ಇವಿಎಂ ಯಂತ್ರಗಳಿಂದ ಮೋಸ!? | Vartha Bharati- ವಾರ್ತಾ ಭಾರತಿ

---

ಇವಿಎಂ ಯಂತ್ರಗಳಿಂದ ಮೋಸ!?

ಮಾನ್ಯರೇ,

ಮಂಗಳೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕಲ್ಲಾಪು ಮತ್ತು ಒಂಬತ್ತುಕೆರೆ ಎಂಬ ಎರಡು ಬೂತುಗಳಲ್ಲಿ ನಿಜ ಮತದಾನಕ್ಕೆ ಮುಂಚೆ ‘ಡೆಮೋ’ ಮತದಾನದ ಸಮಯದಲ್ಲಿ ಕಾಂಗ್ರೆಸ್‌ಗೆ ಹಾಕಿದ ಮತಗಳೆಲ್ಲಾ ಬಿಜೆಪಿಗೆ ತನ್ನಿಂದ ತಾನೇ ವರ್ಗಾವಣೆ ಆಗಿರುವುದು ಕಂಡು ಬಂತು. ಒಂಬತ್ತುಕೆರೆಯಲ್ಲಿ ಕಾಂಗ್ರೆಸ್ ಪರ ಚಲಾಯಿಸಿದ 50 ಡೆಮೋ ಮತಗಳಲ್ಲಿ 42 ಮತಗಳು ಬಿಜೆಪಿಗೆ ವರ್ಗಾವಣೆ ಆಗಿತ್ತು. ವಿಚಿತ್ರವೆಂದರೆ ಬಿಎಸ್ಪಿ, ಕಮ್ಯೂನಿಸ್ಟ್ ಸಹಿತ ಇನ್ನುಳಿದ ಯಾವುದೇ ಪಕ್ಷಕ್ಕೆ ಕಾಂಗ್ರೆಸ್ ಮತ ವರ್ಗಾವಣೆಯಾಗದೆ ಕೇವಲ ಬಿಜೆಪಿಗೆ ಮಾತ್ರ ಯಾಕೆ ಈ ಯಂತ್ರ ಪಕ್ಷಪಾತದಿಂದ ಮತ ವರ್ಗಾವಣೆ ಮಾಡಿತು? ನಂತರ ಈ ಎರಡೂ ಕಡೆ ಯಂತ್ರವನ್ನು ಬದಲಾಯಿಸಲಾಯಿತು ನಿಜ. ಆದರೆ ಇನ್ನುಳಿದ ಯಂತ್ರಗಳಲ್ಲಿಯೂ ಹೀಗೆ ಬಿಜೆಪಿ ಪರ ಮತ ವರ್ಗಾವಣೆ ಆಗುವ ಫ್ರೀ-ಪ್ರೋಗ್ರಾಮಿಂಗ್ ಇದ್ದು ಅವುಗಳಲ್ಲಿ ಬೆಳಗ್ಗೆ ಮತ ವರ್ಗಾವಣೆ ಆಗುವ ಬದಲು ಸಂಜೆ ಮತದಾನ ಮುಗಿದ ಮೇಲೆ ಮತಗಳು ಕಾಂಗ್ರೆಸ್‌ನಿಂದ ಬಿಜೆಪಿಗೆ ತನ್ನಿಂದ ತಾನೇ ವರ್ಗಾವಣೆ ಆಗುವಂತೆ ಪ್ರಿ-ಪ್ರೋಗ್ರಾಮಿಂಗ್ ಮಾಡಿದ್ದರೆ ಅದು ಪತ್ತೆ ಆಗುವುದು ಹೇಗೆ ಸಾಧ್ಯ? ಕಾಂಗ್ರೆಸ್‌ನ ಪ್ರತಿನಿಧಿಗಳು ಇಲ್ಲಿ ಒಂದು ದೊಡ್ಡ ತಪ್ಪುಮಾಡಿದರು. ಅವರು ಈ ದೋಷಪೂರಿತ ಎರಡೂ ಇವಿಎಂ ಯಂತ್ರಗಳನ್ನು ತಮ್ಮ ಎದುರೇ ಸೀಲ್ ಮಾಡಿಸಿ ಜಿಲ್ಲಾಧಿಕಾರಿಗಳ ಸುಪರ್ದಿಗೆ ಒಪ್ಪಿಸಿ, ಆನಂತರ ಅವನ್ನು ಮುಖ್ಯ ಚುನಾವಣಾ ಅಧಿಕಾರಿಗೆ ಹಾಗೂ ಸುಪ್ರೀಂ ಕೋರ್ಟಿಗೆ ಒಪ್ಪಿಸಿ ಅವರ ಎದುರಲ್ಲಿ ಮತ್ತೆ ಡೆಮೋ ಮಾಡಿ, ಇವಿಎಂ ಯಂತ್ರಗಳನ್ನು ಫ್ರೀ-ಪ್ರೋಗ್ರಾಮಿಂಗ್ ಮಾಡಿ ಮೋಸ ಮಾಡುವುದು ನಿಜವಾಗಿ ಸಾಧ್ಯ ಎಂದು ಸಾಬೀತು ಮಾಡಬಹುದಿತ್ತು. ಯಾಕೆಂದರೆ ಮುಖ್ಯ ಚುನಾವಣಾ ಅಧಿಕಾರಿಗಳು ಇವಿಎಂ ಯಂತ್ರಗಳನ್ನು ಯಾರೂ ಫ್ರೀ-ಪ್ರೋಗ್ರಾಮಿಂಗ್ ಮಾಡುವುದು ಸಾಧ್ಯವೇ ಇಲ್ಲ ಎಂಬ ಒಂದೇ ಮಾತನ್ನು ಯಾವಾಗಲೂ ಹೇಳುತ್ತಿರುತ್ತಾರೆ. ಹಾಗಾದರೆ ಮಂಗಳೂರು ನಗರದ ಕಲ್ಲಾಪು ಮತ್ತು ಒಂಬತ್ತುಕೆರೆ ಈ ಎರಡೂ ಬೂತುಗಳಲ್ಲಿ ಇವಿಎಂ ಯಂತ್ರಳು ಒಂದೇ ರೀತಿಯ ದೋಷ ತೋರಿಸಿದ್ದು ಯಾಕೆ? ಅಂದರೆ ಎರಡೂ ಕಡೆ ಕಾಂಗ್ರೆಸ್‌ನ ಮತಗಳು ಕೇವಲ ಬಿಜೆಪಿಗೆ ವರ್ಗಾವಣೆ ಆಗಿದ್ದು ಯಾಕೆ? ಬಿಜೆಪಿಯ ಮತಗಳು ಯಾಕೆ ಬೇರೆ ಪಕ್ಷಕ್ಕೆ ವರ್ಗಾವಣೆ ಆಗುವ ದೋಷ ಯಂತ್ರಗಳಲ್ಲಿ ಹುಟ್ಟಲಿಲ್ಲ? ಕಳೆದ ವಿಧಾನ ಸಭಾ ಚುನಾವಣೆಯಲ್ಲೂ ಇಲ್ಲಿ ಸೋತ ಕಾಂಗ್ರೆಸ್ ಅಭ್ಯರ್ಥಿ ಜೆ. ಆರ್. ಲೋಬೋ ಇದೇ ಇವಿಎಂ ಮೋಸದ ಆರೋಪ ಮಾಡಿ ಹೈಕೋರ್ಟಿಗೆ ಹೋಗಿ ವಿವಿಪ್ಯಾಟ್ ಮತಚೀಟಿಗಳನ್ನು ಸಂಪೂರ್ಣ ಎಣಿಸಬೇಕು ಎಂದು ಕೋರಿಕೊಂಡಿದ್ದರು. ಆದರೆ ಹತ್ತು ತಿಂಗಳು ಕಳೆದರೂ ಹೈಕೋರ್ಟ್ ಈವರೆಗೆ ಈ ಬಗ್ಗೆ ನಿರ್ಣಯ ಕೈಗೊಂಡಿಲ್ಲ!. ಕಲ್ಲಾಪು ಮತ್ತು ಒಂಬತ್ತುಕೆರೆಯಲ್ಲಿ ಎರಡೆರಡು ಕಡೆ ಇವಿಎಂ ಮೋಸದ ಗಟ್ಟಿ ಪುರಾವೆ ದೊರೆತಿರುವಾಗ ಈಗಲಾದರೂ ಜೆ. ಆರ್. ಲೋಬೊರವರ ಕೋರಿಕೆ ಮನ್ನಿಸಿ ಕಳೆದ ವರ್ಷ ನಡೆದ ಮಂಗಳೂರು ನಗರದ ಮೂರೂ ವಿಧಾನಸಭಾ ಕ್ಷೇತ್ರಗಳ ವಿವಿಪ್ಯಾಟ್ ಮತಚೀಟಿಗಳನ್ನು ಎಣಿಸಲು ಹೈಕೋರ್ಟ್ ಆದೇಶ ಕೊಡಬೇಕು. ಇವಿಎಂಗಳಿಂದಾಗಿ ಅಪಾಯದಲ್ಲಿರುವ ಪ್ರಜಾತಂತ್ರವನ್ನು ಉಳಿಸಬೇಕಾದರೆ ಪ್ರತಿ ಕ್ಷೇತ್ರದಲ್ಲೂ ಶೇ.50 ವಿವಿಪ್ಯಾಟ್ ಮತಚೀಟಿ ಎಣಿಸಲೇಬೇಕು. ಕಲ್ಲಾಪು, ಒಂಬತ್ತುಕೆರೆಯ ದೋಷಪೂರಿತ ಇವಿಎಂ ಯಂತ್ರಗಳನ್ನು ಜಿಲ್ಲಾಧಿಕಾರಿಯೇ ಸಾಕ್ಷಿಯಾಗಿ ಕೋರ್ಟಿಗೆ ಸಲ್ಲಿಸಬೇಕು. 

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top