ಥಾಮಸ್ ಕುಕ್‌ಗೆ ವಿದಾಯ | Vartha Bharati- ವಾರ್ತಾ ಭಾರತಿ
ಹಳೆಯ ವ್ಯಾವಹಾರಿಕ ಪದ್ಧತಿಗಳು ಮತ್ತು ಕಂಗೆಟ್ಟಿರುವ ಸರಕಾರಗಳು ಥಾಮಸ್ ಕುಕ್ ಅನ್ನು ನಾಶಮಾಡಿವೆ.

ಥಾಮಸ್ ಕುಕ್‌ಗೆ ವಿದಾಯ

ಬಹಳಷ್ಟು ಸಾರಿ ನಾವು ಏನನ್ನು ಕಾಣುತ್ತೇವೆ ಎಂಬುದು ನಮ್ಮ ದೃಷ್ಟಿಕೋನವೇನು ಎಂಬುದನ್ನೇ ಅವಲಂಬಿಸಿರುತ್ತದೆ. ಉದಾಹರಣೆಗೆ ಬ್ರಿಟನ್‌ನಲ್ಲಿ 1841ರಲ್ಲಿ ಥಾಮಸ್ ಕುಕ್ ಸ್ಥಾಪಿಸಿದ್ದ ಜಗತ್ತಿನ ಅತ್ಯಂತ ಹಳೆಯ ಪ್ರವಾಸೋದ್ಯಮ ಕಂಪೆನಿಯು ಮುಚ್ಚಿಕೊಂಡಿದೆ. ಇದು ಆಧುನಿಕ ಬ್ರಿಟಿಷ್ ಬಂಡವಾಳಶಾಹಿಯ ನಾಚಿಕೆಗೆಟ್ಟ ಅತಿರೇಕಗಳ ಮತ್ತೊಂದು ಪರಿಣಾಮ ಎಂದು ಕೆಲವರು ವಾದಿಸಬಹುದು. ಇತ್ತೀಚೆಗೆ ಮುಚ್ಚಿಕೊಂಡ ಬ್ರಿಟಿಷ್ ಹೋಮ್ಸ್ ಸ್ಟೋರ್ಸ್, ಸ್ಕಾಟ್ಲೆಂಡಿನ ರಾಯಲ್ ಬ್ಯಾಂಕ್ ಅಥವಾ ರೋವರ್‌ಗಳು ಬಾಗಿಲು ಹಾಕಿಕೊಳ್ಳುವ ಮೊದಲು ದುಬಾರಿ ವೇತನ ಪಡೆಯುತ್ತಿದ್ದ ಆ ಸಂಸ್ಥೆಗಳ ಮ್ಯಾನೇಜರ್‌ಗಳು ಮತ್ತು ಮಾಲಕರು ಆ ಸಂಸ್ಥೆಗಳ ಸ್ವತ್ತುಗಳನ್ನು ಮಾರಿಕೊಂಡಿದ್ದರು. ಅಷ್ಟು ಮಾತ್ರವಲ್ಲ ಉದ್ಯೋಗಿಗಳ ಪಿಂಚಣಿ ನಿಧಿಯನ್ನು ಬರಿದುಗೊಳಿಸಿದ್ದರು. ಹಾಗಿದ್ದಲ್ಲಿ ಈ ಥಾವಸ್ ಕುಕ್ ಪ್ರಕರಣವೂ ಸಹ ವೇಗದಿಂದ ಕುಸಿಯುತ್ತಿರುವ ಬಂಡವಾಳಶಾಹಿಯ ಇತ್ತೀಚಿನ ಬಲಿಪಶುವೇ? ವರ್ಷಾನುವರ್ಷ ತಮ್ಮ ಕಂಪೆನಿಯು ನಷ್ಟವನ್ನು ಅನುಭವಿಸುತ್ತಿರುವುದನ್ನು ವಾರ್ಷಿಕ ಲೆಕ್ಕಪತ್ರಗಳು ತೋರಿಸುತ್ತಿದ್ದರೂ ಸಹ ತನ್ನ ಶೇರುದಾರರಿಗೆ ಥಾಮಸ್ ಕುಕ್ ಕಂಪೆನಿಯು ಲಾಭಾಂಶವನ್ನು ವಿತರಿಸುವುದನ್ನು ಮುಂದುವರಿಸಿತ್ತು. ಮಾತ್ರವಲ್ಲದೆ ತನ್ನ ಪ್ರಧಾನ ಕಾರ್ಯಭಾರಿ-ಸಿಇಒ- ಪೀಟರ್ ಫ್ರಾಂಕ್‌ಹೌಸರ್‌ಗೆ ಕಳೆದ ನಾಲ್ಕು ವರ್ಷಗಳಿಂದ 8.4 ದಶಲಕ್ಷ ಪೌಂಡುಗಳ (ಅಂದಾಜು 75 ಕೋಟಿ ರೂ.) ವಾರ್ಷಿಕ ವೇತನವನ್ನು ಮಂಜೂರು ಮಾಡಿತ್ತು. ಪೆನ್ಷನ್ ನಿಧಿಗೆ ಕೈಹಾಕಲಾರದಂತೆ ಸುರಕ್ಷತಾ ಕಾನೂನುಗಳಿತ್ತೇ ಅಥವಾ ಈ ಕಂಪೆನಿಯು ಅತ್ಯಂತ ಕ್ಲಿಷ್ಟಕರ ಸಂದರ್ಭದಲ್ಲಿ ಮಾತ್ರ ಬಳಸಬಹುದಿದ್ದ ಎಲ್ಲಾ ಸಂಪನ್ಮೂಲಗಳಿಗೂ ಕೈಹಾಕಿದ್ದರಿಂದ ಆಡಿಟರ್‌ಗಳು ಸಹ ಅದಕ್ಕೆ ತಕ್ಕಂತೆ ನಡೆದುಕೊಂಡರೋ ಎಂಬ ವಿಷಯಗಳನ್ನು ಹೇಗಿದ್ದರೂ ತನಿಖೆ ಮಾಡಲಾಗುತ್ತದೆ. ಇದರಿಂದಾಗಿ ಸಾಕಷ್ಟು ಉದ್ಯೋಗಿಗಳು ಬೀದಿಗೆ ಬೀಳುತ್ತಾರೆ. ಮತ್ತೊಂದು ಕಡೆೆ ಇತರ ಹಣಕಾಸು ಸಂಸ್ಥೆಗಳು ಈ ಕಂಪೆನಿಯ ವೈಫಲ್ಯವನ್ನು ನಿರ್ದಾಕ್ಷಿಣ್ಯದಿಂದ ತಮ್ಮ ಬಾಜಿ ವ್ಯವಹಾರಗಳಿಗೆ ಬಳಸಿಕೊಳ್ಳುತ್ತವೆ. ಈ ಕಂಪೆನಿಯು ಮಾಡಿದ ಅತಿರೇಕಗಳು ಖಂಡಿತಾ ಅದರ ವೈಫಲ್ಯಕ್ಕೆ ಕಾರಣವಾಗಿದೆ. ಆದರೆ ಥಾಮಸ್ ಕುಕ್ ಕಂಪೆನಿಯ ಕಥೆಯನ್ನು ಸಂಪೂರ್ಣವಾಗಿ ದುರಾಶಪೂರಿತ ಉದ್ಯಮಿಯ ಕಥೆಯೆಂದೂ ಸಹ ಬಣ್ಣಿಸಲು ಆಗುವುದಿಲ್ಲ. ಆಡಳಿತ ವರ್ಗವು ಕಂಪೆನಿಯನ್ನು ಉಳಿಸಿಕೊಳ್ಳುವ ಅಂತಿಮ ಪ್ರಯತ್ನದ ಭಾಗವಾಗಿ ಮಾಡಿದ ಕೋರಿಕೆಗಳನ್ನು ಪೆನ್ಷನ್ ಫಂಡಿನ ಟ್ರಸ್ಟಿಗಳು ತಿರಸ್ಕರಿಸಿದ್ದರು. ಕೆಲವರ ಪ್ರಕಾರ ಈ ಕಂಪೆನಿಯು ಮುಳುಗಿಹೋಗಿರುವುದು ಬ್ರಿಟನ್ ಮತ್ತು ಯೂರೋಪುಗಳ ನಡುವೆ ಇರುವ ಬಿರುಕನ್ನು ಎತ್ತಿತೋರಿಸುತ್ತಿದೆ. ತನ್ನ ಕಂಪೆನಿಯ 9,000 ಉದ್ಯೋಗಿಗಳ ಉದ್ಯೋಗಗಳನ್ನು ಉಳಿಸಲು ಮತ್ತು ತಾತ್ಕಾಲಿಕವಾದ ಅಪಾಯದಿಂದ ಪಾರಾಗಾಗುವ ಯೋಜನೆಯ ಭಾಗವಾಗಿ 150ಮಿಲಿಯನ್ ಪೌಂಡುಗಳ ಸಾಲವನ್ನು ನೀಡಬೇಕೆಂದು ಕುಕ್ ಕಂಪೆನಿ ಮುಂದಿಟ್ಟಿದ್ದ ಬೇಡಿಕೆಯನ್ನು ಒತ್ತಡದಲ್ಲಿದ್ದ ಬೋರಿಸ್ ಜಾನ್ಸನ್ ಸರಕಾರ ತಿರಸ್ಕರಿಸಿತು. ಅದರ ಬದಲಿಗೆ ಬೇರೆ ಬೇರೆ ಜಾಗಗಳಲ್ಲಿ ಪ್ರವಾಸದಲ್ಲಿದ್ದ ತನ್ನ 1,50,000 ಪ್ರವಾಸಿಗರನ್ನು ಮರಳಿ ಮನೆಗೆ ಕರೆತಲು ಅತ್ಯಂತ ದೊಡ್ಡ ಕಾರ್ಯಾಚರಣೆ ನಡೆಸಿತು. ಈ ನಡುವೆ ಥಾಮಸ್ ಕುಕ್ ಸಂಸ್ಥೆಯ ಜರ್ಮನ್ ಶಾಖೆಯಾದ ಕೊಂಡೋರ್ ಅನ್ನು ತಾತ್ಕಾಲಿಕವಾಗಿ ಬಚಾವು ಮಾಡಿ ಮಾತೃಸಂಸ್ಥೆಯ ಹೊಣೆಗಾರಿಕೆಯಿಂದ ಪಾರು ಮಾಡಲು ಜರ್ಮನಿಯ ರಾಜ್ಯ ಹಾಗೂ ಕೇಂದ್ರ ಸರಕಾರಗಳು 380 ದಶಲಕ್ಷ ಯೂರೋಗಳನ್ನು ಒದಗಿಸಲು ಮುಂದಾದವು. ಇದರಿಂದಾಗಿ ಜರ್ಮನಿಯ 1,40,000 ಪ್ರವಾಸಿಗರು ತಾವಿದ್ದ ಸ್ಥಳಗಳಲ್ಲೇ ರಜೆಯನ್ನು ಆನಂದಿಸಿ ಪ್ರವಾಸದ ಕೊನೆಯಲ್ಲಿ ಅದೇ ವಿಮಾನಗಳಲ್ಲಿ ವಾಪಸ್ ಮರಳಲು ಸಾಧ್ಯವಾಯಿತು. ಇನ್ನೂ ಕೆಲವರು ಥಾವಸ್ ಕುಕ್ ಪ್ರಕರಣವನ್ನು ಬ್ರೆಕ್ಸಿಟ್‌ನ ಮೊದಲ ಬಲಿಯೆಂದು ವ್ಯಾಖ್ಯಾನಿಸುತ್ತಾರೆ. ಒಂದು ವರ್ಷದ ಕೆಳಗೆ ಈ ಕಂಪೆನಿ ವಾರ್ಷಿಕವಾಗಿ 9 ಬಿಲಿಯನ್ ಪೌಂಡು (ಅಂದಾಜು 810 ಕೋಟಿ ರೂ.) ವಹಿವಾಟು ನಡೆಸುತ್ತಿತ್ತು. 190 ಲಕ್ಷ ಗ್ರಾಹಕರನ್ನು ಹೊಂದಿತ್ತು ಮತ್ತು ಜಗತ್ತಿನಾದ್ಯಂತ 22,000 ಸಿಬ್ಬಂದಿಯನ್ನು ಹೊಂದಿತ್ತು. ಆದರೆ ತನ್ನ ಬ್ಯಾಲೆನ್ಸ್ ಶೀಟಿನಲ್ಲಿ 3 ಬಿಲಿಯನ್ ಪೌಂಡುಗಳಷ್ಟು ನಷ್ಟವನ್ನು ತೋರಿಸುತ್ತಾ ಈ ಥಾಮಸ್ ಕುಕ್ ಕಂಪೆನಿಯು ಸೆಪ್ಟಂಬರ್ 23ರಂದು ಬಾಗಿಲು ಮುಚ್ಚಿತು. ಬ್ರೆಕ್ಸಿಟ್, ದುರ್ಬಲ ಪೌಂಡು ಮತ್ತು ಬಿಸಿ ಗಾಳಿಯ 2019ರ ಬೇಸಿಗೆಯು ಬ್ರಿಟನ್ನಿಗರನ್ನು ಮನೆಯಲ್ಲೇ ಕೂರುವಂತೆ ಮಾಡಿತು. ಈ ಬಾರಿಯ ಬಿಸಿ ವಾತಾವರಣದಿಂದಾಗಿ ಈ ಬೇಸಿಗೆಯಲ್ಲಿ ಈ ವಲಯದ ಶೇ.50ರಷ್ಟು ಶೇರು ಮೌಲ್ಯವು ಅಂದರೆ 16 ಬಿಲಿಯನ್ ಪೌಂಡುಗಳಷ್ಟು ಮೌಲ್ಯವು ನಷ್ಟವಾಯಿತು. ಇದರಿಂದ ಥಾಮಸ್ ಕುಕ್ ಕಂಪೆನಿಯ ಜೊತೆಗೆ ಥಿ, ರಯಾನ್ ಏರ್ ಮತ್ತು ಇಯಸ್ವಿ ಜೆಟ್ ಸಂಸ್ಥೆಗಳ ಶೇರುಗಳೂ ಸಹ ನೆಲ ಕಚ್ಚಿದವು. ಆದರೆ ಥಾಮಸ್ ಕುಕ್ ಕಂಪೆನಿಯ ಸಮಸ್ಯೆಗಳು ಬ್ರೆಕ್ಸಿಟ್‌ಗೆ ಬಹಳ ಮುನ್ನವೇ ಪ್ರಾರಂಭವಾಗಿತ್ತು. ಅದು 2011ರಲ್ಲಿ ದೊಡ್ಡ ಮೊತ್ತದ ಸಾಲ ಪಡೆದುಕೊಂಡಿದ್ದರಿಂದ ಮತ್ತು 2013ರಲ್ಲಿ ಶೇರುದಾರರಿಂದ 425 ಮಿಲಿಯನ್ ಪೌಂಡುಗಳಷ್ಟು ಹೂಡಿಕೆಯನ್ನು ಪಡೆದುಕೊಂಡಿದ್ದ ರಿಂದ ದಿವಾಳಿಯಾಗುವುದರಿಂದ ಬಚಾವಾಗಿತ್ತು. ಎಲ್ಲದಕ್ಕೂ ಥಾಮಸ್ ಕುಕ್ ಮೊದಲ ಬಲಿಯೇನೂ ಅಲ್ಲ. ಇದು ಹೆಚ್ಚೂಕಡಿಮೆ ಇಂಟರ್‌ನೆಟ್‌ನ ಕಟ್ಟಕಡೆಯ ಬಲಿಯೆನ್ನಬಹುದು. ಇದೇ ರೀತಿ ಇಂಟರ್‌ನೆಟ್ ಆಕ್ರಮಣಕ್ಕೆ ಬಲಿಯಾದ ಮತ್ತೊಂದು ಸಂಸ್ಥೆಯಾದ ಮೊನಾರ್ಕ್ ಏರ್‌ಲೈನ್ಸ್‌ನ ಮಾಜಿ ವ್ಯವಸ್ಥಾಪಕ ನಿರ್ದೇಶಕ ಟಿಮ್ ಜೀನ್ಸ್ ಪ್ರಕಾರ ಇಂದಿನ ಡಿಜಿಟಲ್ ಯುಗದಲ್ಲಿ ಅದಿನ್ನೂ ಅನಲಾಗ್ ವ್ಯವಹಾರ ವಿಧಾನವನ್ನು ಅನುಸರಿಸುತ್ತಿತ್ತು. ಪ್ರವಾಸೋದ್ಯಮದಲ್ಲಿರುವವರು ಮತ್ತು ಪ್ರವಾಸದ ಅಗತ್ಯಗಳನ್ನು ಪೂರೈಸಿಕೊಳ್ಳಲು ಇಂಟರ್‌ನೆಟ್‌ನ ಮೊರೆ ಹೋಗುತ್ತಾರೆಯೇ ವಿನಾ ಟ್ರಾವೆಲ್ ಏಜೆಂಟ್ ಬಳಿ ಈಗ ಹೋಗುತ್ತಿಲ್ಲ. ಏರ್‌ಬಬ್, ಟ್ರಿಪ್ ಅಡ್ವೈಸರ್ ಮತ್ತಿತರ ಸಂಸ್ಥೆಗಳು ಬಿಡಿವ್ಯಕ್ತಿಗಳ ಪ್ರವಾಸ ವ್ಯವಹಾರಗಳಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದಿವೆ. ಥಾಮಸ್ ಕುಕ್ ಕಂಪೆನಿಗೆ ಜಗತ್ತಿನ ಪ್ರಧಾನ ರಸ್ತೆಗಳಲ್ಲಿ ಇದ್ದ 500ಕ್ಕೂ ಹೆಚ್ಚು ಶಾಖೆಗಳು ದೊಡ್ಡ ಮಟ್ಟದ ವ್ಯವಹಾರವನ್ನು ಹಾಗೂ ಗ್ರಾಹಕರಿಗೆ ಸುಲಭವಾದ ಸೌಲಭ್ಯಗಳನ್ನು ದೊರಕಿಸುತ್ತದೆ ಎಂದು ಪರಿಗಣಿಸಲಾಗುತ್ತಿತ್ತು. ಆದರೆ ಆನ್‌ಲೈನ್ ಟ್ರಾವೆಲ್ ಏಜೆಂಟುಗಳಿಂದ ಕಠಿಣ ಸ್ಪರ್ಧೆಯು ಎದುರಾಗುತ್ತಿದ್ದಂತೆ ಶಾಖೆಗಳ ಸಂಖ್ಯೆಯು ಆ ಕಂಪೆನಿಯ ಬಲವಾಗುವುದರ ಬದಲು ಹೊರೆಯಾಗತೊಡಗಿತು. ಅಲ್ಲದೆ ಬೇಸಿಗೆಯಲ್ಲಿ ಹೋಟೆಲ್ ರೂಮುಗಳನ್ನು ಕಾದಿರಿಸಿಕೊಳ್ಳಲು ತಿಂಗಳುಗಳ ಮೊದಲೇ ಪಾವತಿ ಮಾಡಿ ಕಾದಿರಿಸುವ ಹಳೆಯ ಪದ್ಧತಿಯನ್ನೇ ಈಗಲೂ ಥಾಮಸ್ ಕುಕ್ ಅನುಸರಿಸುತ್ತಿತ್ತು. ಆದರೆ ಸ್ಪರ್ಧೆಯಲ್ಲಿದ್ದ ಇತರ ಕಂಪೆನಿಗಳು ಇನ್ನೂ ಉತ್ತಮ ಸೌಲಭ್ಯವನ್ನು ಕೊಡುತ್ತಿದ್ದರಲ್ಲದೆ ಬದಲಾಗುತ್ತಿದ್ದ ಗ್ರಾಹಕರ ಅಗತ್ಯಗಳಿಗೆ ತಕ್ಕಂತೆ ತಮ್ಮನ್ನೂ ಬದಲಿಸಿಕೊಳ್ಳುತ್ತಿದ್ದರು. ಒಬ್ಬ ಬ್ಯಾಪ್ಟಿಸ್ಟ್ ಪಾದ್ರಿಯಾಗಿದ್ದ ಥಾಮಸ್ ಕುಕ್ ಅವರು 1841ರಲ್ಲಿ ಸುಮಾರು 500 ಜನರನ್ನು ಲೈಸೆಸ್ಟರ್‌ನಿಂದ ಲೌಬೋರೋಗೆ ಒಂದು ಪ್ರಾರ್ಥನಾ ಸಭೆಗೆ ಕೊಂಡೊಯ್ದಿದ್ದರು. ಒಂದು ಶಿಲ್ಲಿಂಗ್ ಪಾವತಿಗೆ ಆ ಪ್ರಯಾಣಿಕರಿಗೆ ಹೋಗಿಬರುವ ಟ್ರೈನ್ ಟಿಕೆಟ್, ಮಧ್ಯಾಹ್ನದ ಚಹಾ ಹಾಗೂ ಸಂಗೀತ ಕಚೇರಿ ಎಲ್ಲವೂ ದೊರೆತಿತ್ತು. ಆ ಮೂಲಕ ಥಾಮಸ್ ಕುಕ್ ಬ್ರಿಟನ್‌ನಲ್ಲಿ ಒಂದು ಪ್ರವಾಸ ಉದ್ಯಮವನ್ನೇ ಪ್ರಾರಂಭಿಸಿದರು. ಆದರೆ ಒಮ್ಮೆ ಒಂದು ಕ್ಷೇತ್ರದಲ್ಲಿ ಪ್ರವರ್ತಕರಾದ ಮೇಲೆ ಆ ಪರಂಪರೆ ಮತ್ತು ಪ್ರತಿಷ್ಠೆಯನ್ನು ಉಳಿಸಿಕೊಳ್ಳುವ ಒತ್ತಡಗಳನ್ನು ಸೃಷ್ಟಿಸುತ್ತದೆ ಮತ್ತು ಅದರಿಂದಾಗಿಯೇ ಸಮಯಕ್ಕೆ ತಕ್ಕ ಹಾಗೆ ಬದಲಾಗಲು ಅವಕ್ಕೆ ಸುಲಭ ಸಾಧ್ಯವಾಗುವುದಿಲ್ಲ. ಹಾಗೆ ನೋಡಿದರೆ, ಇಡೀ ಟ್ರಾವೆಲ್ ಏಜೆನ್ಸಿ ಉದ್ಯಮವೇ ಕಷ್ಟವನ್ನೆದುರಿಸುತ್ತಿದೆ. ಥಾಮಸ್ ಕುಕ್ ಕಂಪೆನಿಗಿಂತ ಸ್ವಲ್ಪಉತ್ತಮವಾಗಿರುವ ಕಂಪೆನಿಗಳೂ ಕೂಡಾ ವಾಸ್ತವದಲ್ಲಿ ಶುದ್ಧಾಂಗವಾದ ಟ್ರಾವೆಲ್ ಏಜೆನ್ಸಿ ಕಂಪೆನಿಗಳಾಗಿ ಉಳಿದಿಲ್ಲ. ಥುಇ ಮತ್ತು ಖಾಸಗಿ ಮಾಲಕತ್ವದ ಸನ್‌ವಿಂಗ್ ಕಂಪೆನಿಳು ವಿಮಾನ ಯಾನ ಹಾಗೂ ಹೋಟೆಲ್ ಸರಣಿಗಳನ್ನು ಹೊಂದಿರುವ ಸಮಗ್ರ ಸರಣಿಯ ಭಾಗವಾಗಿವೆ. ಥಾಮಸ್ ಕುಕ್ ಸಹ ವಿಮಾನ ಯಾನ ಉದ್ಯಮಕ್ಕೆ ವಿಸ್ತರಿಸಿಕೊಂಡು 90 ವಿಮಾನಗಳನ್ನು ಹೊಂದಿದ್ದರೂ ಇತರ ಕಂಪೆನಿಗಳಂತೆ ಅವರು ಈ ವಿಸ್ತರಣೆಯಲ್ಲಿ ಯಶಸ್ವಿಯಾಗಲಿಲ್ಲ. ಥಾಮಸ್ ಕುಕ್ ಕಂಪೆನಿಯ ಕಥೆಯು ಲೇಲ್ಯಾಂಡ್ ಟ್ರಕ್ ಮತ್ತು ರಾಯಲ್ ಏನ್‌ಫೀಲ್ಡ್‌ಮೋಟರ್ ವಾಹನಗಳ ರೂಪದಲ್ಲಿ ಭಾರತದಲ್ಲೂ ಅವತರಿಸುವ ಸಾಧ್ಯತೆ ಇದೆ. ತನ್ನ ಹಣಕಾಸು ಸಮಸ್ಯೆಗಳಿಂದಾಗಿ ಥಾಮಸ್ ಕುಕ್ ಕಂಪೆನಿಯು ತನ್ನ ಭಾರತದ ಶಾಖೆಯನ್ನು 2012ರಲ್ಲೇ ಮಾರಿಬಿಟ್ಟಿತು ಮತ್ತು ವಾರ್ಷಿಕವಾಗಿ ನಿಗದಿತ ಶುಲ್ಕವನ್ನು ಪಾವತಿ ಮಾಡಿ 2024ರ ತನಕ ತನ್ನ ಬ್ರಾಂಡಿನ ಹೆಸರನ್ನು ಬಳಸಿಕೊಳ್ಳಲು ಅವಕಾಶವನ್ನು ಕೊಟ್ಟಿತ್ತು. ಇದೀಗ ಥಾಮಸ್ ಕುಕ್ ಕಂಪೆನಿಯು ಭಾರತದ ಅತಿ ದೊಡ್ಡ ಪ್ರವಾಸೋದ್ಯಮ ಕಂಪೆನಿಗಳಲ್ಲಿ ಒಂದಾಗಿದೆ. ಅದು 2020ರ ನಂತರ ತನ್ನ ಹೆಸರನ್ನು ಬದಲಿಸಿಕೊಳ್ಳಲು ಯೋಜಿಸಿತ್ತು. ಆದರೆ ಈಗ ಅದೇ ಹೆಸರನ್ನು ಮುಂದುವರಿಸಲು ಅಗತ್ಯವಾದ ಹಕ್ಕುಗಳನ್ನು ಪಡೆಯಲು ಮುಂದಾಗಿದೆ. ಬೇಕಿದ್ದರೆ ಅದೇ ಹೆಸರನ್ನು ಅನಂತವಾಗಿ ಮುಂದುವರಿಸಿಕೊಂಡು ಹೋಗಲಿ. ಆದರೆ ಖಂಡಿತಾ ಆ ವ್ಯವಹಾರ ಪದ್ಧತಿಯನ್ನು ಮಾತ್ರ ಮುಂದುವರಿಸುವುದು ಬೇಡ

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top