಗಮನಕ್ಕೇ ತೆಗೆದುಕೊಳ್ಳದ ನಮ್ಮ ರಾಜ್ಯದ 28 ಸಂಸದರು, 224 ಶಾಸಕರು ಇದ್ದಾರೆ. ಅವರಿಗೆ ನಿಜವಾಗಲೂ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ಇದೆಯೇ ಎಂಬ ಭಾವನೆ ನಮ್ಮಲ್ಲಿ ಕಾಡುತ್ತಿದೆ.

ಕೆಲವು ಪ್ರಶ್ನೆಗಳಿಗೆ ಉತ್ತರಗಳು ಸಹ ಮರೀಚಿಕೆಯಾಗಿದೆ ಅವುಗಳೆಂದರೆ 1) ದಿನಾಂಕ:16-06-2015ರಲ್ಲಿ 2013-14 ನೇ ಸಾಲಿನಿಂದ ಕರಾಮುವಿವಿ ಮಾನ್ಯತೆಯನ್ನು ರದ್ದುಗೊಳಿಸುವ ಯುಜಿಸಿ ಅಲ್ಲಿಯವರೆಗೂ ಏನು ಮಾಡುತ್ತಿತ್ತು? 2)2013-14ರಲ್ಲೇ ಇದರ ಬಗ್ಗೆ ಪ್ರಕಟನೆೆ ಕೊಡದ ಕಾರಣವೇನು? 3) ಕರಾಮುವಿವಿ ತನ್ನ ನಿಯಮಗಳನ್ನು ಮೀರಿ ಕಾರ್ಯ ನಿರ್ವಹಿಸಿದ್ದೇಕೆ? 4)ಕರಾಮುವಿವಿ ಮಾನ್ಯತೆ ಪಡೆಯದಿದ್ದರೂ ಪ್ರವೇಶಾತಿ ನೀಡಿದ್ದೇಕೆ? 5)ರಾಜ್ಯಪಾಲರು ಸಹಿಗೆ ನಿರಾಕರಿಸಿ ಕಳುಹಿಸಿದಾಗ ಮತ್ತೊಮ್ಮೆ ಕಳುಹಿಸಿಕೊಡಲಿಲ್ಲವೇಕೆ? 6)ಇಲ್ಲಿಯವರೆಗೆ ತಪ್ಪಿತಸ್ಥರಲ್ಲಿ ಎಷ್ಟು ಜನಕ್ಕೆ ಶಿಕ್ಷೆಯಾಗಿದೆ?? 7)ಈ ವಿಷಯಕ್ಕೆ ಸಂಬಂಧಿಸಿದಂತೆ ಸರಕಾರದ ಮುಂದಿನ ಕಾರ್ಯಸೂಚಿಗಳೇನು?

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top