ಭಾರತ ಹೇಗೆ ತಪ್ಪು ದಾರಿ ಹಿಡಿಯಿತು? | Vartha Bharati- ವಾರ್ತಾ ಭಾರತಿ

---

ಭಾರತ ಹೇಗೆ ತಪ್ಪು ದಾರಿ ಹಿಡಿಯಿತು?

ಐದು ವರ್ಷಗಳ ಮೋದಿ ಆಡಳಿತದಲ್ಲಿ ಅವರ ‘ಸಹಜ ವಿವೇಕ’ದ ಕಾರಣದಿಂದ ಭಾರತ ಅನೇಕ ವಿಧಗಳಲ್ಲಿ ಹಾನಿಗೊಂಡಿತು. ನಾನಾ ಯಾತನೆ ಪಟ್ಟಿತು. ಮುಖ್ಯವಾಗಿ 2016 ನವೆಂಬರ್‌ನಲ್ಲಿ ಮೋದಿ ಸರಕಾರ ಹಠಾತ್ತಾಗಿ ಶೇ. 90 ಕರೆನ್ಸಿ ನೋಟುಗಳನ್ನು ಚಲಾವಣೆಯಿಂದ ಹಿಂದೆಗೆದು ಕೊಳ್ಳಬೇಕೆಂದು ನಿರ್ಣಯ ಕೈಕೊಂಡಿದ್ದರಿಂದ ಅಸಂಖ್ಯ ಭಾರತೀಯರು ಆ ಕಾರಣದಿಂದಲೇ ಸಂಕಟಗಳನ್ನು ಅನುಭವಿಸಿದರು. ಭಾರತ ಆರ್ಥಿಕ ವ್ಯವಸ್ಥೆಗೆ ಅಪಾರ ನಷ್ಟ ಉಂಟಾಗಿಸುವ, ದಕ್ಷಿಣ ಏಶ್ಯಾವನ್ನು ಅಣುಸಮರದ ಅಂಗಳಕ್ಕೆ ಕೊಂಡೊಯ್ಯುವುದು ಮೊದಲಾದವುಗಳೊಂದಿಗೆ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯ ಮುಖ್ಯಸ್ಥ ಮೋದಿ, ಅಪಾಯಕಾರಿ ಅನರ್ಹ ಎಂದು ಸಾಬೀತು ಮಾಡಿದರು.

ಪ್ರಧಾನಿ ಮೋದಿ ಆದೇಶದ ಮೇರೆಗೆ ಈ ವರ್ಷ ಫೆಬ್ರವರಿ 26 ರಂದು ಬೆಳಗಿನ ಜಾವದಲ್ಲಿ ಪಾಕಿಸ್ತಾನದಲ್ಲಿನ ಬಾಲಕೋಟ್‌ನಲ್ಲಿರುವ ಉಗ್ರವಾದ ಶಿಬಿರಗಳ ಮೇಲೆ ಭಾರತೀಯ ವಾಯುಸೇನೆ ಮಿಂಚಿನ ದಾಳಿ ನಡೆಸಿತು. ಆ ಬೆಳಗ್ಗೆ ಭಾರತ -ಪಾಕಿಸ್ತಾನ ಗಡಿ ಪ್ರಾಂತಗಳ ವಾಯುಮಂಡಲ ದಟ್ಟವಾಗಿ ಮೇಘಾವೃತವಾಗಿತ್ತು. ವೈಮಾನಿಕ ದಾಳಿಗಳಿಗೆ ಮೇಘಗಳು ತಡೆಯೊಡ್ಡುತ್ತವೆಯೇನೋ ಎಂದು ವಾಯುಸೇನಾಧಿಕಾರಿಗಳು ಅಂದಾಗ ಅವರ ಸಂಶಯವನ್ನು ತಳ್ಳಿಹಾಕಿ ಕರ್ತವ್ಯ ಪಾಲನೆಗೆ ಮುಂದಾಗಿ ಎಂದು ಸ್ಪಷ್ಟಪಡಿಸಿದೆನೆಂದು 17ನೇ ಲೋಕಸಭಾ ಚುನಾವಣೆಯ ಪ್ರಚಾರದ ಕೊನೆ ಹಂತದಲ್ಲಿ ಮೋದಿ ಹೇಳಿಕೊಂಡರು. ಅವರು ಇನ್ನೂ ಹೀಗೆಂದರು ‘ಸೈನ್ಸ್ ಬಗ್ಗೆ ನನಗೆ ಏನೂ ತಿಳಿಯದ ಮಾತು ನಿಜ. ಆದರೆ ನನ್ನ ಸಹಜ ವಿವೇಕವನ್ನು ಪೂರ್ತಿಯಾಗಿ ನಂಬಿದೆ. ಆಕಾಶ ಮೇಘಾವೃತವಾಗಿ ಇರುವುದರಿಂದ ಭಾರತೀಯ ಫೈಟರ್ ಜೆಟ್‌ಗಳನ್ನು ಪಾಕಿಸ್ತಾನಿ ರಾಡಾರ್‌ಗಳು ಕಂಡುಕೊಳ್ಳಲಾರವು ಎಂದು ನನ್ನ ‘ಸಹಜ ವಿವೇಕ’ ನನಗೆ ಹೇಳಿತು.’’

ಐದು ವರ್ಷಗಳ ಮೋದಿ ಆಡಳಿತದಲ್ಲಿ ಅವರ ‘ಸಹಜ ವಿವೇಕ’ದ ಕಾರಣದಿಂದ ಭಾರತ ಅನೇಕ ವಿಧಗಳಲ್ಲಿ ಹಾನಿಗೊಂಡಿತು. ನಾನಾ ಯಾತನೆ ಪಟ್ಟಿತು. ಮುಖ್ಯವಾಗಿ 2016 ನವೆಂಬರ್‌ನಲ್ಲಿ ಮೋದಿ ಸರಕಾರ ಹಠಾತ್ತಾಗಿ ಶೇ. 90 ಕರೆನ್ಸಿ ನೋಟುಗಳನ್ನು ಚಲಾವಣೆಯಿಂದ ಹಿಂದೆೆಗೆದುಕೊಳ್ಳಬೇಕೆಂದು ನಿರ್ಣಯ ಕೈಕೊಂಡಿದ್ದರಿಂದ ಅಸಂಖ್ಯ ಭಾರತೀಯರು ಆ ಕಾರಣದಿಂದಲೇ ಸಂಕಟಗಳನ್ನು ಅನುಭವಿಸಿದರು. ಭಾರತ ಆರ್ಥಿಕ ವ್ಯವಸ್ಥೆಗೆ ಅಪಾರ ನಷ್ಟ ಉಂಟಾಗಿಸುವ, ದಕ್ಷಿಣ ಏಶ್ಯಾವನ್ನು ಅಣುಸಮರದ ಅಂಗಳಕ್ಕೆ ಕೊಂಡೊಯ್ಯುವುದು ಮೊದಲಾದವುಗಳೊಂದಿಗೆ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯ ಮುಖ್ಯಸ್ಥ ಮೋದಿ, ಅಪಾಯಕಾರಿ ಅನರ್ಹ ಎಂದು ಸಾಬೀತು ಮಾಡಿದರು.

ಮೋದಿ ಆಡಳಿತದಲ್ಲಿ ನಿರುದ್ಯೋಗ ಅತ್ಯಂತ ಹೆಚ್ಚಿತು. ಜಮ್ಮು- ಕಾಶ್ಮೀರಗಳಲ್ಲಿ ಉಗ್ರವಾದಿ ಹಿಂಸಾಕಾಂಡ ಹೆಚ್ಚುತ್ತಾ ಹೋಯಿತು. ಕಳೆದ ಫೆಬ್ರವರಿಯಲ್ಲಿ ಪಾಕಿಸ್ತಾನದ ಮೇಲಿನ ವೈಮಾನಿಕ ದಾಳಿಯಲ್ಲಿ ಕೆಲವು ಮರಗಳು ಬಿದ್ದು ಹೋದುದರ ಹೊರತು ಆ ದೇಶಕ್ಕೆ ಏನೂ ನಷ್ಟ ಸಂಭವಿಸಲಿಲ್ಲ.

ಬಡ ಭಾರತೀಯರಿಗೆ ಕೊಂಚ ಮಟ್ಟಿಗೆ ಮೋದಿ ಸರಕಾರ ಒಳಿತು ಮಾಡದೇ ಇಲ್ಲ. ಸ್ವಂತ ಶೌಚಾಲಯ ಕಲ್ಪಿಸಿದರು. ಪ್ರತೀ ಒಬ್ಬರು ಬ್ಯಾಂಕ್ ಅಕೌಂಟ್ ಹೊಂದುವುದಕ್ಕೆ ಸಹಕರಿಸಿದರು. ಅಲ್ಪ ಬಡ್ಡಿ ಮೇಲೆ ಸಾಲದ ಸೌಕರ್ಯ, ವಸತಿ, ವಿದ್ಯುತ್ ಸರಬರಾಜು, ಅಡುಗೆ ಗ್ಯಾಸ್ ಸಿಲಿಂಡರ್ ಇತ್ಯಾದಿಗಳನ್ನು ಒದಗಿಸಿದರು. ಈ ಸಹಾಯಗಳ ಕುರಿತು ಮೋದಿ ಸರಕಾರ ಎಷ್ಟೋ ದೊಡ್ಡದಾಗಿ ಹೇಳಿಕೊಂಡಿತು. ಮಹಾಡಂಬರದಿಂದ ಪ್ರಚಾರ ಮಾಡಿಕೊಂಡಿತು. ಈ ಪ್ರಚಾರದಿಂದ ಮೋದಿ 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಭಾರೀ ಲಾಭ ಪಡೆದರು. ಕಾರ್ಪೊರೇಟ್ ಕಂಪೆನಿಗಳಿಂದ ತಲುಪಿದ ಭಾರೀ ದೇಣಿಗೆಗಳಿಂದ ಚುನಾವಣಾ ಪ್ರಚಾರಕ್ಕೆ ಬಿಜೆಪಿ ಅಮಿತವಾಗಿ ಖರ್ಚು ಮಾಡಿತು.

ಕಾರ್ಪೊರೇಟ್ ಸಂಸ್ಥೆಗಳ ದತ್ತು ಮೀಡಿಯಾ ಮೋದಿಯನ್ನು ‘ಭಾರತ ದೇಶ ರಕ್ಷಕ’ ಎಂದು ಮತದಾರರ ಮನಸ್ಸುಗಳಲ್ಲಿ ಪ್ರತಿಷ್ಠಾಪಿತಗೊಳಿಸಿತು.ಇದುವರೆಗೆ ಯಾವುದೇ ಕಳಂಕಗಳಿಗೆ ಗುರಿಯಾಗದಿದ್ದ ಭಾರತ ಸಾಂವಿಧಾನಿಕ ಸಂಸ್ಥೆಗಳಲ್ಲಿ ಚುನಾವಣಾ ಆಯೋಗ ಕೂಡಾ ಒಂದು. ಅಂತಹ ಸಂಸ್ಥೆ ಕೂಡಾ ಸದ್ಯದ ಚುನಾವಣೆಯಲ್ಲಿ ಎಗ್ಗುಸಿಗ್ಗು ಇಲ್ಲದೆ ಆಡಳಿತ ಪಕ್ಷಕ್ಕೆ ಅನುಕೂಲವಾಗಿ ವ್ಯವಹರಿಸಿತು ಎಂಬ ವಿರೋಧ ಪಕ್ಷಗಳ ಆರೋಪದಲ್ಲಿ ಹುರುಳಿಲ್ಲದಿಲ್ಲ.

ಯುವ ಭಾರತೀಯರ ಮೇಲೆ ಮೋದಿ ಪ್ರಭಾವ ಅಷ್ಟಿಷ್ಟಲ್ಲ. ಅವರನ್ನು ತನ್ನ ವಾಕ್‌ಚಾತುರ್ಯದಿಂದ ಮಂತ್ರಮುಗ್ಧರಾಗಿಸಿದರು. ಭಾರತೀಯರು ತಮ್ಮನ್ನು ತಾವು ಪರಿಭಾವಿಸುತ್ತಿರುವ, ಜಗತ್ತನ್ನು ನೋಡುತ್ತಿರುವ ರೀತಿಯನ್ನು ಆಧುನಿಕ ತಂತ್ರಜ್ಞಾನಗಳ ನೆರವಿನಿಂದ ಪೂರ್ತಿಯಾಗಿ ಬದಲಿಸಿ ಬಿಡುವುದು ಹಾಗೆಯೇ ಸಾರ್ವಜನಿಕ ವಲಯದಲ್ಲಿ ಸಾಂಪ್ರಾದಾಯಿಕ ನಗರ ವಲಯದ ಮೇಧಾವಿ ವರ್ಗಗಳ ಮೇಲೆ ಪ್ರಜೆಗಳಲ್ಲಿ ಅಖಂಡ ಜಿಗುಪ್ಸಾಭಾವವನ್ನು ಕಲ್ಪಿಸುವುದರ ಮೂಲಕ ಮೋದಿ ಭಾರತದಲ್ಲಿ ಹೊಸ ಪ್ರಕ್ರಿಯೆ ಸೃಷ್ಟಿಸಿದರು.

ಭಾರತ ಒಂದು ಅಸಂಬದ್ಧ ಅಸಮಾನತೆಗಳ ಸಮಾಜ. ಭಾರತ ಸಂವಿಧಾನವೂ, ಭಾರತ ರಾಜಕೀಯ ಪಕ್ಷಗಳೂ ಕುಲಮತಗಳಿಗೆ ಅತೀತವಾಗಿ ಭಾರತೀಯರೆಲ್ಲರೂ ಒಂದೇ ಎಂದು ಉದ್ಘೋಷಿಸುತ್ತಿವೆ. ಶಿಕ್ಷಣ, ಉದ್ಯೋಗಾವಕಾಶಗಳ ವಿಷಯದಲ್ಲಿ ಪ್ರತಿಯೊಬ್ಬರಿಗೆ ಸಮಾನ ಹಕ್ಕು ಇದೆ ಎಂದು ಹೇಳುತ್ತವೆ. ಆದರೆ ಈ ಸಮಾನತಾ ಸೂತ್ರಗಳು ಎಷ್ಟು ಭಯಾನಕವಾಗಿ ಉಲ್ಲಂಘನೆಗೆ ಗುರಿಯಾಗುತ್ತಿವೆಯೆಂದು ಅತ್ಯಧಿಕ ಭಾರತೀಯರ ನಿತ್ಯ ಜೀವಿತಾನುಭವಗಳು ನಿರೂಪಿಸುತ್ತಿವೆ. ಭಾರತೀಯರಲ್ಲಿ ಬಹುಸಂಖ್ಯಾತರು ಮಾನವತ್ವ ಮೆರೆವ ಪ್ರಜಾಪ್ರಭುತ್ವದ ಆದರ್ಶಗಳು ಮತ್ತು ತುಚ್ಛ ಹೀನ ಅಪ್ರಜಾಸ್ವಾಮಿಕ ವಾಸ್ತವಗಳ ಮಧ್ಯೆ ಬದುಕುತ್ತಿದ್ದಾರೆ. ಅವರ ಮನಸ್ಸಿನಾಳದಲ್ಲಿ ಕೀಳರಿಮೆ, ಅಸೂಯೆ, ದ್ವೇಷಗಳು ನಾನಾ ಅವಮಾನಗಳ ಗಾಯಗಳು ತುಂಬಿಕೊಂಡಿವೆ. ಒಂದು ಕಠೋರ ಸಾಮಾಜಿಕ ಶ್ರೇಣೀಕೃತ (ಹಿಂದೂ ವರ್ಣ ವ್ಯವಸ್ಥೆಗೆ ಮಿಗಿಲಾದ ಉದಾಹರಣೆ ಇದಕ್ಕೆ ಮತ್ತೊಂದುಂಟೆ?) ವ್ಯವಸ್ಥೆಯಲ್ಲಿ ಉನ್ನತ ಮಟ್ಟದಲ್ಲಿ ಇರುವವರಿಗಿಂತ, ಅಪಜಯ, ಅಪಮಾನಗಳ ಪಾಲಾಗುತ್ತಿರುವ ದೇಶವಾಸಿಗಳ ಸಂಖ್ಯೆ ಬಹು ದೊಡ್ಡದಿದೆ.

 ಈ ಅಪಾಯಕರ ಉದ್ರಿಕ್ತತೆಯನ್ನು 1980ರ ದಶಕದ ಕೊನೆಯ ದಿನಗಳಲ್ಲಿ ಒಂದು ಪ್ರಾದೇಶಿಕ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯಾಗಿ ನಾನು ಪ್ರತ್ಯಕ್ಷ ನೋಡಿದ್ದೆ, ಅನುಭವಿಸಿದ್ದೆ. ಶಿಕ್ಷಣದ ವಿಷಯಗಳಲ್ಲಿ ಪ್ರತಿಭಾಪಟುತ್ವಗಳಲ್ಲಿ, ಸಾಂಸ್ಕೃತಿಕ ರೀತಿ ನೀತಿ ಆಲೋಚನಾ ವೈಖರಿಗಳಲ್ಲೂ ಮೆಟ್ರೋ ಪಾಲಿಟನ್ ಆಂಗ್ಲ ವಿದ್ಯಾವಂತರಿಗೆ ಸರಿಸಾಟಿಯಾಗಿ ರಾರಾಜಿಸಬೇಕೆಂದು ನಾವು ಹಾತೊರೆಯುತ್ತಿದ್ದೆವು. ಇತ್ತೀಚಿನ ಚುನಾಚಣಾ ಪ್ರಚಾರದಲ್ಲಿ ಮೋದಿ ಎಷ್ಟೆಲ್ಲ ಅನುಚಿತವಾಗಿ ಮಾತನಾಡಿ, ದೂಷಿಸಲ್ಪಟ್ಟ ರಾಜೀವ್‌ಗಾಂಧಿ ಅಂದು ನಮ್ಮ ಆಗ್ರಹಕ್ಕೂ ಗುರಿಯಾಗಿದ್ದರು. ವಸಾಹತು ಆಡಳಿತ ಮುಗಿಸಿದ ನಂತರ ಆಧುನಿಕ ಪಾಶ್ಚಾತ್ಯ ಜಗತ್ತಿನ ಮಟ್ಟಕ್ಕೆ ಭಾರತವನ್ನು ಕೊಂಡ್ಯೊಯುವ ಜವಾಬ್ದಾರಿ ಹೊತ್ತಿದ್ದ, ಆದರೆ ವಾಸ್ತವದಲ್ಲಿ ತಮ್ಮ ಹಿತಾಸಕ್ತಿಗೆ ಮಾತ್ರವೇ ಆದ್ಯತೆ ನೀಡಿದ ಡೋಂಗಿ ಸಮಾಜವಾದದ ಕುಲೀನ ವರ್ಗಕ್ಕೆ ಪ್ರತಿನಿಧಿಯಂತಿದ್ದರು ರಾಜೀವ್‌ಗಾಂಧಿ!

 ಈ ಆಂಗ್ಲ ಸುಶಿಕ್ಷಿತ ಮೆಟ್ರೋಪಾಲಿಟಿನ್ ಆಡಳಿತ ವರ್ಗ ನಮ್ಮನ್ನು ಚರಿತ್ರೆ ಯಲ್ಲಿ ಒಂದು ನಿಸ್ಸಹಾಯಕ ಸ್ಥಿತಿಯಲ್ಲಿ ಬಿಟ್ಟು, ತಾವು ಮಾತ್ರ ಶ್ರೀಮಂತ ಪಾಶ್ಚಾತ್ಯ ವಿಶ್ವದೊಂದಿಗೆ ಇರಲು ಕಾತರಿಸಿತು. ಸರ್ವಜಾತಿಗಳ ಅಭಿವೃದ್ಧಿಗೆ ಜವಾಬ್ದಾರಿ ವಹಿಸಬೇಕಾದ ಆ ಕುಲೀನ ವರ್ಗ ತಮ್ಮನ್ನು ನಿರ್ಲಕ್ಷಿಸುವುದು ಅಸಂಖ್ಯ ಭಾರತೀಯರಿಗೆ ತೀವ್ರ ಮನಸ್ತಾಪ ಉಂಟುಮಾಡಿತು. ಮುಖ್ಯವಾಗಿ 1990ರ ದಶಕದಲ್ಲಿ ಜಾಗತೀಕರಣ ವಿಧಾನಗಳ ಅನುಸರಣೆ ಇತ್ಯಾದಿಗಳಿಂದ ಈ ಮನಸ್ತಾಪ ಇನ್ನೂ ಹೆಚ್ಚಾಯಿತು.

ಅಮೆರಿಕನ್ ದೃಷ್ಟಿ ಧೋರಣೆಗಳು ಬೆಳೆಯುತ್ತಾ ಹೋಗುವುದು, ಹಳ್ಳಿಯಿಂದ ಪಟ್ಟಣಗಳಿಗೆ ವಲಸೆಗಳು ಮುಮ್ಮಡಿಯಾಗುವುದು ಮೊದಲಾದ ಪರಿಣಾಮಗಳು ಮಾನಸಿಕ ಗಾಯಗಳನ್ನು ನಂಜಾಗಿಸಿದವು. ವ್ಯಕ್ತಿಗತ ಸಂಪತ್ತು, ಅದರ ಬಳಕೆ ಕುರಿತು ಟಿವಿ, ಇಂಟರ್‌ನೆಟ್‌ಗಳು ಪ್ರಜೆಗಳನ್ನು ಅನೂಹ್ಯ ರೀತಿಯಲ್ಲಿ ಪ್ರಭಾವಿತಗೊಳಿಸಿದವು.

ಸ್ವಂತ ಹಿತಾಸಕ್ತಿಗಳಿಗೆ ಆದ್ಯತೆ ನೀಡಿದ ಸ್ವತಂತ್ರ ಭಾರತದ ಪ್ರಭುಗಳಿಗೆ ವಿರುದ್ಧವಾಗಿ ಅತ್ಯಧಿಕ ಭಾರತೀಯರಲ್ಲಿ ಗುಪ್ತವಾಗಿ ನೆಲೆಗೊಂಡಿದ್ದ ಆಕ್ರೋಶವನ್ನು, ಸಾಮಾಜಿಕ ಊರ್ಧ್ವ ಗಮನಕ್ಕೆ ತೀವ್ರ ಅಡೆತಡೆಗಳಾಗಿದ್ದ ಶಕ್ತಿಗಳ ಮೇಲೆ ನೆಲೆಗೊಂಡಿದ್ದ ತೀವ್ರ ಅಸಂತೃಪ್ತಿಯನ್ನು ತಮ್ಮ ರಾಜಕೀಯ ಲಕ್ಷಗಳಿಗೆ ಉಪಯೋಗಿಸಿಕೊಳ್ಳುವುದಕ್ಕೆ ರಾಷ್ಟ್ರ ರಾಜಕೀಯದಲ್ಲಿ ನರೇಂದ್ರ ಮೋದಿ ಬರುವವರೆಗೆ ಯಾವ ಮುಖಂಡನೂ ಪ್ರಯತ್ನಿಸಿರಲೇ ಇಲ್ಲ.

2002ರ ಗುಜರಾತ್ ನರಮೇಧಕ್ಕೆ ಮೋದಿಯೇ ಕಾರಣನೆಂದು ಆಂಗ್ಲ ಸುಶಿಕ್ಷಿತರು, ಪಾಶ್ಚಾತ್ಯ ಸರಕಾರಗಳು ತೀವ್ರವಾಗಿ ಆರೋಪಿಸಿದವು. ಅಮಾಯಕರ ಕಗ್ಗೊಲೆಗಳು ನಡೆಯುತ್ತಿದ್ದರೂ ಮೋದಿ ಉದಾಸೀನದಿಂದ ವ್ಯವಹರಿಸಿದರು ಎಂದೂ, ಅಸಲು ಅವರೇ ಆ ಹತ್ಯಾಕಾಂಡಕ್ಕೆ ನಿರ್ದೇಶನ ಮಾಡಿದರೆಂದು ಕೂಡಾ ವಿಮರ್ಶಿಸಲಾಯಿತು. ಭಾರತದ ಕೆಲವು ಕುಬೇರರ ಸಹಕಾರದಿಂದ ಮೋದಿ ಆ ಕಳಂಕದಿಂದ ಹೊರಬಿದ್ದು 2014ರ ಸಾರ್ವತ್ರಿಕ ಚುನಾವಣೆ ಕಾಲಕ್ಕೆ ರಾಷ್ಟ್ರ ರಾಜಕಾರಣಕ್ಕೆ ಪ್ರವೇಶಿಸಿದರು. ತನ್ನ ಸಭೆಗಳಲ್ಲಿ ಬಹುಸಂಖ್ಯಾತರಾಗಿರುವ ಶೋಷಿತ ವರ್ಗದವರಲ್ಲಿ ತಾನೂ ಒಬ್ಬನೆಂದು ಮೋದಿ ಮೊದಲಿನಿಂದಲೂ ಹೇಳುತ್ತಾ ಬಂದರು. ಸ್ವಶಕ್ತಿಯಿಂದ ಮುಖ್ಯಮಂತ್ರಿ ಸ್ಥಾನಕ್ಕೆ ಏರಿದ್ದೇನೆಂದೂ, ಈ ದಾರಿಯಲ್ಲಿ ಮುಸ್ಲಿಮರನ್ನು ಓಲೈಸುತ್ತಾ, ಉತ್ತಮ ಹಿಂದೂಗಳನ್ನು ಎಲ್ಲಾ ವಿಧಗಳಲ್ಲೂ ಹತ್ತಿಕ್ಕ ಹೊರಟವರನ್ನು ಮೀರಿಸುವುದಕ್ಕೆ ತಾನು ಎಷ್ಟು ಕಷ್ಟಪಟ್ಟೆ ಎಂದು ಮೋದಿ ವಿವರಿಸುತ್ತಿದ್ದರು. ಭಾರತವನ್ನು ಒಂದು ದೊಡ್ಡ ಅಂತರ್‌ರಾಷ್ಟ್ರೀಯ ಶಕ್ತಿಯಾಗಿ ತಿದ್ದಿ, ಹಿಂದೂಗಳನ್ನು ಮತ್ತೆ ಚರಿತ್ರೆಯ ವೈಭವದೊಂದಿಗೆ ಅಗ್ರಗಾಮಿಗಳಾಗಿ ನಿಲ್ಲಿಸುವೆ ಎಂದು ವಾಗ್ದಾನ ಮಾಡುತ್ತಿದ್ದರು.

ಮೋದಿಯ ಐದು ವರ್ಷಗಳ ಪಾಲನೆಯಲ್ಲಿ ಭಾರತೀಯ ಅಂತರ್ಜಾಲ ಬಳಕೆದಾರರ ಸಂಖ್ಯೆ ಇಮ್ಮಡಿಯಾಯಿತು. ಬಡವರ ಕೈಲಿ ಕೂಡಾ ಸ್ಮಾರ್ಟ್‌ಫೋನ್ ಕಾಣಿಸುವುದು ಸಾಮಾನ್ಯವಾಗಿ ಹೋಯಿತು. ಫೇಸ್‌ಬುಕ್, ಟ್ವಿಟರ್, ಯೂಟ್ಯೂಬ್, ವಾಟ್ಸ್‌ಆ್ಯಪ್ ಮೊದಲಾದ ಆಧುನಿಕ ಕಮ್ಯುನಿಕೇಶನ್ ಸೌಕರ್ಯಗಳೊಂದಿಗೆ ಫೇಕ್ ನ್ಯೂಸ್ ವಿಸ್ತೃತ ಸ್ಥಾಯಿಯಲ್ಲಿ ಅತ್ಯಧಿಕರಿಗೆ ತಲುಪುವುದೂ ಸಾಮಾನ್ಯವಾಗಿ ಹೋಯಿತು. ಈ ಪರಿಣಾಮ ವಿಶೇಷವಾಗಿ ಲಾಭ ತಂದಿತು. ಬಾಲಕೋಟ್‌ನಲ್ಲಿನ ಉಗ್ರವಾದಿ ಶಿಬಿರಗಳ ಮೇಲೆ ಭಾರತೀಯ ವಾಯುಪಡೆ ದಾಳಿಗಳಲ್ಲಿ ನೂರಾರು ಪಾಕಿಸ್ತಾನಿಯರು ಹತರಾದರೆಂಬ ನಕಲಿ ವಾರ್ತೆಯೊಂದು ಅಸಂಖ್ಯ ಭಾರತೀಯ ಮತದಾರರನ್ನು ಪ್ರಭಾವಿತಗೊಳಿಸಿ ಇತ್ತೀಚಿನ ಚುನಾವಣೆಯಲ್ಲಿ ಮೋದಿ ಗೆಲುವಿಗೆ ಎಷ್ಟೋ ನೆರವಾಯಿತು.

ಭಾರತದಲ್ಲಿಯೂ, ಪಾಶ್ಚಾತ್ಯ ದೇಶಗಳಲ್ಲೂ ಎಷ್ಟೋ ಮಂದಿ ನವ ಉದಾರವಾದಿ ವ್ಯಾಖ್ಯಾನರು ಆಶಿಸುತ್ತಿರುವಂತೆ ತಳಸ್ತರದ ಭಾರತೀಯರಲ್ಲಿ ತಾನು ಉತ್ಪನ್ನಗೊಳಿಸಿದ ಬ್ರಹ್ಮಾಂಡ ಭಾವೋದ್ವೇಗಗಳನ್ನು ಅದ್ಭುತ ಆರ್ಥಿಕ ಪ್ರಗತಿಗೆ ಪೂರಕವಾಗುವಂತೆ ಮೋದಿ ಬದಲಿಸಲಿಲ್ಲ. ಆಕ್ರೋಶಭರಿತವಾದ ಮನುಷ್ಯರ ಕುರಿತು ಜರ್ಮನ್ ತತ್ವಜ್ಞಾನಿ ನೀಷೆ ಅಂದಂತೆ ಗೂಡು ಕಟ್ಟಿಕೊಂಡು ಹೋದ ಅಧೋಸ್ಥಾಯಿ ಪ್ರತೀಕಾರ ವಾಂಛೆ ಕೊನೆ ಮೊದಲಿಲ್ಲದಂತೆ ಸ್ಫೋಟಗೊಳ್ಳುವುದಕ್ಕೆ ಮಾತ್ರವೇ ನೆರವಾಗುತ್ತಿದ್ದಾರೆ ಮೋದಿ. ಜಡ್ಡುಗಟ್ಟಿದ ಮಿತವಾದಿಗಳ ಗುರಿಯೇ ಮೋದಿಯ ಗುರಿ.

ಅಲ್ಪಸಂಖ್ಯಾತರು, ನಿರಾಶ್ರಿತರು, ವಾಮಪಂಥೀಯರು, ಉದಾರವಾದಿ ಪ್ರಗತಿಪರರನ್ನು ಬಲಿಪಶುಗಳನ್ನಾಗಿ ಮಾಡುತ್ತಾ, ಆಕ್ರೋಶಿತ ಪ್ರಜೆಗಳನ್ನು ಪ್ರಚೋದಿಸುವುದು, ಅದೇ ಸಮಯದಲ್ಲಿ ಕಿತ್ತು ತಿನ್ನುವ ಆಧುನಿಕ ಬಂಡವಾಳಶಾಹಿ ವಿಧಾನದ ಶೀಘ್ರ ಪುರೋಗತಿಗೆ ನೆರವಾಗುವುದು, ನಿರುದ್ಯೋಗಿಗಳಾದ ಅಸಂಖ್ಯ ಯುವ ಭಾರತೀಯರಿಗೆ ಅಗತ್ಯವಾದ ಹೊಸ ಉದ್ಯೋಗಗಳನ್ನು ಸೃಷ್ಟಿಸುವುದರಲ್ಲಿ ಮೋದಿ ವಿಫಲವಾದಾಗ್ಯೂ ಆಂಗ್ಲ ಭಾಷಾ ಮೇಧಾವಿಗಳೊಂದಿಗೆ ಕಠೋರವಾಗಿ ಮಾತನಾಡುವುದಕ್ಕೆ, ಸಮಾಜದಲ್ಲಿ ಈಗಾಗಲೇ ಉನ್ನತ ಸ್ಥಿತಿಯಲ್ಲಿರುವವರನ್ನೂ ತೀವ್ರವಾಗಿ ವಿರೋಧಿಸುವುದಕ್ಕೆ ಹುರಿದುಂಬಿಸಿದರು. ಆಂಗ್ಲಭಾಷಾ ಮೇಧಾವಿಗಳತ್ತ ಮೋದಿಯಲ್ಲಿರುವ ತೀವ್ರ ವಿರೋಧ ಕೂಡಾ ಅವರನ್ನು ಈ ಧೋರಣೆಗೆ ಹುರಿದುಂಬಿಸಿತು ಎಂದು ಮತ್ತೆ ಹೇಳುವ ಅಗತ್ಯವಿಲ್ಲ.

ತಳಸ್ತರದ ದಮನಿತ ಭಾರತೀಯರನ್ನು ನಾನಾ ಅನ್ಯಾಯಗಳಿಂದ ವಿಮುಕ್ತಗೊಳಿಸುವ ಬದಲು ಅವರಲ್ಲಿ ಹತಾಶ ಭಾವೋದ್ವೇಗಗಳಿಗೆ ಮೋದಿ ಬಿಡುಗಡೆ ಕಲ್ಪಿಸಿದರು. ವಂಚಕ(?)ಪಾಕಿಸ್ತಾನಿಯರು, ಭಾರತೀಯ ಮುಸ್ಲಿಮರು ಈ ‘ದೇಶ ವಿರೋಧಿ’ಗಳನ್ನು ಓಲೈಸುವ ಭಾರತೀಯರನ್ನು ದ್ವೇಷಿಸುವುದಕ್ಕೆ ತನ್ನ ಬೆಂಬಲಿಗರನ್ನು ಮೋದಿ ಛೂ ಬಿಟ್ಟರು.

ಪ್ರತೀಕಾರದ ಉದ್ವೇಗಗಳು, ವೈಭವೋಪೇತ ಅಧಿಕಾರ, ಅಧಿಕ ಬಡಾಯಿಗಳಿಂದ ಮತದಾರರನ್ನು ಮೈಮರೆಸುವ ಮೂಲಕ ತನ್ನ ‘ಸಹಜ ವಿವೇಕ’ದ ವಿನಾಶಾತ್ಮಕ ಪರ್ಯವಸಾನಗಳು ಇವು. ಇನ್ಯಾವ ರಾಜಕೀಯ ಮುಖಂಡರಾಗಿದ್ದರೂ ಪತನಗೊಳ್ಳುತ್ತಿದ್ದರು ಎಂಬುದರಲ್ಲಿ ಸಂಶಯವಿಲ್ಲ. ಅಂಥ ವಿಷಾಸ್ತ್ರಗಳಿವು. ಅವುಗಳು ಪ್ರಜೆಗಳ ಪರಿಶೀಲನೆಯೊಳಗೆ ಬಾರದಂತೆ ಮೋದಿ ತುಂಬಾ ಕೌಶಲದಿಂದ ತಪ್ಪಿಸಿಕೊಳ್ಳಬಲ್ಲವರಾದರು. ಇಂದು ಹಲವು ಪ್ರಜಾಪ್ರಭುತ್ವ ವ್ಯವಸ್ಥೆಗಳನ್ನು ದುರ್ಬಲಗೊಳಿಸುತ್ತಿರುವ ದ್ವೇಷ ರಾಜಕಾರಣಕ್ಕೆ 2014ರಲ್ಲಿ ಈ ಹಿಂದುತ್ವ ಮುಖಂಡ ದಿಶಾನಿರ್ದೇಶನ ಮಾಡಿದರು. 2019ರಲ್ಲಿ ಸತ್ಯಯುಗಾನಂತರ ಯುಗದ ಸಂಚಲನಾತ್ಮಕ ಚುನಾವಣಾ ವಿಜಯಗಳಲ್ಲಿ ಒಂದಕ್ಕೆ ಮೋದಿ ಸಾರಥಿಯಾದರು. ಆದರೆ ಮೋದಿ ಜಯಕಾರ ಭಾರತ ಪ್ರಜಾಪ್ರಭುತ್ವದ ಭವಿಷ್ಯದ ಕುರಿತು ಭಯ ಪಡುವುದನ್ನು ತಪ್ಪದಿರುವ ಸ್ಥಿತಿಯನ್ನು ಕಲ್ಪಿಸಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top