ಜೇಮ್ಸ್ ಪ್ರಿನ್ಸೆಪ್ ಭಾರತಕ್ಕೆ ಬರದೇ ಹೋಗಿದ್ದರೆ? | Vartha Bharati- ವಾರ್ತಾ ಭಾರತಿ

---

ಜೇಮ್ಸ್ ಪ್ರಿನ್ಸೆಪ್ ಭಾರತಕ್ಕೆ ಬರದೇ ಹೋಗಿದ್ದರೆ?

ಮಾನ್ಯರೇ,

ವಿದೇಶಕ್ಕೆ ಹೋಗುವ ಭಾರತೀಯರು ತಮ್ಮ ದೇಶ ಜಗತ್ತಿಗೆ ಬುದ್ಧ ಮತ್ತು ಗಾಂಧಿಯನ್ನು ಕೊಟ್ಟಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವುದು ವಾಡಿಕೆ. ಮೊನ್ನೆ ಪ್ರಧಾನಿ ಮೋದಿಯವರೂ ವಿಶ್ವ ಸಂಸ್ಥೆಯಲ್ಲಿ ಅದನ್ನೇ ಹೇಳಿದ್ದು. ಶ್ರೀರಾಮ ಶ್ರೀಕೃಷ್ಣರ ಹೆಸರು ವಿದೇಶದಲ್ಲಿ ಬುದ್ಧನಷ್ಟು ಗೌರವ ಹುಟ್ಟಿಸುವುದಿಲ್ಲ. ಇದಕ್ಕಿಂತ ಮುಖ್ಯ ವಿಷಯವೇನೆಂದರೆ ಗೌತಮ ಬುದ್ಧ ಭಾರತ (ನೇಪಾಳ- ಲುಂಬಿನಿ) ಮೂಲದವನು ಹಾಗೂ ಅವನೇ ಬೌದ್ಧ ಧರ್ಮ ಸ್ಥಾಪಿಸಿದ್ದು ಮತ್ತು ಅದನ್ನು ಮೌರ್ಯ ವಂಶದ ಸಾಮ್ರಾಟ ಅಶೋಕ ಪೂರ್ವ ಏಶ್ಯದ ವಿವಿಧ ದೇಶಗಳಲ್ಲಿ ಪ್ರಚಾರ ಮಾಡಿಸಿದ್ದು ಎಂಬುದನ್ನೂ ಜಗತ್ತಿಗೆ ಮೊತ್ತಮೊದಲಿಗೆ ಹೇಳಿದವರು ಬ್ರಿಟಿಷರು!
 
ಸುಮಾರು ಇನ್ನೂರು ವರ್ಷಗಳ ಹಿಂದೆ ಜೇಮ್ಸ್ ಪ್ರಿನ್ಸೆಪ್ ಎಂಬ ಬ್ರಿಟಿಷ್ ಪುರಾತತ್ವ ತಜ್ಞ ಭಾರತದ ಹಳೆಯ ಬ್ರಾಹ್ಮಿ ಲಿಪಿ ಮತ್ತು ಖರೋಷ್ಠಿ ಲಿಪಿಗಳ ರಹಸ್ಯ ಭೇದಿಸಿ ಪಾಲಿ ಭಾಷೆ ಮತ್ತು ಪ್ರಾಕೃತ ಭಾಷೆಗಳಲ್ಲಿ ಇದ್ದ ಬುದ್ಧ ಅಶೋಕರ ಕಾಲದ ಶಾಸನಗಳನ್ನು ಓದಿ ಬುದ್ಧನು ಭಾರತ ಮೂಲದವನು ಎಂದು ಜಗತ್ತಿಗೆ ಹೇಳಿದ ಮೊದಲಿಗ. ಒಂದು ವೇಳೆ ಜೇಮ್ಸ್ ಪ್ರಿನ್ಸೆಪ್ ಭಾರತಕ್ಕೆ ಬರದೇ ಹೋಗಿದ್ದರೆ ಇಂದಿಗೂ ನಮಗೆ ಗೌತಮ ಬುದ್ಧ, ಮಹಾವೀರ ಜಿನ, ಚಂದ್ರಗುಪ್ತ ಮೌರ್ಯ, ಸಾಮ್ರಾಟ ಅಶೋಕ ಇವರೆಲ್ಲಾ ಯಾರೆಂದು ಗೊತ್ತೇ ಆಗುತ್ತಿರಲಿಲ್ಲ. ಸಾಮ್ರಾಟ ಅಶೋಕನ ಕಾಲದ ಬ್ರಾಹ್ಮಿ ಲಿಪಿಯಲ್ಲಿದ್ದ ಪಾಲಿ ಭಾಷೆಯ ಶಾಸನಗಳನ್ನು 200 ವರ್ಷಗಳ ಹಿಂದೆ ಮೊದಲಿಗೆ ಸರಿಯಾಗಿ ಓದಿ ಅರ್ಥೈಸಿದ್ದು ಇದೇ ಜೇಮ್ಸ್ ಪ್ರಿನ್ಸೆಪ್. ಇದಕ್ಕೆ ಮೊದಲು ಚೀನಾ, ಜಪಾನ್, ಬರ್ಮಾ, ಥಾಯ್ಲೆಂಡ್, ಕೊರಿಯ, ಶ್ರೀಲಂಕಾ, ವಿಯೆಟ್ನಾಮ್ ಈ ದೇಶದವರೆಲ್ಲ ಗೌತಮ ಬುದ್ಧ ತಮ್ಮ ತಮ್ಮ ದೇಶದಲ್ಲಿಯೇ ಹುಟ್ಟಿದ್ದು ಎಂದು ತಿಳಿದಿದ್ದರು. ಅದಕ್ಕಾಗಿಯೇ ಚೀನಾ ದೇಶದಲ್ಲಿ ಗೌತಮ ಬುದ್ಧನ ಮೂರ್ತಿಯ ಕಣ್ಣು ಮತ್ತು ಮುಖಚರ್ಯೆ ಚೀನಿಯರಂತೆ ಇದೆ, ಜಪಾನ್‌ನಲ್ಲಿ ಬುದ್ಧನ ಕಣ್ಣು ಮುಖ ಜಪಾನಿಯರಂತೆ ಇದೆ.

2,300 ವರ್ಷಗಳ ಹಿಂದೆ ಅಲೆಕ್ಸಾಂಡರ್ ದಾಳಿಯ ನಂತರ ಭಾರತಕ್ಕೆ ಬಂದಿದ್ದ ಗ್ರೀಕ್ ಇತಿಹಾಸಕಾರರು ಭಾರತದ ಪ್ರಾಚೀನ ಅರಸರ ಬಗ್ಗೆ ಬರೆದಿದ್ದನ್ನು ಹುಡುಕಿ ತೆಗೆದು ಅದನ್ನು ಭಾರತೀಯರಿಗೆ ತಿಳಿಸಿದವರೂ ಬ್ರಿಟಿಷ್ ಸಂಶೋಧಕರೇ ಆಗಿದ್ದರು. ಪುರಾತನ ಭಾರತದ ಕುರಿತು ಸ್ವತಃ ಭಾರತಿಯರಿಗೇ ಗೊತ್ತಿಲ್ಲದ ಅನೇಕ ವಿಷಯಗಳು ಗ್ರೀಕ್ ಇತಿಹಾಸದಲ್ಲಿ ಇದ್ದವು ಎಂದು ನಮಗೆ ಗೊತ್ತಾಗಿದ್ದು ಜೇಮ್ಸ್ ಪ್ರಿನ್ಸೆಪ್‌ನಂತಹ ಬ್ರಿಟಿಷರಿಂದಾಗಿ. ಮೌರ್ಯ ವಂಶದ ಹತ್ತನೇ ಅರಸ ಬೃಹದೃಥ ಮೌರ್ಯನ ಬ್ರಾಹ್ಮಣ ಮಂತ್ರಿ ಪುಷ್ಯಮಿತ್ರ ಶುಂಗನಿಂದಾಗಿ ವೌರ್ಯ ವಂಶ ಅಳಿಯಿತು. ಆನಂತರ ಶುಂಗ ವಂಶದ ಅರಸರು ಬೌದ್ಧ ಧರ್ಮದ ಎಲ್ಲಾ ಕುರುಹುಗಳನ್ನು ಅಳಿಸಿ ಹಾಕಿ ಬೌದ್ಧರ ಜಾತಕ ಕಥೆಗಳನ್ನು ವೈದಿಕ ಪುರಾಣಗಳಾಗಿ ತಿರುಚಿ ಬೌದ್ಧ ವಿಹಾರಗಳನ್ನು ವೈದಿಕ ಮಂದಿರಗಳಾಗಿ ಪರಿವರ್ತಿಸಿ, ಬೌದ್ಧ ಧರ್ಮದ ಯಾವುದೇ ಕುರುಹು ಉಳಿಯದಂತೆ ಅಳಿಸಿ ಹಾಕಲು ಪ್ರಯತ್ನಿಸಿದರು. ಬ್ರಿಟಿಷರು ಭಾರತಕ್ಕೆ ಬಾರದಿರುತ್ತಿದ್ದರೆ, ಭಾರತದಲ್ಲಿ ಹಿಂದೊಮ್ಮೆ ಶೇ.90 ಜನರು ಬೌದ್ಧರಾಗಿದ್ದರು ಎಂಬ ಸತ್ಯ ಜಗತ್ತಿಗೆ ಗೊತ್ತೇ ಆಗುತ್ತಿರಲಿಲ್ಲ ಹಾಗೂ ಸಾಮ್ರಾಟ ಅಶೋಕ ಮತ್ತು ಗೌತಮ ಬುದ್ಧರ ಬಗ್ಗೆ ಸ್ವತಃ ಭಾರತಿಯರಿಗೇ ನೈಜ ಜ್ಞಾನ ಇರುತ್ತಿರಲಿಲ್ಲ. ಮೇಲಾಗಿ ಈಗ ಅಮೆರಿಕದಲ್ಲಿ ಪ್ರಧಾನಿ ಮೋದಿಯೂ ಜಗತ್ತಿಗೆ ನಾವು ಬುದ್ಧನನ್ನು ಕೊಟ್ಟಿದ್ದೇವೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವಂತೆಯೂ ಇರಲಿಲ್ಲ!

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top