ಕೊಟ್ಟ ಕುದುರೆ ಏರಲರಿಯದವರು... | Vartha Bharati- ವಾರ್ತಾ ಭಾರತಿ

---

ಕೊಟ್ಟ ಕುದುರೆ ಏರಲರಿಯದವರು...

ಮಾನ್ಯರೇ,

ರಾಜ್ಯ ಸರಕಾರಿ ನೌಕರರು ನಿಯೋಜನೆ ಮೇರೆಗೆ ಇತರ ಕಚೇರಿ, ಶಾಸಕರು ಹಾಗೂ ಸಂಸದರಿಗೆ ಆಪ್ತಸಹಾಯಕರಾಗಿ ನೇಮಕವಾಗುವುದು ವಾಡಿಕೆ. ಆದರೆ, ಶಾಸಕರು ಹಾಗೂ ಸಂಸದರು ಹಾಗೂ ಇತರ ಸರಕಾರಿ ಕಚೇರಿಗಳ ಕ್ಲರಿಕಲ್ ರೀತಿಯ ಹುದ್ದೆಗಳಿಗೆ ಲಿಪಿಕ ಹುದ್ದೆಗಳಲ್ಲದವರು ನಿಯೋಜನೆ ಹೊಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಪಂಚಾಯತ್‌ಗಳಲ್ಲಿ ಕೆಲಸ ಮಾಡದೆ ಕೆಲವರು ನಿಯೋಜನೆ ಮೇರೆಗೆ ಜಿ.ಪಂ. ಹಾಗೂ ಅಧಿಕಾರಿಗಳಿಗೆ ಹಾಗೂ ಶಾಸಕರು ಹಾಗೂ ಸಂಸದರುಗಳಿಗೆ ಆಪ್ತ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ಶಿಕ್ಷಕನನ್ನು ಬೇರೆ ಶಾಲೆಗೆ ನಿಯೋಜನೆ ಮಾಡಿದರೆ ಆತ ಬೋಧನೆಯನ್ನೇ ಮಾಡುತ್ತಾನೆ. ಆತನ ಮೂಲ ವೃತ್ತಿಗೂ ನಿಯೋಜನೆಗೊಂಡ ಕೆಲಸವೂ ಒಂದೇ ಆಗಿರುವುದರಿಂದ ಅದು ತಕರಾರು ಇಲ್ಲದ ನಿಯೋಜನೆ. ಆದರೆ ಪಿಡಿಒಗಳು ತಮ್ಮ ಮೂಲ ಕೆಲಸದ ಸ್ವರೂಪವನ್ನು ಬಿಟ್ಟು ವೃತ್ತಿಗೆ ಸಂಬಂಧಿಸದ ವೃತ್ತಿಗೆ ನಿಯೋಜನೆ ಮೇರೆ ತೆರಳುವುದೇಕೆ? ಅಧಿಕಾರಿ ವರ್ಗದ ಪಿಡಿಒ ಹುದ್ದೆ ಲಿಪಿಕ ಹುದ್ದೆಯಲ್ಲ. ಅದು ಕ್ಲರಿಕಲ್ ಹುದ್ದೆ ಹೇಗಾದೀತು? ಆದರೂ, ಕಚೇರಿಗಳಲ್ಲಿ ಇವರು ಎಫ್‌ಡಿಎ ಸಮಾನಾಂತರವಾಗಿ ಕೆಲಸ ಮಾಡುವುದು ಎಷ್ಟು ಸರಿ? ಇವರು ಪಿಡಿಒ ಆಗಿ ಆಯ್ಕೆಯಾದ ಮೇಲೆ ತರಬೇತಿ ನೀಡಿ ಹುದ್ದೆಗೆ ನಿಯೋಜಿಸಿದ ಮೇಲೆ ಅನ್ಯ ಹುದ್ದೆ ನಿಭಾಯಿಸುವುದು ಮೂಲ ಉದ್ದೇಶಕ್ಕೆ ಧಕ್ಕೆ ತಂದಂತಾಗಿದೆ. ಪಿಡಿಒಗಳು ಪಂಚಾಯತ್‌ಗಳಲ್ಲಿ ಕೆಲಸ ಮಾಡದೇ ಅನ್ಯ ಉದ್ದೇಶಗಳಿಗೆ ಬೇರೆ ಬೇರೆ ಇಲಾಖೆಗಳಿಗೆ ನಿಯೋಜನೆಯ ಮೇಲೆ ತೆರಳುವುದರಿಂದ ಪಿಡಿಒ ಕೊರತೆಯಿಂದ ಪಂಚಾಯತ್‌ಗಳಲ್ಲಿ ಅಧಿಕಾರಿಗಳಿಲ್ಲದೇ ಕೆಲಸವಾಗುತ್ತಿಲ್ಲ. ಕೆಲವು ಪಂಚಾಯತ್‌ಗಳಿಗೆ ಪಿಡಿಒ ಕೊರತೆಯಿಂದ ಜಿ.ಪಂ.ನ ಗುಮಾಸ್ತರನ್ನು ಪಿಡಿಒ ಹುದ್ದೆಗಳಿಗೆ ನಿಯೋಜನೆ ಮಾಡಿರುವ ನಿದರ್ಶನವೂ ಇದೆ. ಪಂಚಾಯತ್‌ಗಳಲ್ಲೇ ಇದ್ದ ಪಿಡಿಒರನ್ನು ಬೇರೆಡೆಗೆ ಕಳುಹಿಸಿ ಗುಮಾಸ್ತರನ್ನು ಪಿಡಿಒ ಹುದ್ದೆಗಳಿಗೆ ನಿಯೋಜನೆ ಮಾಡುವ ಅವಶ್ಯಕತೆಯಾದರೂ ಏನು? ಇದರ ಜೊತೆಗೆ, ಹುದ್ದೆ ಖಾಲಿ ತೋರಿಸಿ ಇಲಾಖೆ ಮತ್ತೆ ನೇಮಕ ಮಾಡಿಕೊಳ್ಳುವ ಅನಿವಾರ್ಯ ಉಂಟಾಗುತ್ತಿದೆ.

ಗ್ರಾಮೀಣ ಆಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಈ ಕುರಿತು ಮೂಲ ಸ್ಥಳಕ್ಕೆ ಕರ್ತವ್ಯದಿಂದ ಬಿಡುಗಡೆ ಹೊಂದಿ ಗ್ರಾಮ ಪಂಚಾಯತ್‌ಗಳಲ್ಲಿ ವರದಿ ಮಾಡಿಕೊಳ್ಳಬೇಕೆಂಬ ಅದೇಶ ಮಾಡಿದ್ದರೂ ಇನ್ನು ಫಲಪ್ರದವಾಗಿಲ್ಲ. ಇದರ ಜೊತೆಗೆ ನಾನು ಕಂಡ ಹಾಗೆ ಸರ್ವೇಯರ್ ಒಬ್ಬರು ಶಾಸಕರಿಗೆ ಕಳೆದ ಹದಿನೈದು ವರ್ಷದಿಂದ ಆಪ್ತ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ಆಯ್ಕೆಯಾದ ಸರ್ವೇಯರ್ ಒಬ್ಬರಿಗೆ ಭೂ ಮಾಪನ ಇಲಾಖೆ ಲಕ್ಷಾಂತರ ರೂ. ಖರ್ಚು ಮಾಡಿ ತರಬೇತಿ ನೀಡುತ್ತದೆ. ಇಲಾಖೆಯಿಂದ ತರಬೇತಿ ನೀಡಿದ ಮೇಲೆ ನೌಕರನು ನಿಯೋಜನೆ ಮೇರೆಗೆ ವೃತ್ತಿಗೆ ಸಂಬಂಧಿಸದ ಕ್ಲರಿಕಲ್ ರೀತಿಯ ಹುದ್ದೆಯನ್ನು ನಿಭಾಯಿಸುವುದು ಎಷ್ಟು ಸರಿ? ರಾಜ್ಯದಲ್ಲಿ ಸರ್ವೇಯರ್‌ಗಳ ಕೊರತೆ ಇದ್ದರೂ ಸರ್ವೇಯರ್ ಒಬ್ಬರು ಕ್ಲರ್ಕ್ ಕೆಲಸ ಮಾಡುತ್ತಿರುವುದು ಸೋಜಿಗದ ಸಂಗತಿ.

ಇದೇ ಸರ್ವೇಯರ್ ಶಾಸಕನ ಆಪ್ತ ಸಹಾಯಕನ ಹುದ್ದೆಯಲ್ಲಿ ಅದೇ ತಾಲೂಕಿನ ತಹಶೀಲ್ದಾರ್ ಅವರಿಗೆ ಶಾಸಕರ ಹೆಸರಿನಲ್ಲಿ ನಿರ್ದೇಶನ ನೀಡುವುದು ಅವೈಜ್ಞಾನಿಕವೇ ಸರಿ.! ಈ ಎರಡು ಪ್ರಕರಣಗಳು ಉದಾಹರಣೆಗೆ ಮಾತ್ರ. ಈ ಬಗೆಯ ನಿಯೋಜನೆಗಳು ರಾಜ್ಯದಲ್ಲಿ ನೂರಾರು ಪ್ರಕರಣಗಳಿವೆ. ಸರಕಾರಗಳು ಇನ್ನಾದರೂ ಲಿಪಿಕ ಹುದ್ದೆಗಳಲ್ಲದವರನ್ನು ಎಸ್‌ಡಿಎ ಹಾಗೂ ಎಫ್‌ಡಿಎ ಸ್ವರೂಪದ ಕೆಲಸಕ್ಕೆ ಬಳಸಿಕೊಳ್ಳುವುದನ್ನು ನಿಲ್ಲಿಸಲಿ. ನೇಮಕಗೊಂಡ ಕೆಲಸದ ಸ್ವರೂಪದಲ್ಲಿಯೇ ಕೆಲಸ ಮಾಡಿದರೆ ಸರಕಾರದ ಇಲಾಖೆಗಳು ತರಬೇತಿ ಕೊಟ್ಟು ನೇಮಕ ಮಾಡಿಕೊಂಡಿದ್ದಕ್ಕೂ ಸಾರ್ಥಕವಾದೀತು ಮತ್ತು ಸರಕಾರವೂ ಲಿಪಿಕ ಹುದ್ದೆಗಳಿಗೆ ಎಸ್‌ಡಿಎ ಹಾಗೂ ಎಫ್‌ಡಿಎಗಳನ್ನೇ ನಿಯೋಜನೆ ಮಾಡಿಕೊಳ್ಳಲಿ

-ಲಕ್ಷ್ಮೀಕಾಂತರಾಜು ಎಂ.ಜಿ., ಮಠಗ್ರಾಮ, ಗುಬ್ಬಿ

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top